ಎರಡು ತಿಂಗಳಿಂದ ಪ್ರಜ್ಞಾಹೀನ: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ನಿಧನ

ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದಿಂದ ಚಿಕ್ಕವಯಸ್ಸಿನಲ್ಲೇ ನಿಧನರಾಗಿದ್ದಾರೆ.
ಗ್ಲೇಸಿ ಕೊರಿಯಾ
ಗ್ಲೇಸಿ ಕೊರಿಯಾ

ಮಕೇ: ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದಿಂದ ಚಿಕ್ಕವಯಸ್ಸಿನಲ್ಲೇ ನಿಧನರಾಗಿದ್ದಾರೆ.

2018 ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟವನ್ನು ಪಡೆದ Ms ಕೊರಿಯಾ ಅವರು ಸೋಮವಾರ ಖಾಸಗಿ ಕ್ಲಿನಿಕ್‌ನಲ್ಲಿ ನಿಧನರಾದರು.

ಕಳೆದ ಎರಡು ತಿಂಗಳಿಂದ ಆಕೆ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಆಕೆಯ ಟಾನ್ಸಿಲ್ ಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಕೆಲವು ದಿನಗಳ ನಂತರ ಆಕೆಗೆ ಭಾರೀ ರಕ್ತಸ್ರಾವವಾಯಿತಲ್ಲದೇ ಏಪ್ರಿಲ್ 4 ರಂದು ಹೃದಯಾಘಾತ ಸಂಭವಿಸಿತು.

ಗ್ಲೇಸಿ ಕೊರಿಯಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊರಿಯಾ ಅವರು ಮಾಡೆಲ್, ಬ್ಯೂಟಿಷಿಯನ್ ಕೂಡ ಆಗಿದ್ದರು.

ಇನ್ ಸ್ಟಾಗ್ರಾಮ್ ನಲ್ಲಿ 56,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ರಿಯೊ ಡಿ ಜನೈರೊದಿಂದ ಈಶಾನ್ಯಕ್ಕೆ 120 ಮೈಲಿ ದೂರದಲ್ಲಿರುವ ಬ್ರೆಜಿಲ್‌ನ ಅಟ್ಲಾಂಟಿಕ್ ಕರಾವಳಿಯಲ್ಲಿರುವ ಮಕೇ ಎಂಬ ನಗರದಲ್ಲಿ ಜನಿಸಿದಳು. ಪೋಸ್ಟ್‌ನ ಪ್ರಕಾರ, ಅವಳು ಚಿಕ್ಕ ವಯಸ್ಸಿನಿಂದಲೂ ಕೆಲಸ ಮಾಡುತ್ತಿರುವ ಕೊರಿಯಾ ನೆರೆಹೊರೆಯ ಬ್ಯೂಟಿ ಸಲೂನ್ ನಲ್ಲಿ ಉಗುರು ಹಸ್ತಾಂಲಕಾರ (Nail Designer) ಕೆಲಸ ಕೂಡ ನಿರ್ವಹಿಸುತ್ತಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com