ಲಿಪ್ ಸ್ಟಿಕ್ ಹಿಡಿಯುತ್ತಿದ್ದ ಕೈಗಳಲ್ಲಿ ಈಗ ಅಟೊಮ್ಯಾಟಿಕ್ ರೈಫಲ್: ಸೇನೆ ಜೊತೆ ಕೈಜೋಡಿಸಿದ ಮಾಜಿ ಮಿಸ್ ಉಕ್ರೇನ್
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾಜಿ ಮಿಸ್ ಉಕ್ರೇನ್, ರೂಪದರ್ಶಿ ಅನಸ್ತೇಸಿಯಾ ಲೆನ್ನಾ ದೇಶದ ರಕ್ಷಣೆಗಾಗಿ ಬಂದೂಕು ಹಿಡಿದಿದ್ದಾರೆ.
Published: 01st March 2022 11:38 AM | Last Updated: 01st March 2022 01:22 PM | A+A A-

ರೂಪದರ್ಶಿ ಅನಸ್ತೇಸಿಯಾ ಲೆನ್ನಾ
ಕೀವ್: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾಜಿ ಮಿಸ್ ಉಕ್ರೇನ್, ರೂಪದರ್ಶಿ ಅನಸ್ತೇಸಿಯಾ ಲೆನ್ನಾ ದೇಶದ ರಕ್ಷಣೆಗಾಗಿ ಬಂದೂಕು ಹಿಡಿದಿದ್ದಾರೆ.
ಇದನ್ನೂ ಓದಿ: ರಷ್ಯಾ ಮೂಲದ ಮಾಲೀಕನ ಹಡಗನ್ನು ಮುಳುಗಿಸಿ ಉಕ್ರೇನ್ ಸೇನೆ ಸೇರಿದ ನಾವಿಕ
2015 ರಲ್ಲಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಉಕ್ರೇನ್ ಅನ್ನು ಪ್ರತಿನಿಧಿಸಿದ್ದ ಅನಸ್ತೇಸಿಯಾ ಲೆನ್ನಾ ಉಕ್ರೇನ್ ಸೇನೆಯ ಜೊತೆ ಕೈಜೋಡಿಸಿದ್ದಾರೆ.
ಇದನ್ನೂ ಓದಿ: ಬಚ್ಚೇ ಸೋ ಜಾ, ನಹಿ ತೊ ಪುತಿನ್ ಆ ಜಾಯೇಗಾ: ಯುದ್ಧಭೂಮಿಯಲಿ ಉಕ್ರೇನ್ ಸೈನಿಕರ ಶೋಕಗೀತೆ!
ತಮ್ಮ ದೇಶದ ಮೇಲೆ ದಾಳಿ ಮಾಡುವವರು ಕೊಲ್ಲಲ್ಪಡುತ್ತಾರೆ! ಎಂದು ಎಚ್ಚರಿಸಿರುವ ರೂಪದರ್ಶಿ ಸೈನಿಕರಿಗೆ ಜನರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ತಮ್ಮ ನಾಯಕ ಅಧ್ಯಕ್ಷ ಝೆಲೆನ್ ಸ್ಕಿಯವರನ್ನು 'ನಿಜವಾದ ಮತ್ತು ಬಲಿಷ್ಠ ನಾಯಕ' ಎಂದು ಲೆನ್ನಾ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ: ಬೇಹುಗಾರಿಕೆ ಆರೋಪ ಹಿನ್ನೆಲೆ 12 ರಷ್ಯನ್ ವಿಶ್ವಸಂಸ್ಥೆ ಸಿಬ್ಬಂದಿಗೆ ಗೇಟ್ ಪಾಸ್