ಉಕ್ರೇನ್ ವಿರುದ್ಧ ಯುದ್ಧ: ರಷ್ಯಾಕ್ಕೆ ಸಂಬಂಧಿಸಿದ ಯುಟ್ಯೂಬ್ ಚಾನೆಲ್ ನಿರ್ಬಂಧಿಸಿದ ಗೂಗಲ್
ಉಕ್ರೇನ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಯುರೋಪಿನಾದ್ಯಂತ ರಷ್ಯಾಕ್ಕೆ ಸಂಬಂಧಿಸಿದಂತ ಯು ಟ್ಯೂಬ್ ಚಾನೆಲ್ ಗಳನ್ನು ನಿರ್ಬಂಧಿಸಿರುವುದಾಗಿ ಗೂಗಲ್ ಸಂಸ್ಥೆ ಮಂಗಳವಾರ ಪ್ರಕಟಿಸಿದೆ.
Published: 01st March 2022 04:26 PM | Last Updated: 01st March 2022 05:47 PM | A+A A-

ಯು ಟ್ಯೂಬ್ ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್ : ಉಕ್ರೇನ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಯುರೋಪಿನಾದ್ಯಂತ ರಷ್ಯಾಕ್ಕೆ ಸಂಬಂಧಿಸಿದಂತ ಯು ಟ್ಯೂಬ್ ಚಾನೆಲ್ ಗಳನ್ನು ನಿರ್ಬಂಧಿಸಿರುವುದಾಗಿ ಗೂಗಲ್ ಸಂಸ್ಥೆ ಮಂಗಳವಾರ ಪ್ರಕಟಿಸಿದೆ.
ಉಕ್ರೇನ್ ವಿರುದ್ಧ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಆರ್ ಟಿ ಬ್ರಾಡ್ ಕಾಸ್ಟರ್, ಸ್ಫುಟ್ನಿಕ್ ನ್ಯೂಸ್ ಸೇರಿದಂತೆ ಆ ದೇಶದ ಎಲ್ಲಾ ಯು ಟೂಬ್ ಚಾನೆಲ್ ಗಳನ್ನು ನಿರ್ಬಂಧಿಸಿರುವುದಾಗಿ ತಿಳಿಸಿದೆ.
ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಕೂಡಲೇ ಜಾರಿಗೆ ಬರುವಂತೆ ರಷ್ಯಾಕ್ಕೆ ಸಂಬಂಧಿಸಿದ ಆರ್ ಟಿ ಮತ್ತು ಸ್ಫುಟಿಕ್ ಯೂ ಟೂಬ್ ಚಾನೆಲ್ ಗಳನ್ನು ಯುರೋಪಿನಾದ್ಯಂತ ನಿರ್ಬಂಧಿಸಲಾಗಿದೆ. ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಳ್ಳಲು ನಮ್ಮ ತಂಡ ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಟ್ವೀಟರ್ ನಲ್ಲಿ ಕಂಪನಿ ಮಾಹಿತಿ ನೀಡಿದೆ.