'ಜಪೋರಿಝಿಯಾ ಅಣುಸ್ಥಾವರದ ಮೇಲೆ ರಷ್ಯಾ ದಾಳಿ: ಸ್ಫೋಟಗೊಂಡರೆ ಚೆರ್ನೊಬಿಲ್ ಗಿಂತ 10 ಪಟ್ಟು ಹೆಚ್ಚು ಪ್ರಮಾಣದ ದುರಂತ'
ಯೂರೋಪಿನ ಅತಿ ದೊಡ್ಡ ಅಣುಸ್ಥಾವರ ಜಪೋರಿಝಿಯಾ ಪರಮಾಣು ಘಟಕದ ಮೇಲೆ ರಷ್ಯಾ ಸೇನೆ ದಾಳಿ ಮಾಡಿದ್ದು, ಒಂದು ವೇಳೆ ಈ ಘಟಕ ಸ್ಫೋಟಗೊಂಡರೆ ಚೆರ್ನೊಬಿಲ್ ಅಣು ದುರಂತಕ್ಕಿಂತ 10 ಪಟ್ಟು ಅಧಿಕ ಭಾರಿ ಪ್ರಮಾಣದ ದುರಂತ ಸಂಭವಿಸಲಿದೆ ಎಂದು ಉಕ್ರೇನ್ ಎಚ್ಚರಿಕೆ ನೀಡಿದೆ.
Published: 04th March 2022 12:20 PM | Last Updated: 04th March 2022 01:53 PM | A+A A-

ಉಕ್ರೇನ್ ಅಣು ಸ್ಥಾವರದ ಮೇಲೆ ದಾಳಿ
ಕೀವ್: ಯೂರೋಪಿನ ಅತಿ ದೊಡ್ಡ ಅಣುಸ್ಥಾವರ ಜಪೋರಿಝಿಯಾ ಪರಮಾಣು ಘಟಕದ ಮೇಲೆ ರಷ್ಯಾ ಸೇನೆ ದಾಳಿ ಮಾಡಿದ್ದು, ಒಂದು ವೇಳೆ ಈ ಘಟಕ ಸ್ಫೋಟಗೊಂಡರೆ ಚೆರ್ನೊಬಿಲ್ ಅಣು ದುರಂತಕ್ಕಿಂತ 10 ಪಟ್ಟು ಅಧಿಕ ಭಾರಿ ಪ್ರಮಾಣದ ದುರಂತ ಸಂಭವಿಸಲಿದೆ ಎಂದು ಉಕ್ರೇನ್ ಎಚ್ಚರಿಕೆ ನೀಡಿದೆ.
ನಿನ್ನೆ ರಷ್ಯಾ ಸೇನೆ ನಡೆಸಿದ ಬೃಹತ್ ಪ್ರಮಾಣದ ಶೆಲ್ಲಿಂಗ್ ಮತ್ತು ಕ್ಷಿಪಣಿ ದಾಳಿಯಲ್ಲಿ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಜಪೋರಿಝಿಯಾ ಪರಮಾಣು ಘಟಕಕ್ಕೆ ಹಾನಿಯಾಗಿತ್ತು, ಈ ವೇಳೆ ನಡೆದ ಸ್ಫೋಟದಿಂದಾಗಿ ಭಾರಿ ಪ್ರಮಾಣ ಅಗ್ನಿ ಅವಘಡ ಸಂಭವಿಸಿತ್ತು. ಇದು ಭಾರಿ ಆತಂಕಕ್ಕೆ ಕಾರಣವಾಗಿದ್ದು, ಬೆಂಕಿ ವ್ಯಾಪಿಸಿ ಪರಮಾಣು ಘಟಕ ಸ್ಫೋಟಗೊಂಡರೆ ಅತೀ ದೊಡ್ಡ ವಿನಾಶ ಎದುರಾಗಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಉಕ್ರೇನ್ ಸಚಿವ ಡಿಮಿಟ್ರೋ ಕುಲೆಬಾ ಅವರು, "ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪೋರಿಝಿಯಾ ಎನ್ಪಿಪಿ ಮೇಲೆ ರಷ್ಯಾದ ಸೈನ್ಯವು ಎಲ್ಲಾ ಕಡೆಯಿಂದ ಗುಂಡು ಹಾರಿಸುತ್ತಿದೆ. ಬೆಂಕಿ ಈಗಾಗಲೇ ಭುಗಿಲೆದ್ದಿದೆ. ಅದು ಸ್ಫೋಟಿಸಿದರೆ, ಅದು ಚೋರ್ನೋಬಿಲ್ ದುರಂತಕ್ಕಿಂತ 10 ಪಟ್ಟು ದೊಡ್ಡದಾಗಿರುತ್ತದೆ! ರಷ್ಯನ್ನರು ತಕ್ಷಣ ಬೆಂಕಿಯನ್ನು ನಿಲ್ಲಿಸಬೇಕು, ಅಗ್ನಿಶಾಮಕ ದಳಗಳನ್ನು ಅನುಮತಿಸಬೇಕು, ಭದ್ರತಾ ವಲಯವನ್ನು ಸ್ಥಾಪಿಸಿ! (sic)," ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಯೂರೋಪ್ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯಾ ಭಾರೀ ದಾಳಿ!
ರಷ್ಯಾದ ಪಡೆಗಳ ದಾಳಿಯು ಬೆಂಕಿಗೆ ಕಾರಣವಾಯಿತು ಎಂದು ಉಕ್ರೇನ್ ಪವರ್ ಹಬ್ನ ಹತ್ತಿರದ ಪಟ್ಟಣವಾದ ಎನರ್ಗೋಡರ್ನ ಮೇಯರ್ ಶುಕ್ರವಾರ ಹೇಳಿದರು. ಉಕ್ರೇನಿಯನ್ ಅಧಿಕಾರಿಗಳು ರಷ್ಯಾದ ಪಡೆಗಳು ಘಚಕವನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳನ್ನು ಹೆಚ್ಚಿಸುತ್ತಿವೆ ಮತ್ತು ಟ್ಯಾಂಕ್ಗಳೊಂದಿಗೆ ಪಟ್ಟಣವನ್ನು ಪ್ರವೇಶಿಸಿವೆ ಎಂದು ವರದಿ ಮಾಡಿದೆ.