ರಷ್ಯಾ-ಉಕ್ರೇನ್ ಯುದ್ಧ: ಉಕ್ರೇನ್ ಬಂದರು ಮಾರಿಯುಪೋಲ್ ಮೇಲೆ ರಷ್ಯಾದ ಪಡೆಗಳಿಂದ ನಿರ್ಬಂಧ

ಉಕ್ರೇನ್‌ನ ಆಯಕಟ್ಟಿನ ಬಂದರು ನಗರವಾದ ಮಾರಿಯುಪೋಲ್ ರಷ್ಯಾದ ಪಡೆಗಳ "ನಿರ್ದಯ" ದಾಳಿಯ ದಿನಗಳ ನಂತರ "ದಿಗ್ಬಂಧನ" ಎದುರಿಸುತ್ತಿದೆ ಎಂದು ಅಲ್ಲಿನ ಮೇಯರ್ ತಿಳಿಸಿದ್ದು, ಮಾನವೀಯ ಕಾರಿಡಾರ್ ಸ್ಥಾಪನೆಗೆ ಕರೆ ನೀಡಿದ್ದಾರೆ.

Published: 05th March 2022 09:44 AM  |   Last Updated: 05th March 2022 01:19 PM   |  A+A-


This image made from a video released by Zaporizhzhia nuclear power plant shows bright flaring object landing in grounds of the nuclear plant in Enerhodar.

ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರ

The New Indian Express

ಕೀವ್: ಉಕ್ರೇನ್‌ನ ಆಯಕಟ್ಟಿನ ಬಂದರು ನಗರವಾದ ಮಾರಿಯುಪೋಲ್ ರಷ್ಯಾದ ಪಡೆಗಳ "ನಿರ್ದಯ" ದಾಳಿಯ ದಿನಗಳ ನಂತರ "ದಿಗ್ಬಂಧನ" ಎದುರಿಸುತ್ತಿದೆ ಎಂದು ಅಲ್ಲಿನ ಮೇಯರ್ ತಿಳಿಸಿದ್ದು, ಮಾನವೀಯ ಕಾರಿಡಾರ್ ಸ್ಥಾಪನೆಗೆ ಕರೆ ನೀಡಿದ್ದಾರೆ.

4,50,000 ಜನರಿರುವ ನಗರವು ಅಜೋವ್ ಸಮುದ್ರ ತೀರದಲ್ಲಿದ್ದು ಶೆಲ್‌ಗಳ ದಾಳಿಗೆ ಒಳಗಾಗಿದೆ, ನೀರು, ವಿದ್ಯುತ್ ಇಲ್ಲದೆ ಸಂಪರ್ಕ ಕಡಿತಗೊಂಡಿದೆ.ಸದ್ಯ ಯುದ್ಧದಿಂದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾದ ಎಲ್ಲಾ ದಾರಿಗಳನ್ನು ಹುಡುಕುತ್ತಿದ್ದೇವೆ. ಮಾರಿಯುಪೋಲ್ ಮೇಲೆ ವಿಧಿಸಿರುವ ದಿಗ್ಭಂದನವನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮೇಯರ್ ಅವರ ಟೆಲಿಗ್ರಾಮ ಅಕೌಂಟ್ ನಲ್ಲಿ ಪೋಸ್ಟ್ ಮಾಡಿರುವ ಸಂದೇಶದಲ್ಲಿ ವಾಡಿಮ್ ಬಾಯ್ಚೆಂಕೊ ತಿಳಿಸಿದ್ದಾರೆ.

ಕದನ ವಿರಾಮವನ್ನು ಸ್ಥಾಪಿಸುವುದು ನಮ್ಮ ಆದ್ಯತೆಯಾಗಿದೆ, ಇದರಿಂದಾಗಿ ನಾವು ಪ್ರಮುಖ ಮೂಲಸೌಕರ್ಯಗಳನ್ನು ಪುನಃಸ್ಥಾಪಿಸಬಹುದು. ನಗರಕ್ಕೆ ಆಹಾರ ಮತ್ತು ಔಷಧವನ್ನು ತರಲು ಮಾನವೀಯ ಕಾರಿಡಾರ್ ಅನ್ನು ಸ್ಥಾಪಿಸಬಹುದು ಎಂದು ಹೇಳಿದರು.

ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ: ಸುಳ್ಳು ಸುದ್ದಿ ಹಂಚಿಕೊಂಡರೆ 15 ವರ್ಷ ಜೈಲು ಶಿಕ್ಷೆ; ರಷ್ಯಾ ಸಂಸತ್ ನಲ್ಲಿ ಹೊಸ ಮಸೂದೆ ಅಂಗೀಕಾರ

ಇದಕ್ಕೂ ಮೊದಲು, ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ಮಾಡಿದ ನಂತರ ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾ ಪಡೆ ಮೇಲೆ ಆಕ್ರಮಣ ಮುಂದುವರಿಸಿವೆ. ಉಕ್ರೇನ್ ಪ್ರಕಾರ, ಕಳೆದ ಫೆಬ್ರುವರಿ 24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಉಕ್ರೇನ್ ಮೇಲೆ ಮಿಲಿಟರಿ ಆಕ್ರಮಣ ಆರಂಭಿಸಿದ  ನಂತರ ಸಾವಿರಾರು ನಾಗರಿಕರು ಮೃತಪಟ್ಟಿದ್ದಾರೆ.

ಉಕ್ರೇನ್‌ನ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದ ನಂತರ ಒಂದು ವಾರದಲ್ಲಿ ರಷ್ಯಾ 500 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ. ರಷ್ಯಾ ಪ್ರತಿದಿನ ಸುಮಾರು ಎರಡು ಡಜನ್ ನಷ್ಟು ಕ್ಷಿಪಣಿಗಳನ್ನು ಉಡಾಯಿಸುತ್ತಿದೆ ಎಂದು ಪೆಂಟಗನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Stay up to date on all the latest ವಿದೇಶ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp