ಉಕ್ರೇನ್ ವಿರುದ್ಧ ಯುದ್ಧ: ರಷ್ಯಾದಲ್ಲಿ ನೆಟ್ ಫ್ಲಿಕ್ಸ್, ಟಿಕ್ ಟಾಕ್ ಸೇವೆ ಸ್ಥಗಿತ
ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಷ್ಯಾಕ್ಕೆ ಇನ್ನೂ ಹೊಡೆತಗಳು ಬೀಳುತ್ತಲೇ ಇವೆ. ನೆಟ್ ಫ್ಲಿಕ್ಸ್ ಮತ್ತು ಟಿಕ್ ಟಾಕ್ ರಷ್ಯಾದಲ್ಲಿ ತಮ್ಮ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿವೆ.
Published: 07th March 2022 01:08 PM | Last Updated: 07th March 2022 01:13 PM | A+A A-

ಟಿಕ್ ಟಾಕ್, ನೆಟ್ ಫ್ಲಿಕ್ಸ್ ಸಾಂದರ್ಭಿಕ ಚಿತ್ರ
ಮಾಸ್ಕೋ: ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಷ್ಯಾಕ್ಕೆ ಇನ್ನೂ ಹೊಡೆತಗಳು ಬೀಳುತ್ತಲೇ ಇವೆ. ನೆಟ್ ಫ್ಲಿಕ್ಸ್ ಮತ್ತು ಟಿಕ್ ಟಾಕ್ ರಷ್ಯಾದಲ್ಲಿ ತಮ್ಮ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿವೆ.
ಉಕ್ರೇನ್ ಯುದ್ದದ ಹಿನ್ನೆಲೆಯಲ್ಲಿ ನಾವು ರಷ್ಯಾದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇವೆ. ಈ ನಿರ್ಧಾರ ನಿರ್ಬಂಧಗಳ ಭಾಗವಾಗಿದೆ ಎಂದು ನೆಟ್ ಫ್ಲಿಕ್ಸ್ ಹೇಳಿದೆ. ಇತ್ತೀಚಿಗೆ ನೆಟ್ ಫ್ಲಿಕ್ಸ್ ರಷ್ಯಾದ ನಕಲಿ ಕಾನೂನನ್ನು ವಿರೋಧಿಸುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ರಷ್ಯಾದಲ್ಲಿ ಬ್ಯಾಂಕ್ ಸೇವೆ ಸ್ಥಗಿತಗೊಳಿಸಿದ ಅಮೆರಿಕದ ವೀಸಾ, ಮಾಸ್ಟರ್ಕಾರ್ಡ್
ನೆಟ್ ಫ್ಲಿಕ್ಸ್ ರಷ್ಯಾದಲ್ಲಿ ಒಂದು ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಹೊಸ ಬಳಕೆದಾರರಿಗೆ ಅನುಮತಿಗಳನ್ನು ನಿಷೇಧಿಸಿದೆ. ಆದರೆ, ಈಗಾಗಲೇ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಸೇವೆ ನೀಡುವ ಬಗ್ಗೆ ಸ್ಪಷ್ಟಪಡಿಸಿಲ್ಲ.
ಟಿಕ್ ಟಾಕ್ ರಷ್ಯಾದಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ಇತರ ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ. ಉಕ್ರೇನ್ ನ ದಾಳಿಯ ಸಂದರ್ಭದಲ್ಲಿ ನಕಲಿ ಸುದ್ದಿ ಪ್ರಸಾರದ ಹೆಸರಿನಲ್ಲಿ ರಷ್ಯಾ ಬಲವಂತದ ಕಾನೂನುಗಳು ಮತ್ತು ಕಠಿಣ ಶಿಕ್ಷೆಗಳನ್ನು ವಿಧಿಸಿತ್ತು. ಇದರ ವಿರುದ್ಧ ಪ್ರತಿಭಟನೆ ಭಾಗವಾಗಿ ಟಿಕ್ ಟಾಕ್ ಈ ನಿರ್ಧಾರ ತೆಗೆದುಕೊಂಡಿದೆ.