ಯುದ್ಧದಲ್ಲಿ ದೌರ್ಜನ್ಯ ಎಸಗಿದ ಪ್ರತಿಯೊಬ್ಬರನ್ನು ಶಿಕ್ಷಿಸುತ್ತೇನೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಎಚ್ಚರಿಕೆ
ನಮ್ಮ ನಗರ, ಜನರ ಮೇಲೆ ಶೆಲ್ ದಾಳಿ ನಡೆಯುತ್ತಿದೆ.ನಮ್ಮ ಮೇಲೆ ದೌರ್ಜನ್ಯವೆಸಗಿದವರನ್ನು ಸುಮ್ಮನೆ ಬಿಡಲ್ಲ. ಪ್ರತಿಯೊಬ್ಬರನ್ನೂ ನಾವು ಶಿಕ್ಷಿಸುತ್ತೇವೆಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಎಚ್ಚರಿಸಿದ್ದಾರೆ.
Published: 07th March 2022 08:13 AM | Last Updated: 07th March 2022 02:18 PM | A+A A-

ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ
ಕೀವ್: ನಮ್ಮ ನಗರ, ಜನರ ಮೇಲೆ ಶೆಲ್ ದಾಳಿ ನಡೆಯುತ್ತಿದೆ.ನಮ್ಮ ಮೇಲೆ ದೌರ್ಜನ್ಯವೆಸಗಿದವರನ್ನು ಸುಮ್ಮನೆ ಬಿಡಲ್ಲ. ಪ್ರತಿಯೊಬ್ಬರನ್ನೂ ನಾವು ಶಿಕ್ಷಿಸುತ್ತೇವೆಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಎಚ್ಚರಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಕೈಗೊಂಡಿರುವ ಹಿನ್ನೆಲೆ ರಷ್ಯಾಗೆ ಎಚ್ಚರಿಕೆ ನೀಡಿರುವ ಅವರು, ನಮ್ಮ ನಗರ, ಜನರ ಮೇಲೆ ಶೆಲ್ ದಾಳಿ ನಡೆಯುತ್ತಿದೆ. ನಮ್ಮ ನೆಲದ ಮೇಲೆ ಕ್ಷಿಪಣಿಗಳ ದಾಳಿ ಮಾಡಲಾಗುತ್ತಿದೆ. ಈ ರೀತಿ ಮಾಡಿದ ನೀವು ಶಾಂತವಾಗಿ ಇರುವುದಕ್ಕೆ ಆಗಲ್ಲ. ನಮ್ಮ ಮೇಲೆ ದಾಳಿಗೆ ಆದೇಶ ಕೊಟ್ಟವರು ಶಾಂತವಾಗಿರಲ್ಲ. ಅವರಿಗೆ ಈ ನೆಲದ ಮೇಲೆ ಸಮಾಧಿಗಳು ಮಾತ್ರ ಸಿಗುತ್ತೆ. ಶಾಂತಿ, ನೆಮ್ಮದಿ ಸಿಗುವುದಿಲ್ಲ. ನಮ್ಮ ಮೇಲೆ ದೌರ್ಜನ್ಯವೆಸಗಿದವರನ್ನು ಸುಮ್ಮನೆ ಬಿಡಲ್ಲ. ಪ್ರತಿಯೊಬ್ಬರನ್ನೂ ನಾವು ಶಿಕ್ಷಿಸುತ್ತೇವೆಂದು ಹೇಳಿದ್ದಾರೆ.
ರಷ್ಯಾ ಬಾಂಬ್ ದಾಳಿ ಮಾಡುವುದಾಗಿ ಘೋಷಿಸಿದೆ. ಉಕ್ರೇನ್‌ನಲ್ಲಿರುವ ರಕ್ಷಣಾ ಉದ್ಯಮಗಳ ಮೇಲೆ ದಾಳಿ ನಡೆಸಲಾಗಿದೆ. ಈ ಉದ್ಯಮಗಳು ಉಕ್ರೇನ್‌ನ ನಗರ ಪ್ರದೇಶದಲ್ಲಿವೆ. ನಗರ ಪ್ರದೇಶದಲ್ಲಿ ಸಾಕಷ್ಟು ನಾಗರಿಕರು ಇರುತ್ತಾರೆ. ನಾಗರಿಕರ ಮೇಲೆ ದಾಳಿಯಾದರೆ ಅದು ಕೊಲೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ನಗರಗಳಲ್ಲಿ ರಷ್ಯಾ ಸೇನೆಯಿಂದ ಶೆಲ್ ದಾಳಿ ನಡೆಸಲಾಗಿದೆ. ಉಕ್ರೇನ್‌ನ ಮಧ್ಯ, ಉತ್ತರ, ದಕ್ಷಿಣದ ನಗರಗಳಲ್ಲಿ ದಾಳಿ ನಡೆದಿದೆ ಎಂದು ಉಕ್ರೇನ್ ಮಾಹಿತಿ ನೀಡಿದೆ.
ಇದನ್ನೂ ಓದಿ: ನಾನು ಕೀವ್ನಲ್ಲೇ ಇದ್ದೇನೆ, ಪಲಾಯನ ಮಾಡಿಲ್ಲ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಈ ನಡುವ ಉಕ್ರೇನ್‌ನ ಅಣು ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ದಾಳಿ ನಡೆಸಿದ್ದು, ಅಣು ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಿಂದ ಪ್ರಮಾದ ಉಂಟಾಗಿದೆ. ಹೀಗಾಗಿ ಅಣು ವಿದ್ಯುತ್ ಸ್ಥಾವರಗಳನ್ನ ರಕ್ಷಿಸಲಾಗುವುದು ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಹೇಳಿದ್ದಾರೆ. ರಷ್ಯಾ, ಉಕ್ರೇನ್ ಜತೆ ಮಾತುಕತೆ ಬಳಿಕ ಮ್ಯಾಕ್ರನ್ ಈ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಎರಡು ಸ್ಥಾವರಗಳನ್ನು ರಷ್ಯಾ ಕೈವಶ ಮಾಡಿಕೊಂಡಿದೆ. ಚೆರ್ನೋಬಿಲ್, ಝಫೋರಿಝೀಯಾ ಸ್ಥಾವರಗಳು ವಶಕ್ಕೆ ಪಡೆದುಕೊಂಡಿದೆ.
ಯುದ್ಧವನ್ನು ನಾನಾ ರಾಷ್ಟ್ರಗಳು ಖಂಡಿಸಿದ್ದು, ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದ ಹಿನ್ನೆಲೆ, ರಷ್ಯಾದಲ್ಲಿ ನೆಟ್‌ಫ್ಲಿಕ್ಸ್ ಸೇವೆಗಳನ್ನ ರದ್ದು ಮಾಡಲಾಗಿದೆ.
ಈ ಬಗ್ಗೆ ನೆಟ್‌ಫ್ಲಿಕ್ಸ್ ಕಂಪನಿಯ ವಕ್ತಾರರಿಂದ ಮಾಹಿತಿ ಲಭಿಸಿದೆ. ಅಲ್ಲದೆ, ರಷ್ಯಾದಲ್ಲಿ ಟಿಕ್‌ಟಾಕ್ ಲೈವ್ ಸ್ಟ್ರೀಮಿಂಗ್ ಕೂಡ ಬ್ಯಾನ್ ಆಗಿದೆ. ಅಮೆರಿಕ ಎಕ್ಸ್‌ಪ್ರೆಸ್‌ನ ತನ್ನ ಎಲ್ಲಾ ಸೇವೆ ಸ್ಥಗಿತಗೊಳಿಸಿದೆ. ರಷ್ಯಾ, ಬೆಲಾರಸ್‌ನಲ್ಲಿ ಎಲ್ಲಾ ಸೇವೆಗಳು ಸ್ಥಗಿತ ಆಗಿದೆ.
ಉಕ್ರೇನ್-ರಷ್ಯಾ ಯುದ್ಧ: ಪಲಾಯನ ವೇಳೆ ತಾಯಿ, ಮಕ್ಕಳ ಸಾವು
ಕೈವ್ ಬಳಿಯ ಇರ್ಪಿನ್ ಪಟ್ಟಣದಿಂದ ನಿವಾಸಿಗಳು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಸೋಮವಾರ ತಾಯಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಟ ಮೂವರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್: ಖಾರ್ಕಿವ್ ನಗರದ ನ್ಯೂಕ್ಲಿಯರ್ ಸಂಶೋಧನಾ ಕೇಂದ್ರದ ಮೇಲೆ ರಷ್ಯಾ ಶೆಲ್ ದಾಳಿ
ರಾಜಧಾನಿ ಕೈವ್ ಮೇಲೆ ಸಂಪೂರ್ಣ ದಾಳಿ ನಡೆಸಲು ರಷ್ಯಾ ಸಿದ್ಧತೆ ನಡೆಸುತ್ತಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಹಾಗಾಗಿ ಉಕ್ರೇನಿಯನ್ನರು ಮತ್ತು ವಿದೇಶಿಯರು ಕ್ರೂರ ಯುದ್ಧದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಮಾಸ್ಕೋದ ಬೇಡಿಕೆಗಳನ್ನು ಈಡೇರಿಸುವವರೆಗೆ ರಷ್ಯಾದ ಮಿಲಿಟರಿ ಕ್ರಮ ನಿಲ್ಲುವುದಿಲ್ಲ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಭಯಭೀತರಾದ ನೂರಾರು ಜನರು ಕಾಂಕ್ರೀಟ್ ಮತ್ತು ಲೋಹದ ಅವಶೇಷಗಳ ಮೂಲಕ ಕಾಲ್ನಡಿಗೆಯಲ್ಲಿ ಇರ್ಪಿನ್ ನದಿಯನ್ನು ದಾಟಲು ಪ್ರಯತ್ನಿಸಿದರು ಎಂದು ವರದಿಯಾಗಿದೆ
ಕೈವ್ ನ ಹೊರವಲಯದಲ್ಲಿ ಹಿಡಿತ ಸಾಧಿಸಲು ತಮ್ಮ ರಷ್ಯಾದ ಪಡೆಗಳಿಗೆ ಇರ್ಪಿನ್ ನ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದು ಅತ್ಯಗತ್ಯ. ರಷ್ಯನ್ನರ ಮುಂದಿನ ಹಂತವೆಂದರೆ, ಇರ್ಪಿನ್ ನ ದಕ್ಷಿಣಕ್ಕೆ ಚಲಿಸುವ ಝೈಟೊಮಿರ್ ಹೆದ್ದಾರಿ ಎಂದು ಕರೆಯಲ್ಪಡುವ, ನಿಷ್ಕ್ರಿಯಗೊಂಡ ಇ40 ರಸ್ತೆಗೆ ಹೋಗುವುದು ಮತ್ತು ನಂತರ ಪಶ್ಚಿಮದಿಂದ ಕೈವ್ ಅನ್ನು ಸುತ್ತುವರಿಯುವ ಅವರ ಪ್ರಯತ್ನಗಳನ್ನು ಮುಂದುವರಿಸುವುದು ಎಂದು ವರದಿ ಮಾಡಿದೆ.