ರಷ್ಯಾ ತೈಲ ನಿಷೇಧ ಮಾಡಿ ಇಕ್ಕಟ್ಟಿಗೆ ಸಿಲುಕಿದ ಅಮೆರಿಕ: ಅಧ್ಯಕ್ಷ ಬೈಡೆನ್ ಫೋನ್ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ!!
ಉಕ್ರೇನ್ ಮೇಲೆ ದಾಳಿ ಮಾಡಿದ್ದ ರಷ್ಯಾ ಮೇಲೆ ನಿರ್ಬಂಧ ಹೇರಿದ್ದ ಅಮೆರಿಕ ಇದೀಗ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದ್ದು, ತೈಲ ಬೇಡಿಕೆಗಾಗಿ ಮನವಿ ಮಾಡಲು ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮಾಡಿದ್ದ ಕರೆಯನ್ನೇ ಸೌದಿ ಅರೇಬಿಯಾ, ಯುಎಇ ದೇಶಗಳ ರಾಜರು ಕ್ಯಾರೆ ಎಂದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.
Published: 10th March 2022 04:28 PM | Last Updated: 10th March 2022 04:28 PM | A+A A-

ಸಂಗ್ರಹ ಚಿತ್ರ
ವಾಷಿಂಗ್ಟನ್: ಉಕ್ರೇನ್ ಮೇಲೆ ದಾಳಿ ಮಾಡಿದ್ದ ರಷ್ಯಾ ಮೇಲೆ ನಿರ್ಬಂಧ ಹೇರಿದ್ದ ಅಮೆರಿಕ ಇದೀಗ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದ್ದು, ತೈಲ ಬೇಡಿಕೆಗಾಗಿ ಮನವಿ ಮಾಡಲು ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮಾಡಿದ್ದ ಕರೆಯನ್ನೇ ಸೌದಿ ಅರೇಬಿಯಾ, ಯುಎಇ ದೇಶಗಳ ರಾಜರು ಕ್ಯಾರೆ ಎಂದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ಉಕ್ರೇನ್ ಪರ ನಿರ್ಣಯದಿಂದ ದೂರ: ರಷ್ಯಾ ಕುರಿತು ಭಾರತದ ಪರಿಸ್ಥಿತಿ ಬಗ್ಗೆ ಯುಎಸ್ ಶಾಸಕರನ್ನು ಸಮಾಧಾನಪಡಿಸುವ ಯತ್ನ
ರಷ್ಯಾದಿಂದ ಆಮದಾಗುತ್ತಿದ್ದ ತೈಲಕ್ಕೆ ಅಮೆರಿಕ ನಿರ್ಬಂಧ ವಿಧಿಸಿದ್ದು, ಇದರ ನಡುವೆಯೇ ತೈಲ ಶ್ರೀಮಂತ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಒಕ್ಕೂಟ (ಯುಎಇ) ಸಂಪರ್ಕಿಸಲು ಅಮೆರಿಕ ಮುಂದಾಗಿದೆ. ಆದರೆ ಅಮೆರಿಕ ಅಧ್ಯಕ್ಷರ ಫೋನ್ ಕರೆಗೂ ಈ ಎರಡೂ ದೇಶಗಳ ರಾಜರು ಕ್ಯಾರೆ ಎಂದಿಲ್ಲ. ಮೂಲಗಳ ಪ್ರಕಾರ ಸೌದಿ ಅರೇಬಿಯಾದ ರಾಜ ಮಹಮ್ಮದ್ ಬಿನ್ ಸಲ್ಮಾನ್ ಮತ್ತು ಸಂಯುಕ್ತ ಅರಬ್ ಒಕ್ಕೂಟದ ಶೇಖ್ ಮಹಮ್ಮದ್ ಬಿನ್ ಜಯಾದ್ ಅಲ್ ನಹ್ಯಾನ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಫೋನ್ ಕರೆಯಲ್ಲಿ ಮಾತನಾಡಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಮರಿಯುಪೋಲ್ನಲ್ಲಿ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ವೈಮಾನಿಕ ದಾಳಿ: 17ಕ್ಕೂ ಹೆಚ್ಚು ಮಂದಿಗೆ ಗಾಯ
ರಷ್ಯಾದಿಂದ ಆಮದಾಗುತ್ತಿದ್ದ ತೈಲಕ್ಕೆ ನಿರ್ಬಂಧ ವಿಧಿಸಿದ ಅಮೆರಿಕವು ತೈಲ ಶ್ರೀಮಂತ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ ಅನ್ನು ಭೇಟಿಯಾಗಲು ಯೋಜನೆ ರೂಪಿಸಿತ್ತು. ಆದರೆ ಸೌದಿ ಮತ್ತು ಯುಎಇ ಅಧಿಕಾರಿಗಳು ಬೈಡೆನ್ ಆಡಳಿತದೊಂದಿಗೆ ಸಂವಾದ ನಡೆಸಲು ನಿರಾಕರಿಸಿದ್ದಾರೆ. ಕೆಲವು ನಿರೀಕ್ಷೆಗಳನ್ನಿಟ್ಟುಕೊಂಡು ಫೋನ್ ಕರೆ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಸೌದಿ ಮತ್ತು ಯುಎಇ ನಿಲುವಿನ ಬಗ್ಗೆ ಅಮೆರಿಕ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಸೌದಿ ರಾಜರ ಈ ಪ್ರತಿಕ್ರಿಯೆ ಕಾರಣವಾಯ್ತೆ ಹಳೇ ಕೋಪ
ಇನ್ನು 2018ರಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಆರೋಪವನ್ನು ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮೇಲೆ ಅಮೆರಿಕ ಹೊರಿಸಿತ್ತು. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಸಹಿ ಹಾಕಿದ್ದ ಒಪ್ಪಂದವನ್ನು ರದ್ದುಪಡಿಸುವ ಮೂಲಕ ಸೌದಿ ಅರೆಬಿಯಾಕ್ಕೆ ಶಸ್ತ್ರಾಸ್ತ್ರಗಳ ಮಾರಾಟವನ್ನು ಬೈಡೆನ್ ಆಡಳಿತ ಸ್ಥಗಿತಗೊಳಿಸಿತ್ತು. ಇರಾನ್ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸುವ ಯುಎಸ್ ಅಧ್ಯಕ್ಷರ ಪ್ರಯತ್ನ ಮತ್ತು ಆಸ್ಟ್ರಿಯಾದ ವಿಯೆನ್ನಾದ ಮಾತುಕತೆ ನಡೆಸುವುದು ಸೌದಿಯನ್ನು ಕೆರಳಿಸಿತ್ತು.
ಇದನ್ನೂ ಓದಿ: ಶೆರ್ನೊಬಿಲ್ ಪರಮಾಣು ಸ್ಥಾವರ ಸಿಬ್ಬಂದಿಗಳ ದುಸ್ಥಿತಿ: ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಕೇಂದ್ರದ ನೆರವು ಕೋರಿದ ಉಕ್ರೇನ್
ಅಲ್ಲದೆ ಸುನ್ನಿ ಮುಸ್ಲಿಂ ಸೌದಿ ಅರೇಬಿಯಾ ಮತ್ತು ಅದರ ಶಿಯಾ ಪ್ರತಿಸ್ಪರ್ಧಿ ಇರಾನ್ ಎರಡರೊಂದಿಗೂ ರಷ್ಯಾ ಸೌಹಾರ್ದ ಸಂಬಂಧವನ್ನು ಹೊಂದಿದೆ. ಜೊತೆಗೆ ಸಿರಿಯಾದಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಿದ ವಾಷಿಂಗ್ಟನ್ ವಿರುದ್ಧ ಇಡೀ ಮಧ್ಯಪ್ರಾಚ್ಯದೊಂದಿಗೆ ಅಧ್ಯಕ್ಷ ಪುಟಿನ್ ನಾಗರಿಕ ಯುದ್ಧದಲ್ಲಿ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಬೆಂಬಲಕ್ಕೆ ನಿಂತಿದ್ದರು.
ಇದನ್ನೂ ಓದಿ: 100 ವರ್ಷಗಳಲ್ಲಿ ಇದೇ ಮೊದಲು: ರಷ್ಯಾದಿಂದ ಎಲ್ಲ ಸಿಬ್ಬಂದಿಗಳ ವಾಪಸ್ ಕರೆದ 'ನ್ಯೂಯಾರ್ಕ್ ಟೈಮ್ಸ್'!!
ರಷ್ಯಾದ ತೈಲ ಆಮದು ರದ್ದುಗೊಳಿಸುತ್ತಿದ್ದಂತೆ ಅಮೆರಿಕವು ತೈಲ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾ ಮತ್ತು ಯುಎಇನೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಹರಸಾಹಸಪಟ್ಟಿದೆ. ಆದರೆ ಯುಎಇ ವಿದೇಶಾಂಗ ಸಚಿವಾಲಯವು ಕರೆಯನ್ನು ಮರು ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.