
ಶೇನ್ ವಾರ್ನ್
ಮೇಲ್ಬರ್ನ್: ಇತ್ತೀಚಿಗೆ ನಿಧನರಾದ ಆಸ್ಟ್ರೇಲಿಯಾದ ಸ್ಪೀನ್ ಮಾಂತ್ರಿಕ ಶೇನ್ ವಾರ್ನ್ ಅವರ ಪಾರ್ಥಿವ ಶರೀರ ಗುರುವಾರ ಅವರ ತವರು ನಗರ ಮೆಲ್ಬರ್ನ್ ಗೆ ಆಗಮಿಸಿತು.
ಆಸ್ಟ್ರೇಲಿಯಾ ಧ್ವಜ ಹೊದಿಸಿದ ಪಾರ್ಥಿವ ಶರೀರ ಖಾಸಗಿ ಜೆಟ್ ನಲ್ಲಿ ಬ್ಯಾಂಕಾಂಕ್ ನಿಂದ ಮೆಲ್ಬರ್ನ್ ನಗರ ತಲುಪಿತು. ವಾರ್ನ್ ಆಪ್ತ ಸಹಾಯಕ ಹೆಲೆನ್ ನೊಲಾನ್ ಸೇರಿದಂತೆ ಅಭಿಮಾನಿಗಳು, ಸ್ನೇಹಿತರು ಖಾಸಗಿ ವಿಮಾನವನ್ನು ಸ್ವಾಗತಿಸಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: ಅಸ್ಟ್ರೇಲಿಯಾ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನ
15 ವರ್ಷಗಳ ವೃತ್ತಿ ಜೀವನದಲ್ಲಿ 145 ಟೆಸ್ಟ್ ಗಳಲ್ಲಿ 708 ವಿಕೆಟ್ ಪಡೆದಿರುವ ಸ್ಪೀನ್ ಮಾಂತ್ರಿಕ ಶೆನ್ ವಾರ್ನ್ ತಮ್ಮ 52 ವಯಸ್ಸಿನಲ್ಲಿ ಥೈಲ್ಯಾಂಡ್ ನಲ್ಲಿ ಮಾರ್ಚ್ 4 ರಂದು ನಿಧನರಾಗಿದ್ದರು. ಹೃದಯಘಾತದಿಂದ ಅವರು ಮೃತಪಟ್ಟಿದ್ದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಲಾಗಿತ್ತು. ನಂತರ ಅವರ ಪಾರ್ಥಿವ ಶರೀರವನ್ನು ಸೂರತ್ ಥನಿ ಮತ್ತು ಬ್ಯಾಂಕಾಂಕ್ ಗೆ ರವಾನಿಸಲಾಗಿತ್ತು.
ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನೆನೆದು ಕಣ್ಣೀರಿಟ್ಟ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್
ಮಾರ್ಚ್ 30 ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಸರ್ಕಾರಿ ಗೌರವ ನೀಡುವುದರೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ.ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ಸಾಧ್ಯತೆಯಿದೆ.