80 ಮಂದಿಗೆ ಆಶ್ರಯ ನೀಡಿದ್ದ ಮರಿಯುಪೋಲ್ ಮಸೀದಿ ಮೇಲೆ ರಷ್ಯಾ ಶೆಲ್ ದಾಳಿ: ಉಕ್ರೇನ್ ಆರೋಪ
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಆಟಾಟೋಪ ಮುಂದುವರೆದಿದ್ದು, ಯುದ್ಧ ಪೀಡಿತ ಮರಿಯುಪೋಲ್ ನಲ್ಲಿ 80 ಮಂದಿಗೆ ಆಶ್ರಯ ನೀಡಿದ್ದ ಮಸೀದಿ ಮೇಲೆ ರಷ್ಯಾ ಸೇನೆ ಶೆಲ್ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪಿಸಿದೆ.
Published: 12th March 2022 03:54 PM | Last Updated: 12th March 2022 03:54 PM | A+A A-

ಸಂಗ್ರಹ ಚಿತ್ರ
ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಆಟಾಟೋಪ ಮುಂದುವರೆದಿದ್ದು, ಯುದ್ಧ ಪೀಡಿತ ಮರಿಯುಪೋಲ್ ನಲ್ಲಿ 80 ಮಂದಿಗೆ ಆಶ್ರಯ ನೀಡಿದ್ದ ಮಸೀದಿ ಮೇಲೆ ರಷ್ಯಾ ಸೇನೆ ಶೆಲ್ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪಿಸಿದೆ.
ಇದನ್ನೂ ಓದಿ: ನಿರ್ಬಂಧಗಳನ್ನು ವಾಪಾಸ್ ಪಡೆಯದಿದ್ದರೆ, ಬಾಹ್ಯಾಕಾಶ ನಿಲ್ದಾಣ ಕುಸಿಯುತ್ತದೆ: ಐರೋಪ್ಯ ರಾಷ್ಟ್ರಗಳಿಗೆ ರಷ್ಯಾ ಬೆದರಿಕೆ
ಈ ಕುರಿತಂತೆ ಉಕ್ರೇನ್ ವಿದೇಶಾಂಗ ಸಚಿವಾಲಯ ಶನಿವಾರ ಮಾಹಿತಿ ನೀಡಿದ್ದು, 'ಆಗ್ನೇಯ ಉಕ್ರೇನ್ ಬಂದರು ನಗರವಾದ ಮರಿಯುಪೋಲ್‌ನಲ್ಲಿ 80 ನಾಗರಿಕರು ಆಶ್ರಯ ಪಡೆದಿದ್ದ ಮಸೀದಿಯೊಂದರ ಮೇಲೆ ರಷ್ಯಾದ ಪಡೆಗಳು ಶೆಲ್ ದಾಳಿ ನಡೆಸಿವೆ ಎಂದು ಹೇಳಿದೆ.
ಇದನ್ನೂ ಓದಿ: ಉಕ್ರೇನ್ ನಿಂದ ನೇಪಾಳಿ ಪ್ರಜೆಗಳ ರಕ್ಷಣೆ: ಭಾರತಕ್ಕೆ ಪ್ರಧಾನಿ ಶೇರ್ ಬಹದ್ದೂರ್ ದೇಬಾ ಧನ್ಯವಾದ
"ಮಾರಿಯುಪೋಲ್‌ನಲ್ಲಿರುವ ಸುಲ್ತಾನ್ ಸುಲೇಮಾನ್ ದಿ ಮ್ಯಾಗ್ನಿಫಿಸೆಂಟ್ ಮತ್ತು ಅವರ ಪತ್ನಿ ರೊಕ್ಸೊಲಾನಾ (ಹುರ್ರೆಮ್ ಸುಲ್ತಾನ್) ಅವರ ಮಸೀದಿ ಮೇಲೆ ರಷ್ಯಾದ ಆಕ್ರಮಣಕಾರರು ಶೆಲ್ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಟರ್ಕಿಯ ನಾಗರಿಕರು ಸೇರಿದಂತೆ 80 ಕ್ಕೂ ಹೆಚ್ಚು ವಯಸ್ಕರು ಮತ್ತು ಮಕ್ಕಳು ದಾಳಿ ವೇಳೆ ಕಟ್ಟಡದೊಳಗೆ ಇದ್ದರು ಎಂದು ತಿಳಿದುಬಂದಿದೆ ಎಂದು ಹೇಳಿದೆ.
ಕೀವ್ ವಶಕ್ಕಾಗಿ ದಾಳಿ ತೀವ್ರಗೊಳಿಸಿದ ರಷ್ಯಾ
ಇನ್ನು ರಾಜಧಾನಿ ಕೀವ್ ವಶಕ್ಕಾಗಿ ಹಾತೊರೆಯುತ್ತಿರುವ ರಷ್ಯಾ ಸೇನೆ ತನ್ನ ದಾಳಿ ತೀವ್ರಗೊಳಿಸಿದ್ದು, ರಾಷ್ಟ್ರದ ಹಲವೆಡೆ ವಾಯು ದಾಳಿಯ ಸೈರನ್ ಕೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರಾಜಧಾನಿ ಕೀವ್, ಓಡೆಸ್ಸಾದ ಲವಿವಿ ನಗರ ಮತ್ತು ಹಾರ್ಕಿವ್, ಚೆರ್ಕಾಸಿ, ಸುಮಿ ಮತ್ತಿತರ ಪ್ರದೇಶಗಳಲ್ಲಿ ಶನಿವಾರ ಬೆಳಗಿನ ಜಾವ ವಾಯು ದಾಳಿಯ ಸೈರನ್ ಕೇಳಿ ಬಂದಿರುವುದಾಗಿ ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಎಂದು ಸುದ್ದಿಸಂಸ್ಥೆ 'ರಾಯಿಟರ್ಸ್' ವರದಿ ಮಾಡಿದೆ.
ಇದನ್ನೂ ಓದಿ: ನಿಮ್ಮ ಮಕ್ಕಳು ಯುದ್ಧಕ್ಕೆ ಹೋಗದಂತೆ ತಡೆಯಿರಿ: ರಷ್ಯಾದ ತಾಯಂದಿರಿಗೆ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ
ಶುಕ್ರವಾರ ಉಕ್ರೇನ್‌ನ ಕೇಂದ್ರಸ್ಥಾನದಲ್ಲಿರುವ ನಿಪ್ರೊ ನಗರದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ರಷ್ಯಾ ಪಡೆಗಳು ದಾಳಿ ನಡೆಸಿದ್ದವು.