ಉಕ್ರೇನ್ ಯುದ್ಧದಲ್ಲಿ ಹಿನ್ನಡೆ: 8 ಮೇಜರ್ ಜನರಲ್ ಗಳ ಕಿತ್ತೊಗೆದ ರಷ್ಯಾ ಅಧ್ಯಕ್ಷ ಪುಟಿನ್!!
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಗಮನಾರ್ಹ ಮುನ್ನಡೆ ಸಾಧಿಸುವಲ್ಲಿ ವಿಫಲವಾಗ ರಷ್ಯಾ ಸೇನೆ ವಿರುದ್ಧ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಗರಂ ಆಗಿದ್ದು, ಈ ವರೆಗೂ 8 ಮೇಜರ್ ಜನರಲ್ ಗಳ ಕಿತ್ತೊಗೆದಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.
Published: 13th March 2022 09:37 AM | Last Updated: 13th March 2022 09:37 AM | A+A A-

ರಷ್ಯಾ ಅಧ್ಯಕ್ಷ ಪುಟಿನ್
ಕೀವ್: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಗಮನಾರ್ಹ ಮುನ್ನಡೆ ಸಾಧಿಸುವಲ್ಲಿ ವಿಫಲವಾಗ ರಷ್ಯಾ ಸೇನೆ ವಿರುದ್ಧ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಗರಂ ಆಗಿದ್ದು, ಈ ವರೆಗೂ 8 ಮೇಜರ್ ಜನರಲ್ ಗಳ ಕಿತ್ತೊಗೆದಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.
ಇದನ್ನೂ ಓದಿ: ರಷ್ಯಾದಿಂದ ಮೆಲಿಟೊಪೋಲ್ ಮೇಯರ್ ಅಪಹರಣ: ಉಕ್ರೇನ್ ಆರೋಪ!
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ 8 ಉನ್ನತ ಜನರಲ್‌ಗಳನ್ನು ವಜಾ ಮಾಡಿದ್ದಾರೆ. ಅಲ್ಲದೆ ಉಕ್ರೇನ್ ಯುದ್ಧದಲ್ಲಿ ಮಾಸ್ಕೋದ ನಷ್ಟದ ಬಗ್ಗೆ ಅವರ ಗುಪ್ತಚರ ಅಧಿಕಾರಿಗಳ ಮೇಲೆ ಪುಟಿನ್ ಕೋಪಗೊಂಡಿದ್ದಾರೆ ಎಂದು ಉಕ್ರೇನ್ ಹೇಳಿದೆ. ಪುಟ್ಟರಾಷ್ಟ್ರ ಉಕ್ರೇನ್ ಮೇಲೆ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ ದಾಳಿ ಮಾಡಿ ಬರೊಬ್ಬರಿ 18 ದಿನಗಳೇ ಕಳೆದರೂ ಈ ವರೆಗೂ ಯುದ್ಧದಲ್ಲಿ ರಷ್ಯಾ ಸೇನೆ ಉಕ್ರೇನ್ ಅನ್ನು ಮಣಿಸಲು ಸಾಧ್ಯವಾಗಿಲ್ಲ. ಯುದ್ಧಕ್ಕಾಗಿ ರಷ್ಯಾ ಸರ್ಕಾರ ದಿನಂ ಪ್ರತೀ ಮಿಲಿಯನ್ ಡಾಲರ್ ಗಟ್ಟಲೇ ಹಣವನ್ನು ಸುರಿಯುತ್ತಿದ್ದು, ಇದರಿಂದ ಅಕ್ಷರಶಃ ರಷ್ಯಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆದಾಗ್ಯೂ ಉಕ್ರೇನ್ ಮೇಲೆ ರಷ್ಯಾಸೇನೆಗೆ ಗೆಲುವು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಈವರೆಗೆ 1,300 ಉಕ್ರೇನ್ ಸೈನಿಕರ ಬಲಿದಾನ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಇದು ರಷ್ಯಾ ಅಧ್ಯಕ್ಷ ಪುಟಿನ್ ಕೋಪ ನೆತ್ತಿಗೇರುವಂತೆ ಮಾಡಿದೆ. ಹೀಗಾಗಿ ಯುದ್ಧ ಆರಂಭವಾದ ದಿನದಿಂದ ಈ ವರೆಗೂ ರಷ್ಯಾ ಸರ್ಕಾರ ಸುಮಾರು 8 ಮಂದಿ ಉನ್ನತ ಮೇಜರ್ ಜನರಲ್ ಗಳನ್ನು ಅವರ ಸ್ಥಾನದಿಂದ ವಜಾಗೊಳಿಸಿದೆ. ಈ ಬಗ್ಗೆ ಉಕ್ರೇನ್ ರಕ್ಷಣಾ ಕಾರ್ಯದರ್ಶಿ ಒಲೆಕ್ಸಿ ಡ್ಯಾನಿಲೋವ್ ಅವರು ಮಾಹಿತಿ ನೀಡಿದ್ದು, 'ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ)ನ ಸೋಲಿನ ಸರಣಿ ರಷ್ಯಾಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದು, ರಷ್ಯಾದ ಎಂಟು ಸೇನಾ ಜನರಲ್‌ಗಳನ್ನು ಇದುವರೆಗೆ ವಜಾಗೊಳಿಸಲಾಗಿದೆ. ರಷ್ಯಾ ತನ್ನ ಯುದ್ಧ ತಂತ್ರಗಳನ್ನು ಬದಲಾಯಿಸಿದೆ. ಬದಲಾದ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್- ರಷ್ಯಾ ಯುದ್ಧ: ಕೀವ್ ಬಳಿ ಏರ್ ಫೀಲ್ಡ್ ನಾಶಗೊಳಿಸಿದ ರಷ್ಯಾದ ಕ್ಷಿಪಣಿಗಳು
ರಷ್ಯಾದ ಒಕ್ಕೂಟದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೇವೆ. ಅವರು ಹತಾಶರಾಗಿದ್ದಾರೆಂದು ನಾನು ಹೇಳಬಲ್ಲೆ ಎಂದು ಉಕ್ರೇನಿಯನ್ ಪತ್ರಿಕೆ ಉಕ್ರೇನ್‌ಸ್ಕಾ ಪ್ರಾವ್ಡಾಗೆ ನೀಡಿದ ಸಂದರ್ಶನದಲ್ಲಿ ಡ್ಯಾನಿಲೋವ್ ಅವರು ಹೇಳಿದ್ದಾರೆ.
ಇದನ್ನೂ ಓದಿ: 80 ಮಂದಿಗೆ ಆಶ್ರಯ ನೀಡಿದ್ದ ಮರಿಯುಪೋಲ್ ಮಸೀದಿ ಮೇಲೆ ರಷ್ಯಾ ಶೆಲ್ ದಾಳಿ: ಉಕ್ರೇನ್ ಆರೋಪ
"ನಮ್ಮ ರಾಷ್ಟ್ರವು ತುಂಬಾ ಒಗ್ಗಟ್ಟಾಗಿದೆ" ಎಂದು ರಷ್ಯನ್ ಎಂದಿಗೂ ಯೋಚಿಸಲಿಲ್ಲ. ಅದರ ಪ್ರತಿಫಲ ಇಂದು ಅದು ಉಣ್ಣುತ್ತಿದೆ. ಆದರೆ ನಮ್ಮಮುಂದಿನ ಹಾದಿಯು "ಸುಲಭವಾಗಿರುವುದಿಲ್ಲ. "ಇದು ಕಷ್ಟವಾಗುತ್ತದೆಯೇ? ಹೌದು, ಅದು ಕಷ್ಟಕರವಾಗಿರುತ್ತದೆ, ಶತ್ರುವನ್ನು ಕಡಿಮೆ ಅಂದಾಜು ಮಾಡಬೇಡಿ. ನಾವು ಅವರನ್ನು ಎಲ್ಲಾ ದಿಕ್ಕುಗಳಲ್ಲಿಯೂ ಸೋಲಿಸಿದ್ದೇವೆ, ಆದರೆ ಅವರು ಯುದ್ದ ತಂತ್ರವನ್ನು ಬದಲಿಸುತ್ತಿದ್ದಾರೆ. ರಷ್ಯಾ ಸೇನೆ ಹಿನ್ನಡೆಯಿಂದಾಗಿ ಪುಟಿನ್ "ತುಂಬಾ ಕೋಪಗೊಂಡಿದ್ದಾರೆ" ಮತ್ತು ಅವರ ಗುಪ್ತಚರ ಸಂಸ್ಥೆಗಳನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.