ಉಕ್ರೇನ್ ಸೇನೆಗೆ ಜಗತ್ತಿನ ವಿಧ್ವಂಸಕ 'ಸ್ನೈಪರ್ ವಾಲಿ' ಸೇರ್ಪಡೆ, ಮೊದಲ ದಿನವೇ ಆರು ರಷ್ಯಾ ಸೈನಿಕರ ಹತ್ಯೆ!
ರಷ್ಯಾ-ಉಕ್ರೇನ್ ಯುದ್ಧ ನಿರ್ಣಾಯಕ ಹಂತ ತಲುಪಿರುವಂತೆಯೇ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಮನವಿ ಮೇರೆಗೆ ಜಗತ್ತಿನ ಅತ್ಯಂತ ವಿಧ್ವಂಸಕ ಸ್ನೈಪರ್ ಎಂದೇ ಖ್ಯಾತರಾದ ಕೆನಡಾ ಮೂಲದ ಯೋಧ ವಾಲಿ ಇದೀಗ ಉಕ್ರೇನ್ ಪರವಾಗಿ ಯುದ್ಧ ಮಾಡುತ್ತಿದ್ದಾರೆ.
Published: 14th March 2022 10:54 AM | Last Updated: 14th March 2022 01:52 PM | A+A A-

ಸ್ನೈಪರ್ ವಾಲಿ
ಕೀವ್: ರಷ್ಯಾ-ಉಕ್ರೇನ್ ಯುದ್ಧ ನಿರ್ಣಾಯಕ ಹಂತ ತಲುಪಿರುವಂತೆಯೇ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಮನವಿ ಮೇರೆಗೆ ಜಗತ್ತಿನ ಅತ್ಯಂತ ವಿಧ್ವಂಸಕ ಸ್ನೈಪರ್ ಎಂದೇ ಖ್ಯಾತರಾದ ಕೆನಡಾ ಮೂಲದ ಯೋಧ ವಾಲಿ ಇದೀಗ ಉಕ್ರೇನ್ ಪರವಾಗಿ ಯುದ್ಧ ಮಾಡುತ್ತಿದ್ದಾರೆ.
One of the world’s best snipers has arrived in Ukraine.
— Visegrád 24 (@visegrad24) March 8, 2022
The French-Canadian “Wali” from the Royal Canadian 22e Régiment made his reputation during tours in Afghanistan, Syria and Iraq
He fought in the same Canadian unit as the sniper with the world’s longest kill (3.5 km)
pic.twitter.com/iWOZiyUXpC
ಹೌದು..ಯುದ್ಧ ನಡೆಯುತ್ತಿರುವ ಉಕ್ರೇನ್ನಲ್ಲಿ ಅಲ್ಲಿನ ಸೇನೆಯೊಂದಿಗೆ ಸೇರಿ ದೇಶದ ನಾಗರಿಕರೂ ಕೂಡ ರಷ್ಯಾ ವಿರುದ್ಧ ಹೋರಾಡುತ್ತಿದ್ದಾರೆ. ಜೀವನದಲ್ಲೆಂದೂ ಬಂದೂಕು, ರೈಫಲ್ ಮುಟ್ಟಿರದವರೂ ಕೂಡ ಸ್ವಲ್ಪ ಸಮಯದಲ್ಲೇ ತರಬೇತಿ ಪಡೆದು ರಷ್ಯಾ ಸೈನಿಕರನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದೆಡೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿನೀಡಿದ್ದ ಕರೆಗೆ ವಿದೇಶಗಳ 20 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಸ್ಪಂದಿಸಿ, ಉಕ್ರೇನ್ ನೆಲದಲ್ಲಿ ನಿಂತು ರಷ್ಯಾ ವಿರುದ್ಧ ಸೆಣೆಸುತ್ತಿದ್ದಾರೆ. ಈ ಸ್ವಯಂ ಸೇವಕರಲ್ಲಿ ಹಲವು ಭಾರತೀಯರು ಸೇರಿದಂತೆ ಯುಎಸ್, ಯುಕೆ ಸೇರಿ ಹಲವು ದೇಶಗಳ ಜನರಿದ್ದಾರೆ.
ಈ ಮಧ್ಯೆ ಕೆನಡಾ ಸೇನೆಯಲ್ಲಿದ್ದ ಡೆಡ್ಲಿ ಸ್ನೈಪರ್ ಎಂದೇ ಖ್ಯಾತರಾಗಿರುವ ಯೋಧ ವಾಲಿ ಉಕ್ರೇನ್ಗೆ ಕಾಲಿಟ್ಟಿದ್ದು, ಉಕ್ರೇನ್ ಪರವಾಗಿ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯೇ ಉಕ್ರೇನ್ ತಲುಪಿರುವ ಇವರು ರಾಯಲ್ ಕೆನಡಿಯನ್ 22ನೇ ರೆಜಿಮೆಂಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು. ಇಟ್ಟ ಗುರಿ ತಪ್ಪದ ಯೋಧ ಎಂದೇ ಖ್ಯಾತರಾಗಿರುವ ವಾಲಿ ಇದೀಗ ಉಕ್ರೇನ್ ಸೇನೆಯ ಪರ ಹೋರಾಡುತ್ತಿದ್ದಾರೆ.
ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡುವ ಕುಟುಂಬಕ್ಕೆ ತಿಂಗಳ ಭತ್ಯೆ: ಬ್ರಿಟನ್ ಸರ್ಕಾರದ ಹೊಸ ಆಫರ್
ಇಷ್ಟಕ್ಕೂ ಯಾರು ಈ ವಾಲಿ?
ಕೆನಡಾ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೈನಿಕ ಈ ವಾಲಿ.. ವಾಲಿ ಎಂಬುದು ಈತನ ನಿಜವಾದ ಹೆಸರಲ್ಲ.. ಈ ಹಿಂದೆ ಆಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಈ ಸೈನಿಕ ಹಲವು ಬಂಡುಕೋರರನ್ನು ಹೊಡೆದುರುಳಿಸಿದ್ದ. ಹೀಗಾಗಿ ಈ ವಾಲಿ ಎಂಬ ಹೆಸರನ್ನು ಇವರಿಗೆ ಅಫ್ಘಾನಿಸ್ತಾನ ಕೊಟ್ಟಿದೆ. ವಾಲಿ ಎಂಬುದು ಅರೇಬಿಕ್ ಶಬ್ದವಾಗಿದ್ದು, ಹೀಗೆಂದರೆ ರಕ್ಷಕ ಎಂಬ ಅರ್ಥ ಕೊಡುತ್ತದೆ. ಇದೀಗ ಈ ಸೈನಿಕ ಇದೇ ವಾಲಿ ಎಂಬ ಹೆಸರಿನಿಂದಲೇ ಜಗತ್ ಪ್ರಸಿದ್ಧಿ ಪಡೆದಿದ್ದಾರೆ.
40 ವರ್ಷದ ಈ ವಾಲಿ ಜಗತ್ತಿನ ಅತ್ಯುತ್ತಮ ಸ್ನೈಪರ್ಗಳಲ್ಲಿ (ಗುರಿಕಾರ- ಮರೆಯಲ್ಲಿ ನಿಂತು ಗುಂಡು ಹೊಡೆದರೂ ಗುರಿ ತಪ್ಪದವ) ಒಬ್ಬರು ಎನ್ನಲಾಗಿದೆ. ವಾಲಿ ಕಂಪ್ಯೂಟರ್ ವಿಜ್ಞಾನಿಯೂ ಹೌದು. ಇವರಿಗೆ ವಿವಾಹವಾಗಿದ್ದು, ಮನೆಯಲ್ಲಿ ಒಂದುವರ್ಷದ ಮಗುವಿದೆ ಎಂದೂ ಹೇಳಲಾಗಿದೆ. ಆದರೂ ಕುಟುಂಬವನ್ನೆಲ್ಲ ಬಿಟ್ಟು ಉಕ್ರೇನ್ಗೆ ಬಂದಿರುವ ಇವರು ರಷ್ಯಾ ವಿರುದ್ಧ ಹೋರಾಟ ಮಾಡಲು ಉತ್ಸಾಹದಿಂದ ಇದ್ದೇನೆ, ಉಕ್ರೇನಿಯನ್ನಿರಿಗೆ ಸಹಾಯ ಮಾಡಲು ಬಂದಿದ್ದೇನೆ ಎಂದು ಉಕ್ರೇನ್ನ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ; ರಾಜಧಾನಿ ಕೀವ್ ವಶಕ್ಕೆ ಪಡೆಯಲು ರಷ್ಯಾ ಸೇನೆ ಹರಸಾಹಸ; ವೈಮಾನಿಕ ಮತ್ತು ಕ್ಷಿಪಣಿ ದಾಳಿ ತೀವ್ರ
ಜಗತ್ತಿನ ಅತ್ಯಂತ ಡೆಡ್ಲಿ ಸ್ನೈಪರ್; ಮೊದಲ ದಿನವೇ ರಷ್ಯಾದ ಆರು ಸೈನಿಕರ ಹತ್ಯೆ
ಇನ್ನು ವಾಲಿ ಉಕ್ರೇನ್ ನಲ್ಲಿ ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ರಷ್ಯಾದ ಆರು ಸೈನಿಕರನ್ನು ಹೊಡೆದುರುಳಿಸಿದ್ದಾರೆ ಎಂದು ಸುದ್ದಿಯಾಗಿದೆ. ಒಂದು ದಿನದಲ್ಲಿ 40 ಜನರನ್ನು ಕೊಲ್ಲುವ ಸಾಮರ್ಥ್ಯ ಇರುವ ವಾಲಿ, ಅತ್ಯಂತ ಡೆಡ್ಲಿ ಸ್ನೈಪರ್ ಎಂಬ ಕೀರ್ತಿ ಹೊಂದಿದ್ದಾರೆ. ಇವರು 2009ರಿಂದ 2011ರವರೆಗೆ ಅಫ್ಘಾನಿಸ್ತಾನದ ಕಂದಹಾರ್ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಉತ್ತಮ ಸ್ನೈಪರ್ ಅಥವಾ ಗುರಿಕಾರ ಎಂದು ಕರೆಸಿಕೊಳ್ಳಬೇಕೆಂದರೆ ಆತ ದಿನಕ್ಕೆ 5-6 ಮಂದಿಯನ್ನು ಕೊಲ್ಲುವಂತಿರಬೇಕು. ಶ್ರೇಷ್ಠ ಸ್ನೈಪರ್ ಎಂಬ ಪಟ್ಟ ಬೇಕಾದರೆ ದಿನಕ್ಕೆ 7-10 ಮಂದಿಯನ್ನಾದರೂ ಸಾಯಿಸಬೇಕು. ಆದರೆ ಈ ವಾಲಿ ದಿನಕ್ಕೆ 40 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದ್ದು, ಡೆಡ್ಲಿ ಸ್ನೈಪರ್ ಎಂದೇ ಖ್ಯಾತರಾಗಿದ್ದಾರೆ ಎಂದು ಮಾಧ್ಯಮಗಳು, ಕೆಲವು ಡಾಕ್ಯುಮೆಂಟರಿಗಳಲ್ಲಿ ಉಲ್ಲೇಖಿಸಲಾಗಿದೆ.
3.5 ಕಿ.ಮೀ. ದೂರದಿಂದ ಉಗ್ರನನ್ನು ಹೊಡೆದುರುಳಿಸಿದ್ದ ವಾಲಿ
ಈ ಹಿಂದೆ ಇರಾಕ್ ಯುದ್ಧದಲ್ಲಿ 3.5 ಕಿ.ಮೀ. ದೂರದಿಂದ ಮೆಕ್‌ಮಿಲನ್ ಟ್ಯಾಕ್-50 ರೈಫಲ್ ಬಳಸಿ ಐಸಿಸ್ ಉಗ್ರನೊಬ್ಬನನ್ನು ಕೊಂದ ದಾಖಲೆ ಈ ವಾಲಿ ಹೆಸರಿನಲ್ಲಿದೆ.