
ವಿಟಾಲಿ ಕ್ಲಿಟ್ಸ್ಕೊ
ಕೀವ್(ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ದಿನೇ ದಿನೇ ಬಿಗಾಡಿಯಿಸುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿ ದೇಶವನ್ನು ತೊರೆದಿದ್ದಾರೆ.
ಈ ನಡುವೆ ಉಕ್ರೇನ್ ನ ರಾಜಧಾನಿ ಕೀವ್ ಗೆ ಮಂಗಳವಾರ ರಾತ್ರಿಯಿಂದ 'ಕಷ್ಟ ಮತ್ತು ಅಪಾಯಕಾರಿ ಕ್ಷಣ' ಎದುರಾಗಲಿದೆ. ಹೀಗಾಗಿ 36 ಗಂಟೆಗಳ ಕರ್ಫ್ಯೂ ವಿಧಿಸಿದ್ದೇವೆ ಎಂದು ಮೇಯರ್ ವಿಟಾಲಿ ಕ್ಲಿಟ್ಸ್ಕೊ ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಕದನ ನಿಲುಗಡೆಗೆ ವಿಶ್ವಸಂಸ್ಥೆ ನೇರ ಸಂಧಾನ: ಭಾರತ, ಚೀನಾ ಮತ್ತು ಫ್ರಾನ್ಸ್ ಜೊತೆ ಚರ್ಚೆ
'ಇಂದು ಕಷ್ಟಕರ ಮತ್ತು ಅಪಾಯಕಾರಿ ಕ್ಷಣವಾಗಿದೆ' ಎಂದು ಮಾಜಿ ಬಾಕ್ಸಿಂಗ್ ಚಾಂಪಿಯನ್ ಕ್ಲಿಟ್ಸ್ಕೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕರ್ಫ್ಯೂ ಮಂಗಳವಾರ ರಾತ್ರಿ 8 ರಿಂದ(1800 GMT) ಗುರುವಾರ ಬೆಳಿಗ್ಗೆ 7 ರವರೆಗೆ (0500 GMT) ಮುಂದುವರೆಯಲಿದೆ ಎಂದು ಹೇಳಿದರು.