ಮಾರಿಯುಪೋಲ್ ಆಸ್ಪತ್ರೆ ರಷ್ಯಾ ವಶದಲ್ಲಿ; 400 ಮಂದಿ ಒತ್ತೆಯಾಳು! ಭಾರತೀಯರು ಪಾರು, ರಕ್ಷಣೆಗೆ ರಷ್ಯಾ ಸೇನೆ ನೆರವು!
ರಷ್ಯಾ-ಉಕ್ರೇನ್ ನಡುವಿನ ಯುದ್ಧ 21ನೇ ದಿನಕ್ಕೆ ಕಾಲಿಟ್ಟಿದ್ದು, ಮಾರಿಯುಪೋಲ್ ಆಸ್ಪತ್ರೆಯನ್ನು ರಷ್ಯಾ ಸೇನೆ ವಶಕ್ಕೆ ಪಡೆದಿದ್ದು, ಆಸ್ಪತ್ರೆಯಲ್ಲಿದ್ದ 400 ಮಂದಿಯನ್ನು ಒತ್ತೆಯಾಳುಗಳಾಗಿರಿಸಿಕೊಂಡಿದೆ.
Published: 16th March 2022 01:10 PM | Last Updated: 16th March 2022 02:11 PM | A+A A-

ಸಂಗ್ರಹ ಚಿತ್ರ
ಕೈವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧ 21ನೇ ದಿನಕ್ಕೆ ಕಾಲಿಟ್ಟಿದ್ದು, ಮಾರಿಯುಪೋಲ್ ಆಸ್ಪತ್ರೆಯನ್ನು ರಷ್ಯಾ ಸೇನೆ ವಶಕ್ಕೆ ಪಡೆದಿದ್ದು, ಆಸ್ಪತ್ರೆಯಲ್ಲಿದ್ದ 400 ಮಂದಿಯನ್ನು ಒತ್ತೆಯಾಳುಗಳಾಗಿರಿಸಿಕೊಂಡಿದೆ.
ಇದನ್ನೂ ಓದಿ: ಉಕ್ರೇನ್ ಗೆ ಹೊಸ ಭದ್ರತಾ ನೆರವು: 800 ಮಿಲಿಯನ್ ಡಾಲರ್ ಘೋಷಿಸಲಿರುವ ಅಮೆರಿಕ ಅಧ್ಯಕ್ಷ ಜೊ ಬೈಡನ್
ಉಕ್ರೇನಿಯನ್ ನಗರಗಳಲ್ಲಿ ರಷ್ಯಾ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದ್ದು, ದಾಳಿಯ ಮಧ್ಯೆ ಹಲವು ಭಾರತೀಯರು ಸಿಕ್ಕಿಬಿದ್ದಿದ್ದರು. ಅವರನ್ನು ರಷ್ಯಾದ ನಗರಗಳ ಮೂಲಕ ಮರಳಿ ತರಲಾಗುತ್ತಿದೆ. ಖೆರ್ಸನ್‌ನಲ್ಲಿ ಸಿಲುಕಿರುವ 3 ಭಾರತೀಯರನ್ನು ಸಿಮ್ಫೆರೋಪೋಲ್ ಮತ್ತು ಮಾಸ್ಕೋ ಮೂಲಕ ಸ್ಥಳಾಂತರಿಸಲಾಯಿತು.
ಇದನ್ನೂ ಓದಿ: ಯೆಮೆನ್: ಸೇನಾ ಕಮಾಂಡರ್ ಗುರಿಯಾಗಿಸಿ ಕಾರ್ ಬಾಂಬ್ ದಾಳಿ, ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವು
ಈ ನಡುವೆ ಮಾರಿಯುಪೋಲ್‌ನಲ್ಲಿರುವ ಅತಿದೊಡ್ಡ ಆಸ್ಪತ್ರೆಯನ್ನು ರಷ್ಯಾ ವಶಪಡಿಸಿಕೊಂಡಿದೆ. ವೈದ್ಯರು ಮತ್ತು ರೋಗಿಗಳು ಸೇರಿದಂತೆ 400 ಜನರನ್ನು ರಷ್ಯಾದ ಪಡೆಗಳು ಒತ್ತೆಯಾಳಾಗಿಸಿಕೊಂಡಿದ್ದಾರೆ ಎಂದು ಇಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಅವರನ್ನು ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ಉಕ್ರೇನ್ ಆರೋಪಿಸಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಕೀವ್ ಗೆ ಅಪಾಯಕಾರಿ ಕ್ಷಣ; 36 ಗಂಟೆಗಳ ಕರ್ಫ್ಯೂ ವಿಧಿಸಿದ ಮೇಯರ್
ಮಾಕ್ಸರ್ ಒದಗಿಸಿದ ಉಪಗ್ರಹ ಚಿತ್ರಗಳು ಮಾರ್ಚ್ 9 ರಂದು ದಾಳಿಯ ಮೊದಲು ಮತ್ತು ನಂತರ ಮಾರ್ಚ್ 12 ರಂದು ದಾಳಿಯ ನಂತರ ಮಕ್ಕಳ ಆಸ್ಪತ್ರೆ ಮತ್ತು ವೈದ್ಯಕೀಯ ಕಟ್ಟಡಗಳನ್ನು ತೋರಿಸುತ್ತಿದ್ದು, ದಾಳಿ ಬಳಿಕ ಕಟ್ಟಡಕ್ಕಾದ ಹಾನಿಯನ್ನು ಇನು ತೋರಿಸುತ್ತಿದೆ.
ಇದನ್ನೂ ಓದಿ: ಉಕ್ರೇನ್ ಸೇನೆಗೆ ಜಗತ್ತಿನ ವಿಧ್ವಂಸಕ 'ಸ್ನೈಪರ್ ವಾಲಿ' ಸೇರ್ಪಡೆ, ಮೊದಲ ದಿನವೇ ಆರು ರಷ್ಯಾ ಸೈನಿಕರ ಹತ್ಯೆ!
ಇನ್ನು ಗೊತ್ತುಪಡಿಸಿದ ಸುರಕ್ಷಿತ ಕಾರಿಡಾರ್ ಮೂಲಕ ಸುಮಾರು 20,000 ಜನರು 4,000 ಖಾಸಗಿ ವಾಹನಗಳಲ್ಲಿ ಮಾರಿಯುಪೋಲ್ ಅನ್ನು ತೊರೆಯಲು ಯಶಸ್ವಿಯಾಗಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಹಿರಿಯ ಸಹಾಯಕ ಕೈರಿಲೊ ಟಿಮೊಶೆಂಕೊ ಹೇಳಿದ್ದಾರೆ.