
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ
ವಾಷಿಂಗ್ ಟನ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ಉಕ್ರೇನ್ ನ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅಮೆರಿಕಾ ಸಹಾಯಕ್ಕಾಗಿ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಸೆ.11, 2001 ರ ಉಗ್ರರ ದಾಳಿ ಹಾಗೂ ಪರ್ಲ್ ಹಾರ್ಬರ್ ನ್ನು ಉಲ್ಲೇಖಿಸಿರುವ ಝೆಲೆನ್ಸ್ಕಿ ರಷ್ಯಾ ವಿರುದ್ಧದ ಹೋರಾಟದಲ್ಲಿ ಉಕ್ರೇನ್ ಗೆ ಇನ್ನೂ ಹೆಚ್ಚಿನ ಸಹಾಯ ಮಾಡುವಂತೆ ಅಮೆರಿಕ ಕಾಂಗ್ರೆಸ್ ಗೆ ಮನವಿ ಮಾಡಿದ್ದಾರೆ.
Ukraine President Volodymyr Zelensky received a standing ovation during his address to US Congress
(Source: Reuters) pic.twitter.com/18hRnFyQfs— ANI (@ANI) March 16, 2022
ಕ್ಯಾಪಿಟೋಲ್ ಕಾಂಪ್ಲೆಕ್ಸ್ ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ಮಾತನಾಡಿರುವ ಝೆಲೆನ್ಸ್ಕಿ, ತಮ್ಮ ದೇಶದಲ್ಲಿ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಹಾನಿಯನ್ನು ಕಾಂಗ್ರೆಸ್ ಗೆ ತೋರಿಸಿದ್ದಾರೆ.
"ನಿಮ್ಮ ಸಹಾಯದ ಅಗತ್ಯ ನಮಗೆ ತುರ್ತಾಗಿದೆ" ಎಂದು ಝೆಲೆನ್ಸ್ಕಿ ಅಮೆರಿಕ ಕಾಂಗ್ರೆಸ್ ಮನವಿ ಮಾಡಿದ್ದಾರೆ. ರಷ್ಯಾ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸಬೇಕು ಎಂದು ಝೆಲೆನ್ಸ್ಕಿ ಆಗ್ರಹಿಸಿದ್ದು, ಆದಾಯಕ್ಕಿಂತ ಶಾಂತಿ ಮುಖ್ಯ ಎಂದು ಹೇಳಿದ್ದಾರೆ.