ಉಕ್ರೇನಿಯನ್ನರಿಗೆ ಆಶ್ರಯ ನೀಡಿದ್ದ ಥಿಯೇಟರ್ ಮೇಲೆ ರಷ್ಯಾ ವೈಮಾನಿಕ ದಾಳಿ: ಹಲವರಿಗೆ ಗಾಯ

ಉಕ್ರೇನ್ ಮೇಲಿನ ಸೇನಾ ಆಕ್ರಮಣವನ್ನು ರಷ್ಯಾ ಮುಂದುವರೆಸಿದ್ದು, ಇದರ ನಡುವೆ ಉಕ್ರೇನ್ ನಾಗರೀಕರ ಮೇಲೂ ರಷ್ಯಾ ಸೇನೆ ಅಮಾನವೀಯ ಆಕ್ರಮಣಗಳನ್ನು ಮುಂದುವರೆಸಿದೆ.

Published: 17th March 2022 01:56 PM  |   Last Updated: 17th March 2022 04:54 PM   |  A+A-


Russia bombs theatre sheltering

ಮಾರಿಯುಪೋಲ್ ನಲ್ಲಿ ದಾಳಿ

AFP

ಕೀವ್: ಉಕ್ರೇನ್ ಮೇಲಿನ ಸೇನಾ ಆಕ್ರಮಣವನ್ನು ರಷ್ಯಾ ಮುಂದುವರೆಸಿದ್ದು, ಇದರ ನಡುವೆ ಉಕ್ರೇನ್ ನಾಗರೀಕರ ಮೇಲೂ ರಷ್ಯಾ ಸೇನೆ ಅಮಾನವೀಯ ಆಕ್ರಮಣಗಳನ್ನು ಮುಂದುವರೆಸಿದೆ.

ಉಕ್ರೇನ್‌ನ ಆಗ್ನೇಯ ಭಾಗದಲ್ಲಿರುವ ಮಾರಿಯುಪೋಲ್ ನಗರದ ಸಂಘರ್ಷ ಪೀಡಿತ ಪ್ರದೇಶಗಳಿಂದ ಪಲಾಯನ ಮಾಡುತ್ತಿರುವ ನೂರಾರು ನಾಗರಿಕರಿಗೆ ಆಶ್ರಯ ನೀಡುತ್ತಿದ್ದ ಥಿಯೇಟರ್ ಮೇಲೆ ಬುಧವಾರ ರಷ್ಯಾದ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧ ತೀರ್ಪು: ತಕ್ಷಣವೇ ಯುದ್ಧ ನಿಲ್ಲಿಸಲು ಆದೇಶ

ನಾಶವಾದ ಕಟ್ಟಡದ ಚಿತ್ರವನ್ನು ಹಂಚಿಕೊಂಡಿರುವ ಮಾರಿಯುಪೋಲ್ ಸಿಟಿ ಕೌನ್ಸಿಲ್, ರಷ್ಯಾದ ಪಡೆಗಳು 'ಮಾರಿಯುಪೋಲ್ ಹೃದಯಭಾಗದಲ್ಲಿರುವ ಡ್ರಾಮಾ ಥಿಯೇಟರ್ ಅನ್ನು ಉದ್ದೇಶಪೂರ್ವಕವಾಗಿ ರಷ್ಯಾ ಸೇನೆ ನಾಶಪಡಿಸಿವೆ' ಎಂದು ಸಿಎನ್ಎನ್ ವರದಿ ಮಾಡಿದೆ.

ಇದನ್ನೂ ಓದಿ: ತಕ್ಷಣವೇ ನಿಮ್ಮ ಅಗತ್ಯ ನಮಗೆ ಇದೆ: ಅಮೆರಿಕ ಕಾಂಗ್ರೆಸ್ ಗೆ ಝೆಲೆನ್ಸ್ಕಿ

"ಈ ಭಯಾನಕ ಮತ್ತು ಅಮಾನವೀಯ ಕೃತ್ಯದ ಪ್ರಮಾಣವನ್ನು ಅಂದಾಜು ಮಾಡುವುದು ಇನ್ನೂ ಅಸಾಧ್ಯವಾಗಿದೆ. ನಗರದಲ್ಲಿನ ವಸತಿ ಪ್ರದೇಶಗಳ ಮೇಲಿನ ಶೆಲ್ ದಾಳಿಯನ್ನು ರಷ್ಯಾ ಸೇನೆ ಮುಂದುವರೆಸಿದೆ ಎಂದು ಕೌನ್ಸಿಲ್ ಟೆಲಿಗ್ರಾಮ್ನಲ್ಲಿ ಬರೆದಿದೆ. ಬಾಂಬ್ ಸ್ಫೋಟದ ನಂತರ, ನಾಟಕ ಥಿಯೇಟರ್‌ನ ಕೇಂದ್ರ ಭಾಗವು ನಾಶವಾಗಿದೆ ಮತ್ತು ಕಟ್ಟಡದಲ್ಲಿನ ಬಾಂಬ್ ಆಶ್ರಯದ ಪ್ರವೇಶದ್ವಾರವನ್ನು ಧ್ವಂಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ನೂರಾರು ಶಾಂತಿಯುತ ಮರಿಯುಪೋಲ್ ನಿವಾಸಿಗಳು ಅಡಗಿಕೊಂಡಿದ್ದ ಕಟ್ಟಡದ ಮೇಲೆ ವಿಮಾನವು ಬಾಂಬ್ ಹಾಕಿದೆ. ನಂತರದ ಪರಿಣಾಮಗಳ ವೀಡಿಯೊಗಳು ಥಿಯೇಟರ್‌ನ ಅವಶೇಷಗಳಲ್ಲಿ ಜನ ಸಿಲುಕಿರುವ ಕುರಿತು ವರದಿಯಲ್ಲಿ ಚಿತ್ರ ಸಹಿತ ಉಲ್ಲೇಖಿಸಲಾಗಿದೆ. ಸಾವು-ನೋವುಗಳ ಸಂಖ್ಯೆಯನ್ನು ಸ್ಥಳೀಯ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. 

ಇದನ್ನೂ ಓದಿ: ಮಾರಿಯುಪೋಲ್ ಆಸ್ಪತ್ರೆ ರಷ್ಯಾ ವಶದಲ್ಲಿ; 400 ಮಂದಿ ಒತ್ತೆಯಾಳು! ಭಾರತೀಯರು ಪಾರು, ರಕ್ಷಣೆಗೆ ರಷ್ಯಾ ಸೇನೆ ನೆರವು!

ಉಕ್ರೇನ್ ಆರೋಪ ನಿರಾಕರಿಸಿದ ರಷ್ಯಾ
ಉಕ್ರೇನ್ ದಾಳಿ ಆರೋಪವನ್ನು ರಷ್ಯಾ ನಿರಾಕರಿಸಿದ್ದು, ಬಲಪಂಥೀಯ ಉಗ್ರಗಾಮಿ ಅಜೋವ್ ಬೆಟಾಲಿಯನ್ ಈ ಕಟ್ಟಡವನ್ನು ಸ್ಫೋಟಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಈ ಕುರಿತಂತೆ ರಷ್ಯಾ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಸ್ಪುಟ್ನಿಕ್ ವರದಿ ಮಾಡಿದ್ದು, 'ಲಭ್ಯವಿರುವ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ ಉಗ್ರ ಸಂಘಟನೆಯೇ ಈ ದಾಳಿ ಮಾಡಿದೆ ಎಂದು ಅದು ವರದಿ ಮಾಡಿದೆ.

ಇದನ್ನೂ ಓದಿ: ಉಕ್ರೇನ್ ಗೆ ಹೊಸ ಭದ್ರತಾ ನೆರವು: 800 ಮಿಲಿಯನ್ ಡಾಲರ್ ಘೋಷಿಸಲಿರುವ ಅಮೆರಿಕ ಅಧ್ಯಕ್ಷ ಜೊ ಬೈಡನ್

"ಮಾರ್ಚ್ 16 ರ ಮಧ್ಯಾಹ್ನ, ರಷ್ಯಾದ ವಾಯು ವಿಮಾನವು ಮಾರಿಯುಪೋಲ್ ನಗರದಲ್ಲಿ ನೆಲದ ಗುರಿಗಳ ವಿರುದ್ಧ ಯಾವುದೇ ದಾಳಿಗಳನ್ನು ನಿರ್ವಹಿಸಲಿಲ್ಲ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅದೇ ದಿನ, ಉಕ್ರೇನ್‌ನಲ್ಲಿರುವ ಯುನೈಟೆಡ್ ಸ್ಟೇಟ್ಸ್ ರಾಯಭಾರ ಕಚೇರಿಯು ರಷ್ಯಾದ ಪಡೆಗಳು ಉಕ್ರೇನಿಯನ್ ನಗರವಾದ ಚೆರ್ನಿಹಿವ್‌ನಲ್ಲಿ ಬ್ರೆಡ್‌ಗಾಗಿ ಸಾಲಿನಲ್ಲಿ ನಿಂತಿದ್ದ 10 ಜನರನ್ನು ಗುಂಡಿಕ್ಕಿ ಕೊಂದಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಕೀವ್ ಗೆ ಅಪಾಯಕಾರಿ ಕ್ಷಣ; 36 ಗಂಟೆಗಳ ಕರ್ಫ್ಯೂ ವಿಧಿಸಿದ ಮೇಯರ್

'ಇಂತಹ ಭೀಕರ ದಾಳಿ ನಿಲ್ಲಬೇಕು. ಉಕ್ರೇನ್‌ನಲ್ಲಿನ ಯಾವುದೇ ದೌರ್ಜನ್ಯ ಅಪರಾಧಗಳಿಗೆ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ನಾವು ಪರಿಗಣಿಸುತ್ತಿದ್ದೇವೆ' ಎಂದು ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಇದನ್ನೂ ಓದಿ: ಉಕ್ರೇನ್ ಕದನ ನಿಲುಗಡೆಗೆ ವಿಶ್ವಸಂಸ್ಥೆ ನೇರ ಸಂಧಾನ: ಭಾರತ, ಚೀನಾ ಮತ್ತು ಫ್ರಾನ್ಸ್ ಜೊತೆ ಚರ್ಚೆ

ಈವರೆಗೂ ಯುದ್ಧದಲ್ಲಿ ಮಾರಿಯುಪೋಲ್‌ನಲ್ಲಿ ಸುಮಾರು 2,500 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಅಂದಾಜಿಸಿದ್ದಾರೆ ಮತ್ತು ನೂರಾರು ಸಾವಿರ ಜನರು ನಗರದಲ್ಲಿ ಸಿಲುಕಿದ್ದಾರೆ. ಉಳಿದಿರುವವರು ವಿದ್ಯುತ್, ನೀರು ಮತ್ತು ಊಟವಿಲ್ಲದೆ ಪರದಾಡುತ್ತಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. 

ಇದನ್ನೂ ಓದಿ: ಉಕ್ರೇನ್ ಸೇನೆಗೆ ಜಗತ್ತಿನ ವಿಧ್ವಂಸಕ 'ಸ್ನೈಪರ್ ವಾಲಿ' ಸೇರ್ಪಡೆ, ಮೊದಲ ದಿನವೇ ಆರು ರಷ್ಯಾ ಸೈನಿಕರ ಹತ್ಯೆ!

ಏತನ್ಮಧ್ಯೆ, ಫೆಬ್ರವರಿ 24 ರಂದು ಪ್ರಾರಂಭವಾದ ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಅಮಾನತುಗೊಳಿಸುವಂತೆ ರಷ್ಯಾವನ್ನು ಕೇಳುವ ಆದೇಶವನ್ನು ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ (ICJ) ಬುಧವಾರ ಅಂಗೀಕರಿಸಿದೆ. ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ರಷ್ಯಾ ಅಂತಾರಾಷ್ಟ್ರೀಯ ಸಮುದಾಯದಿಂದ ಅಪಾರ ಒತ್ತಡವನ್ನು ಎದುರಿಸುತ್ತಿದೆ. ಉಕ್ರೇನ್‌ನಿಂದ ಸಾವಿರಾರು ನಿರಾಶ್ರಿತರು ಪಶ್ಚಿಮಕ್ಕೆ ನೆರೆಯ ದೇಶಗಳಿಗೆ ಪಲಾಯನ ಮಾಡುವ ಮೂಲಕ ಅಪಾರ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ.
 


Stay up to date on all the latest ವಿದೇಶ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp