ಉಕ್ರೇನ್: ರಷ್ಯಾ ಕ್ಷಿಪಣಿ ದಾಳಿಗೆ ಎಲ್ವಿವ್ ನಗರದ ವಿಮಾನ ದುರಸ್ತಿ ಘಟಕ ನಾಶ!
ಉಕ್ರೇನ್ ನ ಎಲ್ವಿವ್ ನಗರದಲ್ಲಿನ ವಿಮಾನ ದುರಸ್ತಿ ಘಟಕವನ್ನು ರಷ್ಯಾದ ಕ್ಷಿಪಣಿಗಳು ಶುಕ್ರವಾರ ನಾಶಪಡಿಸಿರುವುದಾಗಿ ಮೇಯರ್ ಆಂಡ್ರಿ ಸಡೋವಿ ಹೇಳಿರುವುದಾಗಿ ಉಕ್ರೇನ್ ನ ಮಾಧ್ಯಮವೊಂದು ವರದಿ ಮಾಡಿದೆ.
Published: 18th March 2022 04:06 PM | Last Updated: 18th March 2022 05:17 PM | A+A A-

ವಿಮಾನ ದುರಸ್ತಿ ಘಟಕ ನಾಶದ ಚಿತ್ರ
ಎಲ್ವಿವ್: ಉಕ್ರೇನ್ ನ ಎಲ್ವಿವ್ ನಗರದಲ್ಲಿನ ವಿಮಾನ ದುರಸ್ತಿ ಘಟಕವನ್ನು ರಷ್ಯಾದ ಕ್ಷಿಪಣಿಗಳು ಶುಕ್ರವಾರ ನಾಶಪಡಿಸಿರುವುದಾಗಿ ಮೇಯರ್ ಆಂಡ್ರಿ ಸಡೋವಿ ಹೇಳಿರುವುದಾಗಿ ಉಕ್ರೇನ್ ನ ಮಾಧ್ಯಮವೊಂದು ವರದಿ ಮಾಡಿದೆ.
ಈ ಮಧ್ಯ, ನಿನ್ನೆ ದಿನ ರಷ್ಯಾದ 14 ವೈಮಾನಿಕ ಘಟಕಗಳನ್ನು ನಾಶಪಡಿಸಿರುವುದಾಗಿ ಉಕ್ರೇನ್ ವಾಯುಪಡೆ ಹೇಳಿಕೊಂಡಿದೆ. ರಷ್ಯಾದ ಏಳು ವಿಮಾನಗಳು, ಒಂದು ಹೆಲಿಕಾಫ್ಟರ್, ಮೂರು ಯುಎವಿ ಮತ್ತಿತರ ಮೂರು ಕ್ರೂಸ್ ಕ್ಷಿಪಣಿಗಳನ್ನು ಉಕ್ರೇನ್ ವಾಯು ರಕ್ಷಣಾ ವ್ಯವಸ್ಥೆಯಿಂದ ನಾಶಪಡಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ಕಮಾಂಡ್ ತಿಳಿಸಿದೆ.
ಉಕ್ರೇನ್ ನಲ್ಲಿನ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ರಾಷ್ಟ್ರಗಳ ನಂತರ ಜಪಾನ್ ಕೂಡಾ ರಷ್ಯಾದ ಮೇಲೆ ನಿರ್ಬಂಧ ವಿಧಿಸಿದೆ ಎಂದು ಜಪಾನ್ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.
ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿಗೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ನಾಮನಿರ್ದೇಶನ
ಉಕ್ರೇನ್- ರಷ್ಯಾ ಬಿಕ್ಕಟ್ಟಿನ ನಡುವೆ 2022ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ನಾಮ ನಿರ್ದೇಶನ ಮಾಡುವಂತೆ ಯೂರೋಪಿನ ಅನೇಕ ಹಾಲಿ ಮತ್ತು ಮಾಜಿ ರಾಜಕಾರಣಿಗಳು ನಾರ್ವೆಯ ನೊಬೆಲ್ ಸಮಿತಿಯಲ್ಲಿ ಮನವಿ ಮಾಡಿದ್ದಾರೆ. ಇದರಿಂದಾಗಿ ನಾಮನಿರ್ದೇಶನ ಪ್ರಕ್ರಿಯೆ ಮಾರ್ಚ್ 31 ರವರೆಗೂ ವಿಸ್ತರಣೆಯಾಗಿದೆ.