
ಸಾಂದರ್ಭಿಕ ಚಿತ್ರ
ಕೀವ್: ಉಕ್ರೇನ್ ಯುದ್ಧದಲ್ಲಿ ಕ್ರಿಪ್ಟೊ ಕರೆನ್ಸಿ ಮಹತ್ತರ ಪಾತ್ರ ವಹಿಸುತ್ತಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ರಷ್ಯಾ ವಿರುದ್ಧದ ಯುದ್ಧದಲ್ಲಿ ಕೋಟ್ಯಂತರ ರೂ. ಹಣವನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಲು ಉಕ್ರೇನ್ ಕ್ರಿಪ್ಟೊ ಕರೆನ್ಸಿ ಮೊರೆ ಹೋಗಿದೆ.
ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿಗೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ನಾಮನಿರ್ದೇಶನ
ಕ್ರಿಪ್ಟೊ ಕರೆನ್ಸಿ ಸಹಾಯದಿಂದ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಉಕ್ರೇನ್ ಪರ ಜನರು ಉಕ್ರೇನ್ ಸರ್ಕಾರಕ್ಕೆ ಹಣ ಸಹಾಯ ಮಾಡುತ್ತಿದ್ದಾರೆ. ಈ ಹಣ ಸಂಗ್ರಹಣೆಯನ್ನು ನಿರ್ವಹಿಸಲೆಂದೇ ಉಕ್ರೇನ್ ಪ್ರತ್ಯೇಕ ತಂಡವನ್ನು ನೇಮಿಸಿದೆ.
ಇದನ್ನೂ ಓದಿ: ಶಾಲೆಯಲ್ಲಿ ಅವಮಾನಿಸಿದ್ದಕ್ಕೆ 30 ವರ್ಷಗಳ ನಂತರ ಶಿಕ್ಷಕಿಯನ್ನೇ ಕೊಂದ ಮಾಜಿ ವಿದ್ಯಾರ್ಥಿ!
ಇದುವರೆಗೂ 759 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಉಕ್ರೇನ್ ಸಂಗ್ರಹಿಸಿದೆ ಎನ್ನಲಾಗುತ್ತಿದೆ. ಈ ಹಣವನ್ನು ಸೈನಿಕರ ಬುಲೆಟ್ ಪ್ರೂಫ್ ಜಾಕೆಟ್, ಹೆಲ್ಮೆಟ್ ಮತ್ತು ಜನರ ರೇಷನ್ನಿಗೆ ಬಳಕೆ ಮಾಡುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಷ್ಯಾದ ರಾಕೆಟ್ ದಾಳಿ: ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ನಿಧನ
ಕ್ರಿಪ್ಟೊ ಕರೆನ್ಸಿಯಿಂದ ಸಿಗುತ್ತಿರುವ ಪ್ರಯೋಜನ ಕಂಡು ಸಂತಸ ವ್ಯಕ್ತಪಡಿಸಿರುವ ಅಧಿಕಾರಿಗಳು ಯುದ್ಧ ಗೆದ್ದ ನಂತರ ಕ್ರಿಪ್ಟೊ ಕರೆನ್ಸಿಯನ್ನು ಉಕ್ರೇನ್ ಆರ್ಥಿಕತೆಯ ಭದ್ರ ಅಡಿಪಾಯವಾಗಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಉಕ್ರೇನಿಯನ್ನರಿಗೆ ಆಶ್ರಯ ನೀಡಿದ್ದ ಥಿಯೇಟರ್ ಮೇಲೆ ರಷ್ಯಾ ವೈಮಾನಿಕ ದಾಳಿ: ಹಲವರಿಗೆ ಗಾಯ