'ದಿ ಕಾಶ್ಮೀರ್ ಫೈಲ್ಸ್' ಬಿಡುಗಡೆಗೆ ನ್ಯೂಜಿಲೆಂಡ್ ಸೆನ್ಸಾರ್ ಮಂಡಳಿ ತಡೆ
ನ್ಯೂಜಿಲೆಂಡ್ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ಬಿಡುಗಡೆಗೆ ಮುಂಚೆಯೇ ಸದ್ದು ಮಾಡಿದೆ. ನ್ಯೂಜಿಲೆಂಡ್ನಲ್ಲಿ ಬಿಡುಗಡೆಗೆ ಮುಂಚೆಯೇ ಚಲನಚಿತ್ರವು ಬೇರೆಡೆಗಳಲ್ಲಿ ಸಾರ್ವಜನಿಕರಿಂದ ಪ್ರಶಂಸೆ ಪಡೆದಿದ್ದರೂ, ಇನ್ನೂ ಕೆಲವರಲ್ಲಿ ಕೋಪವನ್ನೂ ಉಂಟು ಮಾಡಿದೆ.
Published: 19th March 2022 08:59 AM | Last Updated: 19th March 2022 12:49 PM | A+A A-

ದಿ ಕಾಶ್ಮೀರ್ ಫೈಲ್ಸ್ ಸ್ಟಿಲ್
ನವದೆಹಲಿ: ನ್ಯೂಜಿಲೆಂಡ್ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ಬಿಡುಗಡೆಗೆ ಮುಂಚೆಯೇ ಸದ್ದು ಮಾಡಿದೆ. ನ್ಯೂಜಿಲೆಂಡ್ನಲ್ಲಿ ಬಿಡುಗಡೆಗೆ ಮುಂಚೆಯೇ ಚಲನಚಿತ್ರವು ಬೇರೆಡೆಗಳಲ್ಲಿ ಸಾರ್ವಜನಿಕರಿಂದ ಪ್ರಶಂಸೆ ಪಡೆದಿದ್ದರೂ, ಇನ್ನೂ ಕೆಲವರಲ್ಲಿ ಕೋಪವನ್ನೂ ಉಂಟು ಮಾಡಿದೆ.
ಒಂದು ಸಮುದಾಯದ ಗುಂಪು ಚಿತ್ರದ ವಿಷಯದ ಬಗ್ಗೆ ದೂರು ನೀಡಿ ಮಂಡಳಿಯನ್ನು ಸಂಪರ್ಕಿಸಿದ ನಂತರ ನ್ಯೂಜಿಲೆಂಡ್ ಸೆನ್ಸಾರ್ ಮಂಡಳಿಯು ಬಿಡುಗಡೆಯನ್ನು ತಡೆಹಿಡಿಯಿತು. ಚಲನಚಿತ್ರವು 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು ವೀಕ್ಷಿಸಲು ಅನುಮತಿಸುವ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.
ಆದರೂ ಈಗ ಮಂಡಳಿಯು ಪ್ರಮಾಣೀಕರಣವನ್ನು ಮತ್ತೆ ಪರಿಶೀಲಿಸಲು ಬಯಸಿದೆ. ಈ ನಡುವೆ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ನ್ಯೂಜಿಲೆಂಡ್ನಲ್ಲಿರುವ ಭಾರತೀಯರಿಗೆ ಒಗ್ಗಟ್ಟಾಗಿರಲು ಮತ್ತು ಚಿತ್ರದ ಬಿಡುಗಡೆಯನ್ನು ತಡೆಯುವ ಕ್ರಮಗಳನ್ನು ವಿರೋಧಿಸಲು ಮನವಿ ಮಾಡಿದ್ದಾರೆ.
ಕೆಲವು ಕೋಮುವಾದಿ ಗುಂಪುಗಳು ನ್ಯೂಜಿಲೆಂಡ್ ಸೆನ್ಸಾರ್ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ ಮೂಲಭೂತವಾದಿಗಳ ಈ ಪ್ರಜಾಪ್ರಭುತ್ವ ವಿರೋಧಿ ತಂತ್ರವನ್ನು ಅತ್ಯಂತ ನಮ್ರತೆಯಿಂದ ವಿರೋಧಿಸಿ ಈ ಚಲನಚಿತ್ರವನ್ನು ಬಿಡುಗಡೆ ಮಾಡಲು ಸಹಕರಿಸಬೇಕೆಂದು ಅವರು ವಿನಂತಿಸಿದ್ದಾರೆ,
ಚಿತ್ರದ ಬಿಡುಗಡೆಗಾಗಿ ನ್ಯೂಜಿಲೆಂಡ್ನಲ್ಲಿರುವ ಭಾರತೀಯರು ಆನ್ಲೈನ್ ಅರ್ಜಿ ಅಭಿಯಾನ ಆರಂಭಿಸಿದ್ದಾರೆ. “ದುರುದ್ದೇಶಪೂರಿತ ಉದ್ದೇಶ ಹೊಂದಿರುವ ಸಂಸ್ಥೆಗಳು ನ್ಯೂಜಿಲೆಂಡ್ನಲ್ಲಿ ಚಿತ್ರದ ಬಿಡುಗಡೆಯನ್ನು ತಡೆಯುತ್ತಿವೆ. ವಿಶ್ವದ ಯಾವುದೇ ದೇಶದಲ್ಲಿ ನಿರ್ಬಂಧಿಸದ ಸಿನಿಮಾವನ್ನು ಬಿಡುಗಡೆಗೆ ಬೆಂಬಲವನ್ನು ತೋರಿಸಬೇಕಾಗಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ ಸಂಬಂಧ ಮರುಪರಿಶೀಲನೆ ನಡೆಸುವುದಾಗಿ ನ್ಯೂಜಿಲೆಂಡ್ ಸಿನಿಮಾ ಸೆನ್ಸಾರ್ ಮಂಡಳಿ ತಿಳಿಸಿದೆ.