
ಮಗುವಿಗೆ ಚಿಕಿತ್ಸೆ ನೀಡುತ್ತಿರುವ ಆಫ್ಘನ್ ವೈದ್ಯೆ
ಕಾಬೂಲ್: ಅಂತಾರಾಷ್ಟ್ರೀಯ ಸಮುದಾಯ ಉಕ್ರೇನ್- ರಷ್ಯಾ ಯುದ್ಧದ ಮೇಲೆ ಗಮನ ಹರಿಸಿದ್ದರೆ ಇತ್ತ ಆಫ್ಘಾನಿಸ್ತಾನದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 13,000 ನವಜಾತ ಶಿಶುಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ತಾಂತ್ರಿಕ ದೋಷದಿಂದ ಪಾಕ್ ನೆಲದಲ್ಲಿ ಬಿದ್ದ ಭಾರತದ ಕ್ಷಿಪಣಿ: ಜಂಟಿ ತನಿಖೆಗೆ ಪಾಕಿಸ್ತಾನ ಒತ್ತಾಯ
ದೇಶದಲ್ಲಿ ಶೇ.95ರಷ್ಟು ಮಂದಿ ಆಹಾರದ ಕೊರತೆ ಎದುರಿಸುತ್ತಿದ್ದಾರೆ. 35 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದ್ದು, ಅಂತಾರಾಷ್ಟ್ರೀಯ ಸಮುದಾಯದ ನೆರವಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: ಒಂದೇ ದಿನದಲ್ಲಿ 81 ಜನಕ್ಕೆ ಮರಣದಂಡನೆ ವಿಧಿಸಿದ ಸೌದಿ ಅರೇಬಿಯ ಸರ್ಕಾರ
ದಿನಕ್ಕೆ 170 ನವಜಾತ ಶಿಶುಗಳು ಅಪೌಷ್ಟಿಕತೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ ಎನ್ನುವುದು ವರದಿಯಿಂದ ತಿಳಿದುಬಂದಿದೆ. ಆರ್ಥಿಕ ನೆರವನ್ನು ತುರ್ತು ಯೋಜನೆಗಳಿಗೆ ವಿನಿಯೋಗಿಸುತ್ತಿರುವ ಬಗ್ಗೆ ಸರ್ಕಾರ ಯಾವುದೇ ಖಾತರಿಯನ್ನು ನೀಡುತ್ತಿಲ್ಲ.
ಇದನ್ನೂ ಓದಿ: ಉಕ್ರೇನ್ ಗೆ ಹರಿದುಬರುತ್ತಿರುವ ನೆರವಿನ ಮಹಾಪೂರ: ವರದಾನವಾದ ಕ್ರಿಪ್ಟೊ ಕರೆನ್ಸಿ
ಅಲ್ಲದೆ ಬ್ಯಾಂಕ್ ವ್ಯವಸ್ಥೆಯ ಮೇಲೆ ನಿರ್ಬಂಧ ಹೇರಲಾಗಿರುವುದರಿಂದ ದೊಡ್ಡ ಮೊತ್ತದ ಹಣಕಾಸು ವಹಿವಾಟನ್ನು ನಡೆಸುವುದು ದುಸ್ತರವಾಗಿದೆ. ಇವೆಲ್ಲಾ ಕಾರಣಗಳಿಂದ ಯಾವುದೇ ಬಗೆಯ ನೆರವನ್ನು ನೀಡಲು ದೇಶಗಳು ಹಿಂದೆಮುಂದೆ ನೋಡುತ್ತಿವೆ.
ಇದನ್ನೂ ಓದಿ: ಢಾಕಾದಲ್ಲಿ ಮತ್ತೆ ಹಿಂದೂ ದೇವಾಲಯಗಳ ಮೇಲೆ ದಾಳಿ: ಇಸ್ಕಾನ್ ರಾಧಾಕಾಂತ ದೇವಾಲಯ ಧ್ವಂಸ