
ಚೀನಾ ನಿರ್ಮಿಸಿರುವ ದ್ವೀಪ
ವಾಷಿಂಗ್ಟನ್: ವಿವಾದಾತ್ಮಕ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮೂರು ಕೃತಕ ದ್ವೀಪಗಳನ್ನು ನಿರ್ಮಿಸಿದ್ದು, ಅವನ್ನು ಸೇನಾನೆಲೆಯಾಗಿ ಮಾರ್ಪಾಡುಮಾಡಿಕೊಂಡಿದೆ ಎಂದು ಅಮೆರಿಕ ಆರೋಪಿಸಿದೆ.
ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧ: ಶರಣಾಗತಿ ಗಡುವು ತಿರಸ್ಕರಿಸಿದ ಉಕ್ರೇನ್
ಈ ಕೃತಕ ದ್ವೀಪಗಳಲ್ಲಿ ಚೀನಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಕ್ಷಿಪಣಿ ನಿರೋಧಕಗಳನ್ನು ಇರಿಸಿದ್ದು. ಅಲ್ಲಿ ಚೀನಾ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸೇನೆಯನ್ನು ನಿಯೋಜಿಸಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಭಾರತದ ವಿದೇಶಾಂಗ ನೀತಿಯನ್ನು ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!
ಚೀನಾದ ಈ ನಡೆ ಪೆಸಿಫಿಕ್ ರಾಷ್ಟ್ರಗಳನ್ನು ಆತಂಕಕ್ಕೀಡುಮಾಡಿದೆ. ಚೀನಾ ಆಕ್ರಮಣಕಾರಿ ನಡೆಯನ್ನು ಕೈಗೊಂಡಿರುವುದಾಗಿ ಅಮೆರಿಕ ಎಚ್ಚರಿಸಿದೆ. ಎರಡನೇ ವಿಶ್ವಮಹಾಯುದ್ಧದ ನಂತರ ಪೆಸಿಫಿಕ್ ಸಾಗರದಲ್ಲಿ ಈ ಮಟ್ಟಿಗಿನ ಸೇನಾ ನಿಯೋಜನೆ ಆಗಿಯೇ ಇಲ್ಲ ಎಂದು ಅಮೆರಿಕ ಹೇಳಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಆಹ್ವಾನ: ಭಾರತಕ್ಕೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭೇಟಿ