ಚೀನಾದಲ್ಲಿ ಪತನಕ್ಕೀಡಾದ ಬೋಯಿಂಗ್ 737-800 ವಿಮಾನ ಅವಶೇಷ ಪತ್ತೆ, ಎಲ್ಲಾ 132 ಮಂದಿ ಕಾಣೆ!

ಪೂರ್ವ ಚೀನಾದಲ್ಲಿ ನಿನ್ನೆ ಸೋಮವಾರ ಅಪರಾಹ್ನ 132 ಮಂದಿಯನ್ನು ಹೊತ್ತು ಸಾಗುತ್ತಿದ್ದ ವಿಮಾನ ದಟ್ಟ ಕಾಡಿನ ಮಧ್ಯೆ ಪತನಕ್ಕೀಡಾದ ಘಟನೆಯಲ್ಲಿ ಎಲ್ಲರೂ ದುರ್ಮರಣಕ್ಕೀಡಾಗಿದ್ದಾರೆ ಎಂದು ಶಂಕಿಸಲಾಗಿದ್ದು ದಶಕದ ಅತಿ ಘೋರ ವಿಪತ್ತು ಎಂದು ಬಣ್ಣಿಸಲಾಗಿದೆ.

Published: 22nd March 2022 09:37 AM  |   Last Updated: 22nd March 2022 12:48 PM   |  A+A-


A piece of wreckage of the China Eastern's flight MU5735 are seen after it crashed on the mountain in Tengxian County.

ವಿಮಾನದ ಅವಶೇಷ

PTI

ಕುಮ್ಮಿಂಗ್: ಪೂರ್ವ ಚೀನಾದಲ್ಲಿ ನಿನ್ನೆ ಸೋಮವಾರ ಅಪರಾಹ್ನ 132 ಮಂದಿಯನ್ನು ಹೊತ್ತು ಸಾಗುತ್ತಿದ್ದ ವಿಮಾನ ದಟ್ಟ ಕಾಡಿನ ಮಧ್ಯೆ ಪತನಕ್ಕೀಡಾದ ಘಟನೆಯಲ್ಲಿ ಎಲ್ಲರೂ ದುರ್ಮರಣಕ್ಕೀಡಾಗಿದ್ದಾರೆ ಎಂದು ಶಂಕಿಸಲಾಗಿದ್ದು ದಶಕದ ಅತಿ ಘೋರ ವಿಪತ್ತು ಎಂದು ಬಣ್ಣಿಸಲಾಗಿದೆ.

ಘಟನಾ ಸ್ಥಳದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ, ಆದರೆ ಇಲ್ಲಿಯವರೆಗೆ, ಸಂಪರ್ಕ ಕಳೆದುಕೊಂಡಿರುವ ವಿಮಾನದಲ್ಲಿದ್ದವರು ಯಾರೂ ಪತ್ತೆಯಾಗಿಲ್ಲ" ಎಂದು ರಾಜ್ಯ ಬ್ರಾಡ್‌ಕಾಸ್ಟರ್ ಸಿಸಿಟಿವಿ ಇಂದು ಬೆಳಿಗ್ಗೆ ತಿಳಿಸಿದೆ. ಅಪಘಾತ ನಡೆದು ಈಗಾಗಲೇ 18 ಗಂಟೆಯಾಗಿದೆ. 

ಬೋಯಿಂಗ್ 737-800 ವಿಮಾನ ಯುನ್ನಾನ್‌ನ ನೈಋತ್ಯ ಪ್ರಾಂತ್ಯದ ಕುನ್ಮಿಂಗ್‌ನಿಂದ ಪೂರ್ವ ಕರಾವಳಿಯ ಗುವಾಂಗ್‌ಝೌ ಕೈಗಾರಿಕಾ ಕೇಂದ್ರದ ಕಡೆಗೆ ಹಾರುತ್ತಿದ್ದಾಗ ಗುವಾಂಗ್‌ಕ್ಸಿ ಪ್ರದೇಶದ ವುಝೌ ನಗರದ ಬಳಿ ಅಪಘಾತಕ್ಕೀಡಾಯಿತು. ಅಪಘಾತಕ್ಕೀಡಾಗುತ್ತಿದ್ದಂತೆ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ನಾಸಾ ಸ್ಯಾಟಲೈಟ್ ನಲ್ಲಿ ಕಾಣಿಸುತ್ತಿದೆ. 

ಇದನ್ನೂ ಓದಿ: ಚೀನಾದಲ್ಲಿ 133 ಪ್ರಯಾಣಿಕರಿದ್ದ ವಿಮಾನ ಪತನ

ಪೂರ್ವ ಚೀನಾದ ವಿಮಾನ 5735 ಸುಮಾರು 29,000 ಅಡಿಗಳಷ್ಟು ಎತ್ತರದಲ್ಲಿ ಪ್ರಯಾಣಿಸುತ್ತಿದ್ದಾಗ ನಿನ್ನೆ ಅಪರಾಹ್ನ ಸುಮಾರು 2.20ಕ್ಕೆ ಕಿರಿದಾದ ಕಡಿದಾದ ಪ್ರದೇಶವನ್ನು ಪ್ರವೇಶಿಸಿತು ಎಂದು ಸ್ಥಳೀಯ ದಾಖಲೆಗಳ ಪ್ರಕಾರ ವೆಬ್ ಸೈಟ್ ಫ್ಲೈಟ್ ರಾಡಾರ್ 24.ಕಾಮ್ ತಿಳಿಸುತ್ತದೆ. 

ವಿಮಾನವು 7,400 ಅಡಿಗಳಿಗೆ ಬಿದ್ದಿದೆ. ಪ್ರಪಾತಕ್ಕೆ ಬೀಳಲು ಆರಂಭಿಸಿ 96 ಸೆಕೆಂಡ್ ಗಳಲ್ಲಿ ದಾಖಲೆಗಳನ್ನು ರವಾನಿಸುವುದನ್ನು ನಿಲ್ಲಿಸಿದೆ. ವಿಮಾನದಲ್ಲಿ 123 ಪ್ರಯಾಣಿಕರು, 9 ಮಂದಿ ಸಿಬ್ಬಂದಿ ಇದ್ದರು ಎಂದು ನಾಗರಿಕ ವಿಮಾನಯಾನ ಆಡಳಿತ ತಿಳಿಸಿದೆ.


Stay up to date on all the latest ವಿದೇಶ news
Poll
Ashok Gehlot-Shashi Tharoor

ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಯಾರು ಹೆಚ್ಚು ಸೂಕ್ತರು?


Result
ಅಶೋಕ್ ಗೆಹ್ಲೋಟ್
ಶಶಿ ತರೂರ್

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp