ಸೌತ್ ಚೈನಾ ಸಮುದ್ರದಲ್ಲಿ ತಮ್ಮ ಹಕ್ಕಿನ ಅನುಸಾರ ಸೇನಾನೆಲೆ ಸ್ಥಾಪನೆ: ಚೀನಾ ಸಮರ್ಥನೆ
ಕೃತಕ ದ್ವೀಪಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಚೀನಾ, ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸೇನೆಯನ್ನು ಅಲ್ಲಿ ನಿಯೋಜಿಸಿದೆ.
Published: 23rd March 2022 07:26 AM | Last Updated: 23rd March 2022 07:26 AM | A+A A-

ಚೀನಾ ವಿದೇಶಾಂಗ ವಕ್ತಾರ ವಾಂಗ್ ವೆನ್ಬಿನ್
ಬೀಜಿಂಗ್: ವಿವಾದಾತ್ಮಕ ಸೌತ್ ಚೈನಾ ಸಮುದ್ರದಲ್ಲಿ ಚೀನಾ ಕೃತಕ ದ್ವೀಪಗಳನ್ನು ನಿರ್ಮಿಸಿ ಅಲ್ಲಿ ಸೇನಾನೆಲೆಗಳನ್ನು ಸ್ಥಾಪಿಸಿರುವುದಾಗಿ ಅಮೆರಿಕ ಇತ್ತೀಚಿಗೆ ಆರೋಪಿಸಿತ್ತು. ಅಲ್ಲದೆ ಈ ಸಂಬಂಧ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಈ ಬಗ್ಗೆ ಚೀನಾ ಕಡೆಗೂ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಚೀನಾದಲ್ಲಿ ಪತನಕ್ಕೀಡಾದ ಬೋಯಿಂಗ್ 737-800 ವಿಮಾನ ಅವಶೇಷ ಪತ್ತೆ, ಎಲ್ಲಾ 132 ಮಂದಿ ಕಾಣೆ!
ಸೌತ್ ಚೈನಾ ಸಮುದ್ರದಲ್ಲಿ ಚೀನಾ ತನ್ನ ಹಕ್ಕಿನ ಅನುಸಾರ ಕೃತಕ ದ್ವೀಪಗಳನ್ನು ನಿರ್ಮಿಸಿದೆ ಎಂದು ಚೀನಾ ವಿದೇಶಾಂಗ ವಕ್ತಾರ ವಾಂಗ್ ವೆನ್ಬಿನ್ ಸಮರ್ಥಿಸಿಕೊಂಡಿದ್ದಾರೆ. ಈ ಕೃತಕ ದ್ವೀಪಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಚೀನಾ, ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸೇನೆಯನ್ನು ಅಲ್ಲಿ ನಿಯೋಜಿಸಿದೆ. ಇದು ಅಮೆರಿಕದ ಆತಂಕಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಭಾರತ-ಚೀನಾ ಸಂಬಂಧ ಸುಧಾರಣೆಗೆ ಎಲ್ಎಸಿಯಲ್ಲಿ ಶಾಂತಿ ಮುಖ್ಯ: ಪ್ರಧಾನಿ ಮೋದಿ
ದಕ್ಷಿಣ ಚೈನಾ ಸಮುದ್ರ ಪ್ರದೇಶದಲ್ಲಿ ಅಮೆರಿಕ ಶಾಂತಿ ಕದಡುವ ಯತ್ನ ಮಾಡುತ್ತಿದೆ ಎಂಡು ಚೀನಾ ಆರೋಪಿಸಿದೆ. ಅಲ್ಲದೆ ಅಲ್ಲಿ ತಾನು ಕೃತಕ ದ್ವೀಪಗಳನ್ನು ನಿರ್ಮಿಸಿರುವುದು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರವೇ ಹೊರತು ಉಲ್ಲಂಘಿಸಿಲ್ಲ ಎಂದಿದೆ.
ಇದನ್ನೂ ಓದಿ: ಸೌತ್ ಚೈನಾ ಸಮುದ್ರದ ಕೃತಕ ದ್ವೀಪಗಳಲ್ಲಿ ಚೀನಾ ಸೇನಾ ನೆಲೆ ಸ್ಥಾಪನೆ: ಅಮೆರಿಕ ಆತಂಕ