ಇಂಧನ ಕೊರತೆಯಿಂದ ತೀವ್ರ ಪ್ರತಿಭಟನೆ, ಹತ್ಯೆ: ಭದ್ರತಾ ಪಡೆ ನಿಯೋಜಿಸಿದ ಶ್ರೀಲಂಕಾ ಸರ್ಕಾರ
ರಾವಣನ ನಾಡು ಶ್ರೀಲಂಕಾದಲ್ಲಿ ಆರ್ಥಿಕ ಕುಸಿತ ಕಾಣುತ್ತಿದ್ದು, ಪೆಟ್ರೋಲ್ ಬಂಕ್ ಗಳ ಮುಂದೆ ಇಂಧನ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಪ್ರತಿಭಟನೆ ಮಾಡುತ್ತಿರುವುದರಿಂದ ಭದ್ರತೆಗೆ ಶ್ರೀಲಂಕಾ ಸರ್ಕಾರ ಭದ್ರತಾಪಡೆಯನ್ನು ನಿಯೋಜಿಸಿದೆ.
Published: 23rd March 2022 12:18 PM | Last Updated: 23rd March 2022 01:29 PM | A+A A-

ಪೆಟ್ರೋಲ್ ಬಂಕ್ ಮುಂದೆ ಸೇರಿದ ಜನಸ್ತೋಮ
ಕೊಲಂಬೊ: ರಾವಣನ ನಾಡು ಶ್ರೀಲಂಕಾದಲ್ಲಿ ಆರ್ಥಿಕ ಕುಸಿತ ಕಾಣುತ್ತಿದ್ದು, ಪೆಟ್ರೋಲ್ ಬಂಕ್ ಗಳ ಮುಂದೆ ಇಂಧನ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಪ್ರತಿಭಟನೆ ಮಾಡುತ್ತಿರುವುದರಿಂದ ಭದ್ರತೆಗೆ ಶ್ರೀಲಂಕಾ ಸರ್ಕಾರ ಭದ್ರತಾಪಡೆಯನ್ನು ನಿಯೋಜಿಸಿದೆ.
ದಕ್ಷಿಣ ಏಷ್ಯಾದ ದ್ವೀಪ ರಾಷ್ಟ್ರ ಶ್ರೀಲಂಕಾ ಏಳು ದಶಕಗಳಿಂದೀಚೆಗೆ ತನ್ನ ಕೆಟ್ಟ ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ, ವಿದ್ಯುತ್, ಆಹಾರ ಮತ್ತು ಅಡುಗೆ ಅನಿಲದಂತಹ ಅಗತ್ಯ ವಸ್ತುಗಳ ಕೊರತೆಯೂ ಕಂಡುಬರುತ್ತಿದೆ.
ಕಳೆದ ಸೋಮವಾರ ಸೀಮೆ ಎಣ್ಣೆಯನ್ನು ಖರೀದಿಸಲು ಸಾಧ್ಯವಾಗದ ಕಾರಣ ಕೋಪಗೊಂಡ ಜನಸಮೂಹವು ಕೊಲಂಬೊದ ಮುಖ್ಯ ರಸ್ತೆಯನ್ನು ಗಂಟೆಗಳ ಕಾಲ ಸಂಚಾರವನ್ನು ತಡೆದ ನಂತರ ಸೈನಿಕರನ್ನು ನಿಯೋಜಿಸಲಾಯಿತು ಎಂದು ಸರ್ಕಾರದ ವಕ್ತಾರ ರಮೇಶ್ ಪತಿರಾನ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಘಟನೆಯ ದೃಶ್ಯಾವಳಿಗಳು ಅಡುಗೆ ಸ್ಟೌವ್ಗಳಿಗೆ ಅಗತ್ಯವಿರುವ ಸೀಮೆಎಣ್ಣೆಯ ಕೊರತೆಯಿಂದ ಮಹಿಳೆಯರು ಪ್ರತಿಭಟನೆ ಮಾಡುತ್ತಿರುವುದನ್ನು ಕಾಣಬಹುದು.ಪ್ರವಾಸಿ ಕೋಚ್ ಗಳನ್ನು ತಡೆಯುವುದನ್ನು ಕಾಣಬಹುದು.
ಕೊಲಂಬೊದ ಹೊರಗೆ ಇಂಧನಕ್ಕಾಗಿ ಉದ್ದನೆಯ ಸರತಿ ಸಾಲಿನಲ್ಲಿ ತನ್ನ ಸ್ಥಳದಲ್ಲಿ ಇನ್ನೊಬ್ಬ ನಿಂತನು ಎಂದು ದ್ವಿಚಕ್ರ ವಾಹನ ಚಾಲಕ ಮತ್ತೊಬ್ಬನನ್ನು ಇರಿದು ಕೊಲೆ ಮಾಡಿದ ನಂತರ ಸರ್ಕಾರ ಭದ್ರತಾ ಸೈನಿಕರನ್ನು ನಿಯೋಜಿಸಿದೆ.
ಇದನ್ನೂ ಓದಿ: ಪೇಪರ್ ಕೊರತೆಯಿಂದ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ ಸರ್ಕಾರ: 45 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಆತಂತ್ರ
ಕಳೆದ ಶನಿವಾರದಿಂದ ಮೂವರು ವೃದ್ಧರು ಇಂಧನ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಆದ ಗಲಭೆಯಲ್ಲಿ ನಿಧನರಾಗಿದ್ದಾರೆ. ಹಲವಾರು ಪೆಟ್ರೋಲ್ ಬಂಕ್ಗಳು ಡೀಸೆಲ್ ಮತ್ತು ಗ್ಯಾಸೋಲಿನ್ ಖರೀದಿಗಾಗಿ ಜನರು ರಾತ್ರಿಯಿಡೀ ನಿಂತಿರುವುದನ್ನು ಕಾಣಬಹುದು. 22 ಮಿಲಿಯನ್ ಜನರಿರುವ ರಾಷ್ಟ್ರದಲ್ಲಿ ಇಂಧನ ಚಿಲ್ಲರೆ ವ್ಯಾಪಾರದ ಮೂರನೇ ಎರಡರಷ್ಟು ಭಾಗವನ್ನು ಹೊಂದಿರುವ ಸರ್ಕಾರಿ ಸಿಲೋನ್ ಪೆಟ್ರೋಲಿಯಂ ಕಾರ್ಪ್ನ ಪಂಪಿಂಗ್ ಸ್ಟೇಷನ್ಗಳಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರ ಕಚೇರಿ ಇಂದು ಬುಧವಾರ ಎಲ್ಲಾ ರಾಜಕೀಯ ಪಕ್ಷಗಳ ಸಭೆಯನ್ನು ಕರೆದಿದೆ. ಆದರೆ ಪ್ರತಿಪಕ್ಷಗಳು ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ವಿದೇಶಿ ಕರೆನ್ಸಿಯ ಕೊರತೆಯನ್ನು ಎದುರಿಸುತ್ತಿದೆ. ವ್ಯಾಪಾರಿಗಳು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕೋವಿಡ್-19 ಸಾಂಕ್ರಾಮಿಕ ದ್ವೀಪರಾಷ್ಟ್ರದ ಪ್ರವಾಸೋದ್ಯಮ ವಲಯದ ಮೇಲೆ ಹೊಡೆತವನ್ನುಂಟುಮಾಡಿದೆ. ಪ್ರವಾಸೋದ್ಯಮ ಶ್ರೀಲಂಕಾದ ಪ್ರಮುಖ ಆದಾಯ ಮೂಲ. ವಿದೇಶದಲ್ಲಿ ಕೆಲಸ ಮಾಡುವ ಶ್ರೀಲಂಕಾದವರಿಂದ ಹಣ ರವಾನೆ ಕೂಡ ತೀವ್ರವಾಗಿ ಕುಸಿದಿದೆ.