ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ವಿರುದ್ಧ ಸೋತ ರಷ್ಯಾ; ಮತ ನಿರ್ಣಯದಿಂದ ದೂರ ಸರಿದ ಭಾರತ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಒಂದು ತಿಂಗಳಾಗುತ್ತಿದೆ. ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ. ಲಕ್ಷಾಂತರ ಮಂದಿ ಉಕ್ರೇನಿಯನ್ನರು ಆಹಾರ, ನೀರು, ಆಶ್ರಯ ಇಲ್ಲದೆ ಬಿಕ್ಕಟ್ಟು ಎದುರಿಸುತ್ತಿದ್ದಾರೆ, ತಮ್ಮವರನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ದಶಕದ ಸಂಕಷ್ಟ ಉಕ್ರೇನ್ ಗೆ ಎದುರಾಗಿದೆ.
Published: 24th March 2022 09:48 AM | Last Updated: 24th March 2022 01:35 PM | A+A A-

ವಿಶ್ವಸಂಸ್ಥೆ ಭದ್ರತಾ ಮಂಡಳಿ
ಯುನೈಟೆಡ್ ನೇಶನ್ಸ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಒಂದು ತಿಂಗಳಾಗುತ್ತಿದೆ. ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ. ಲಕ್ಷಾಂತರ ಮಂದಿ ಉಕ್ರೇನಿಯನ್ನರು ಆಹಾರ, ನೀರು, ಆಶ್ರಯ ಇಲ್ಲದೆ ಬಿಕ್ಕಟ್ಟು ಎದುರಿಸುತ್ತಿದ್ದಾರೆ, ತಮ್ಮವರನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ದಶಕದ ಸಂಕಷ್ಟ ಉಕ್ರೇನ್ ಗೆ ಎದುರಾಗಿದೆ.
ಇಂದು ಉಕ್ರೇನ್ ಗೆ ಜಗತ್ತಿನ ರಾಷ್ಟ್ರಗಳ ಮಾನವೀಯ ಅಗತ್ಯಗಳು ಕಂಡುಬಂದಿದೆ. ಈ ಸಂದರ್ಭದಲ್ಲಿ ನಿನ್ನೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ರಷ್ಯಾ ವಿರುದ್ಧ ಬಹುತೇಕ ರಾಷ್ಟ್ರಗಳು ನಿರ್ಣಯ ಹೊರಡಿಸಿವೆ.
ಉಕ್ರೇನ್ ವಿರುದ್ಧ ತಾನು ಸಾರಿದ್ದ ಯುದ್ಧವನ್ನು ಸಮರ್ಥಿಸಿಕೊಳ್ಳಲು ರಷ್ಯಾಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 15 ಸದಸ್ಯ ರಾಷ್ಟ್ರಗಳ ಪೈಕಿ 9 ಮತಗಳು ಬೇಕಾಗಿತ್ತು. ಇತರ ನಾಲ್ಕು ಖಾಯಂ ಸದಸ್ಯರಾದ US, ಬ್ರಿಟನ್, ಫ್ರಾನ್ಸ್ ಮತ್ತು ಚೀನಾದಿಂದ ಯಾವುದೇ ವೀಟೋ ಇಲ್ಲ.
ಇದನ್ನೂ ಓದಿ: ಭಾರತಕ್ಕೆ ರಷ್ಯಾ ಭಯವಿದೆ ಎಂಬ ಬೈಡನ್ ಹೇಳಿಕೆ ಬೆನ್ನಲ್ಲೇ ಭಾರತ ಅಗತ್ಯ ಮಿತ್ರ ರಾಷ್ಟ್ರ ಎಂದ ಯುಎಸ್
ಆದರೆ ರಷ್ಯಾಕ್ಕೆ ಬೆಂಬಲ ಸಿಕ್ಕಿದ್ದು ಚೀನಾದಿಂದ ಮಾತ್ರ. 13 ಇತರ ಖಾಯಂ ಸದಸ್ಯ ರಾಷ್ಟ್ರಗಳು ಮತದಿಂದ ದೂರವುಳಿದವು. ಅಂದರೆ ಉಕ್ರೇನ್ ವಿರುದ್ಧ ಸಾರಿದ ಯುದ್ಧದಲ್ಲಿ ರಷ್ಯಾಕ್ಕೆ ಬೇರೆ ರಾಷ್ಟ್ರಗಳಿಂದ ಬೆಂಬಲ ಸಂಪೂರ್ಣವಾಗಿ ಸಿಕ್ಕಿಲ್ಲವೆಂದೇ ಅರ್ಥ.
ಉಕ್ರೇನ್ ಮತ್ತು 24 ದೇಶಗಳು ರಚಿಸಿದ ಮತ್ತು ಸುಮಾರು 100 ರಾಷ್ಟ್ರಗಳ ಸಹ ಪ್ರಾಯೋಜಕತ್ವದ ನಿರ್ಣಯವನ್ನು ಜನರಲ್ ಅಸೆಂಬ್ಲಿ ಪರಿಗಣಿಸಲು ಪ್ರಾರಂಭಿಸಿದ ಅದೇ ದಿನ ರಷ್ಯಾಕ್ಕೆ ಸೋಲುಂಟಾಗಿದೆ. ಇದು ಬೆಳೆಯುತ್ತಿರುವ ಮಾನವೀಯ ತುರ್ತುಸ್ಥಿತಿಗೆ ರಷ್ಯಾದ ಆಕ್ರಮಣಶೀಲತೆ ಕಾರಣವಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ.