ಮಂಡಿಯೂರುವುದಕ್ಕಿಂತ ಮರಣವೇ ಲೇಸು, ಹಲವು ಪ್ರದೇಶಗಳಲ್ಲಿ ರಷ್ಯನ್ನರನ್ನು ಹಿಮ್ಮೆಟ್ಟಿಸಿದ್ದೇವೆ: ಕೀವ್ ಮೇಯರ್
ರಷ್ಯಾದ ಮುಂದೆ ಮಂಡಿಯೂರುವುದಕ್ಕಿಂತ ಸಾಯುವುದೇ ಲೇಸು ಎಂದು ಕೀವ್ ಮೇಯರ್ ಹೇಳಿದ್ದಾರೆ. ಕೀವ್ ನಗರದ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ ಸುತ್ತುವರಿದಿದ್ದ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟಿಸಿರುವುದಾಗಿ ಕೀವ್ ನಗರದ ಮೇಯರ್ ಬುಧವಾರ ಹೇಳಿದ್ದಾರೆ.
Published: 24th March 2022 12:19 AM | Last Updated: 24th March 2022 01:30 PM | A+A A-

ಕೀವ್ ಮೇಯರ್ (ಸಂಗ್ರಹ ಚಿತ್ರ)
ಕೀವ್: ರಷ್ಯಾದ ಮುಂದೆ ಮಂಡಿಯೂರುವುದಕ್ಕಿಂತ ಸಾಯುವುದೇ ಲೇಸು ಎಂದು ಕೀವ್ ಮೇಯರ್ ಹೇಳಿದ್ದಾರೆ. ಕೀವ್ ನಗರದ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ ಸುತ್ತುವರಿದಿದ್ದ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟಿಸಿರುವುದಾಗಿ ಕೀವ್ ನಗರದ ಮೇಯರ್ ಬುಧವಾರ ಹೇಳಿದ್ದಾರೆ.
ಉಕ್ರೇನ್ ರಾಜಧಾನಿಯನ್ನ ರಷ್ಯಾಗೆ ಒಪ್ಪಿಸಲ್ಲ. ಬದಲಾಗಿ ಇಲ್ಲಿನ ಪ್ರತಿ ಕಟ್ಟಡವನ್ನು ರಕ್ಷಣೆ ಮಾಡುವುದಾಗಿ ಮೇಯರ್ ವಿಟಾಲಿ ಕ್ಲಿಟ್ಸ್ಚ್ ಕೊ ಪ್ರತಿಜ್ಞೆ ಮಾಡಿದರು. ಕೀವ್ ನಗರದ ಉತ್ತರ ಮತ್ತು ಪೂರ್ವ ಹೊರವಲಯದಲ್ಲಿ ರಷ್ಯಾ ಯುದ್ಧಕ್ಕಿಳಿದಿತ್ತು. ಇದೀಗ ಕೀವ್ ನಮ್ಮ ತೆಕ್ಕೆಯಲ್ಲಿ ಸುರಕ್ಷಿತವಾಗಿದೆ. ಈಗಾಗಲೇ ಸಣ್ಣ ನಗರಗಳಾದ ಮಕರಿವ್ ಮತ್ತು ಇರ್ಪಿನ್ ಉಕ್ರೇನ್ ಸೇನೆಯಿಂದ ರಕ್ಷಿಸಲ್ಪಟ್ಟಿದೆ ಎಂದಿದ್ದಾರೆ.
ಇದನ್ನೂ ಓದಿ: ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದ ಉಕ್ರೇನ್ ಸೇನೆ; ಯುದ್ಧಭೂಮಿಯ ಆವೇಗದಲ್ಲಿ ಬದಲಾವಣೆ ಗೋಚರ: ಪೆಂಟಗನ್
ಕಳೆದ ಫೆಬ್ರವರಿ ೨೪ ರಂದು ರಷ್ಯಾ ಸೇನಾ ಪಡೆ ಕೀವ್ ಹೊರವಲಯಗಳವರೆಗೆ ನುಗ್ಗಿ ಬಂದಿತ್ತು. ಅದ್ರೆ ತಿಂಗಳು ಕಳೆದ್ರೂ ರಷ್ಯಾ ಕೀವ್ ನಗರವನ್ನ ವಶಕ್ಕೆ ಪಡೆಯಲು ವಿಫಲವಾಗಿದ್ದು ಉಕ್ರೇನ್ ಪಡೆ ಹೊಡೆದೋಡಿಸಿದೆ. ರಾಜಧಾನಿ ಕೀವ್ ಉಕ್ರೇನ್ ಹೃದಯದಂತಿದ್ದು ಇದನ್ನ ತನ್ನ ತೆಕ್ಕೆಗೆ ಪಡೆಯಲು ರಷ್ಯಾ ಹವಣಿಸ್ತಿದೆ. ಆದರೆ ಈ ಯತ್ನದಲ್ಲಿ ವಿಫಲವಾಗಿದ್ದು ಕೀವ್ ನಗರದ ಪ್ರತಿ ಕಟ್ಟಡ, ಪ್ರತಿ ರಸ್ತೆ , ಪ್ರತಿ ಸಣ್ಣ ಭಾಗವನ್ನೂ ನಾವು ಉಳಿಸಿಕೊಳ್ಳಲು ನಾವು ಹೋರಾಡುವುದಾಗಿ ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ ಕೊ ಹೇಳಿದ್ದಾರೆ.