ಪಾಕಿಸ್ತಾನ: ಸರ್ಕಾರ ಉಳಿಸಿಕೊಳ್ಳಲು ಕಸರತ್ತು; ಪಿಎಂಎಲ್ ಕ್ಯೂ ಮುಖಂಡ ಪಂಜಾಬ್ ಸಿಎಂ; ಇಮ್ರಾನ್ ಖಾನ್ ಬೆಂಬಲ
ಪಾಕಿಸ್ತಾನ್ ತೆಹ್ರಿಕ್ ಇ-ಇನ್ಸಾಪ್ ಸೋಮವಾರ ಪಂಜಾಬ್ ಪ್ರಾಂತ್ಯದಲ್ಲಿ ತನ್ನ ಮಿತ್ರಪಕ್ಷವಾದ ಪಿಎಂಎಲ್-ಕ್ಯೂ ನಾಯಕ ಚೌಧರಿ ಪರ್ವೈಜ್ ಇಲಾಹಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬೆಂಬಲಿಸುವುದಾಗಿ ಹೇಳಿದೆ.
Published: 28th March 2022 08:50 PM | Last Updated: 29th March 2022 01:22 PM | A+A A-

ರಾಷ್ಟ್ರೀಯ ಅಸೆಂಬ್ಲಿ ಬಳಿ ಇಮ್ರಾನ್ ಖಾನ್ ಫೋಸ್ಟರ್
ಲಾಹೋರ್: ನ್ಯಾಷನಲ್ ಅಸೆಂಬ್ಲಿಯಲ್ಲಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿರುವಂತೆಯೇ, ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರಿಕ್ ಇ-ಇನ್ಸಾಪ್ ಸೋಮವಾರ ಪಂಜಾಬ್ ಪ್ರಾಂತ್ಯದಲ್ಲಿ ತನ್ನ ಮಿತ್ರಪಕ್ಷವಾದ ಪಿಎಂಎಲ್-ಕ್ಯೂ ನಾಯಕ ಚೌಧರಿ ಪರ್ವೈಜ್ ಇಲಾಹಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬೆಂಬಲಿಸುವುದಾಗಿ ಹೇಳಿದೆ. ಪ್ರಧಾನಿಯವರ ರಾಜಕೀಯ ಸಂವಹನದ ಸಹಾಯಕ ಶಹಬಾಜ್ ಗಿಲ್ ಟ್ವಿಟ್ಟರ್‌ನಲ್ಲಿ ಈ ಘೋಷಣೆ ಮಾಡಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್-ಇ- ಇನ್ಸಾಫ್ ಚೌಧರಿ ಪರ್ವೈಜ್ ಇಲಾಹಿ ಅವರನ್ನು ಪಂಜಾಬಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬೆಂಬಲಿಸುತ್ತದೆ ಮತ್ತು ಅವಿಶ್ವಾಸ ನಿರ್ಣಯದ ಮಧ್ಯೆ ಪ್ರಧಾನಿಯನ್ನು ಬೆಂಬಲಿಸುವುದಾಗಿ ಪಿಎಂಎಲ್-ಕ್ಯೂ ಘೋಷಿಸಿದೆ ಎಂದು ಗಿಲ್ ಉರ್ದುವಿನಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಲುಗಾಡುತ್ತಿದೆ ಇಮ್ರಾನ್ ಖಾನ್ ಕುರ್ಚಿ: ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ, ಮಾ.31ಕ್ಕೆ ಚರ್ಚೆ!
ಪ್ರಧಾನಿ ಇಮ್ರಾನ್ ಖಾನ್ ಇಲಾಹಿ ಅವರನ್ನು ಸಿಎಂ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಫರೂಖ್ ಹಬೀಬ್ ಹೇಳಿದ್ದಾರೆ. ಇಲಾಹಿ ಮುಖ್ಯಮಂತ್ರಿ ಹುದ್ದೆಯನ್ನು ಸ್ವೀಕರಿಸಿದ್ದಾರೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್-ಕ್ಯೂ (ಪಿಎಂಎಲ್-ಕ್ಯೂ) ನಾಯಕ ಮೂನಿಸ್ ಖಚಿತಪಡಿಸಿದ್ದಾರೆ.
ಖಾನ್ ಅವರ ಆಶ್ರಿತ ಮತ್ತು ಕೈಯಿಂದ ಆಯ್ಕೆಯಾದ ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಸೋಮವಾರ ತಮ್ಮ ರಾಜೀನಾಮೆಯನ್ನು ಪ್ರಧಾನಿಗೆ ಸಲ್ಲಿಸಿದರು. ಕೇಂದ್ರ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಪಿಟಿಐನ ಪ್ರಮುಖ ಮಿತ್ರಪಕ್ಷವಾದ ಪಿಎಂಎಲ್ ಕ್ಯೂ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಕೇವಲ ಐದು ಸದಸ್ಯರನ್ನು ಹೊಂದಿದ್ದರೂ ನಡೆಯುತ್ತಿರುವ ರಾಜಕೀಯ ನಾಟಕದಲ್ಲಿ ಪ್ರಮುಖ ಪಾತ್ರ ವಹಿಸಿದೆ.