ಇಸ್ರೇಲ್ ಪ್ರಧಾನಿಗೆ ಕೋವಿಡ್ ಸೋಂಕು: ಭಾರತ ಪ್ರವಾಸಕ್ಕೆ ಗೈರು ಸಾಧ್ಯತೆ!!
ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಸೋಮವಾರ COVID-19 ಸೋಂಕು ದೃಢಪಟ್ಟಿದ್ದು, ಅವರ ಬಹುನಿರೀಕ್ಷಿತ ಭಾರತ ಪ್ರವಾಸಕ್ಕೆ ಗೈರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Published: 28th March 2022 01:19 PM | Last Updated: 28th March 2022 01:19 PM | A+A A-

ಸಂಗ್ರಹ ಚಿತ್ರ
ಟೆಲ್ ಅವೀವ್: ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಸೋಮವಾರ COVID-19 ಸೋಂಕು ದೃಢಪಟ್ಟಿದ್ದು, ಅವರ ಬಹುನಿರೀಕ್ಷಿತ ಭಾರತ ಪ್ರವಾಸಕ್ಕೆ ಗೈರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಬಗ್ಗೆ ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ ಅವರ ಮಾಧ್ಯಮ ಸಲಹೆಗಾರರು ಮಾಹಿತಿ ನೀಡಿದ್ದು, ಪ್ರಧಾನಿ ಬೆನೆಟ್ ಅವರು ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಮತ್ತು ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದ್ದಾರೆ.
ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್, ಆಂತರಿಕ ಭದ್ರತಾ ಸಚಿವ ಒಮರ್ ಬಾರ್ಲೆವ್, ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಅವಿವ್ ಕೊಹಾವಿ, ಶಿನ್ ಬೆಟ್ ಮುಖ್ಯಸ್ಥ ರೋನೆನ್ ಬಾರ್, ಪೊಲೀಸ್ ಮುಖ್ಯಸ್ಥ ಕೋಬಿ ಶಬ್ಟೈ ಮತ್ತು ಇತರರ ಭಾಗವಹಿಸುವಿಕೆಯೊಂದಿಗೆ ಬೆನೆಟ್ ಇಂದು ಬೆಳಿಗ್ಗೆ ಸಾಂದರ್ಭಿಕ ಮೌಲ್ಯಮಾಪನವನ್ನು ನಡೆಸಲಿದ್ದಾರೆ ಎನ್ನಲಾಗಿದೆ.
ಇನ್ನು 50 ವರ್ಷದ ಬೆನೆಟ್ ಅವರು ಏಪ್ರಿಲ್ 3 ರಿಂದ 5 ರವರೆಗೆ ಭಾರತಕ್ಕೆ ಭೇಟಿ ನೀಡಬೇಕಿತ್ತು. ಭೇಟಿಯನ್ನು ರದ್ದುಗೊಳಿಸಲಾಗುತ್ತದೆಯೇ ಎಂಬುದು ಇನ್ನೂ ತಿಳಿದಿಲ್ಲ.