ಚೀನಾದ ಶಾಂಘೈನಲ್ಲಿ ಕೊರೊನಾ ಹಾವಳಿ: ಕಳೆದ 2 ವರ್ಷಗಳಲ್ಲಿ ಇದೇ ಮೊದಲ ಬಾರಿ ಸಂಪೂರ್ಣ ಲಾಕ್ ಡೌನ್
ಮನೆಯೊಳಗೇ ಉಳಿದುಕೊಳ್ಳುವ ಭಯದಿಂದ ಜನರು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ವಸ್ತುಗಳನ್ನು, ಆಹಾರ ಸಾಮಗ್ರಿಯನ್ನು ಖರೀದಿಸುತ್ತಿದ್ದಾರೆ. ಇದರಿಂದ ಕೃತಕ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ.
Published: 28th March 2022 04:49 PM | Last Updated: 28th March 2022 04:51 PM | A+A A-

ಶಾಂಘೈ
ಬೀಜಿಂಗ್: ಚೀನಾದಲ್ಲಿ ಒಂದೆರಡು ತಿಂಗಳುಗಳಿಂದ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು ದೇಶಾದ್ಯಂತ ಮತ್ತೆ ಸಾಂಕ್ರಾಮಿಕ ಭೀತಿ ಎದುರಾಗಿದೆ. ಶಾಂಘೈ ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಅಧಿಕಾರಿಗಳು ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಪ್ರಧಾನಿಗೆ ಕೋವಿಡ್ ಸೋಂಕು: ಭಾರತ ಪ್ರವಾಸಕ್ಕೆ ಗೈರು ಸಾಧ್ಯತೆ!!
2.6 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಶಾಂಘೈ ಚೀನಾದ ದೊಡ್ಡ ನಗರಗಳ ಪೈಕಿ ಒಂದು. ಲಾಕ್ ಡೌನ್ ಶೋಷಣೆ ಹಿನ್ನೆಲೆಯಲ್ಲಿ ನಗರದ ಸೂಪರ್ ಮಾರ್ಕೆಟ್ ಗಳಿಗೆ ಜನರು ಮುಗಿ ಬಿದ್ದಿದ್ದಾರೆ.
ಇದನ್ನೂ ಓದಿ: ಕಾಂಡೋಮ್ ಖರೀದಿಗೆ ಮುಗಿ ಬಿದ್ದ ರಷ್ಯಾ ಜನತೆ: ವ್ಯಾಪಾರದಲ್ಲಿ ಶೇ.170 ಪ್ರತಿಶತ ಏರಿಕೆ
ಮನೆಯೊಳಗೇ ಉಳಿದುಕೊಳ್ಳುವ ಭಯದಿಂದ ಜನರು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ವಸ್ತುಗಳನ್ನು, ಆಹಾರ ಸಾಮಗ್ರಿಯನ್ನು ಖರೀದಿಸುತ್ತಿದ್ದಾರೆ. ಇದರಿಂದ ಕೃತಕ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಹಣಕಾಸು ಸೇರಿದಂತೆ ಅಗತ್ಯ ಸೇವೆಗೆ ಸಂಬಂಧಿಸಿದಂತೆ ಸಂಸ್ಥೆಯ ಉದ್ಯೋಗಿಗಳು ಕಚೇರಿಯಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದು, ಆಫೀಸನ್ನೇ ವಾಸಸ್ಥಳವನ್ನಾಗಿ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಜೈಲಿನಲ್ಲೇ ಗೆಳತಿ ಸ್ಟೆಲ್ಲಾರನ್ನು ವಿವಾಹವಾದ ವಿಕಿಲೀಕ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ!