ರಷ್ಯಾ ದಾಳಿ ಮುಂದುವರಿಕೆ: ಉಕ್ರೇನ್ ಜೊತೆಗಿನ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ- ಕ್ರೆಮ್ಲಿನ್
ಉಕ್ರೇನ್ ಜೊತೆಗಿನ ಹೊಸ ಸುತ್ತಿನ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಕ್ರೆಮ್ಲಿನ್ ಹೇಳಿದೆ. ಉಕ್ರೇನ್ ತನ್ನ ಲಿಖಿತ ಪ್ರಸ್ತಾಪಗಳನ್ನು ಸಲ್ಲಿಸಿರುವುದು ಸಕಾರಾತ್ಮಕ ಅಂಶ ಆದರೆ ಏನೋ ಭರವಸೆ ಅಥವಾ ಯಾವುದೇ ಪ್ರಗತಿಗಳಾಗಿವೆ ಎಂದು ನಾವು ಹೇಳಲು ಸಾಧ್ಯವಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
Published: 30th March 2022 10:02 PM | Last Updated: 31st March 2022 01:46 PM | A+A A-

ರಷ್ಯಾ ದಾಳಿಯಿಂದ ಚೆರ್ನಿಹಿವ್ ನಲ್ಲಿ ಹಾನಿಯಾಗಿರುವ ಮಾರುಕಟ್ಟೆಯ ಚಿತ್ರ
ಮಾಸ್ಕೋ: ಉಕ್ರೇನ್ ಜೊತೆಗಿನ ಹೊಸ ಸುತ್ತಿನ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಕ್ರೆಮ್ಲಿನ್ ಹೇಳಿದೆ. ಉಕ್ರೇನ್ ತನ್ನ ಲಿಖಿತ ಪ್ರಸ್ತಾಪಗಳನ್ನು ಸಲ್ಲಿಸಿರುವುದು ಸಕಾರಾತ್ಮಕ ಅಂಶ ಆದರೆ ಏನೋ ಭರವಸೆ ಅಥವಾ ಯಾವುದೇ ಪ್ರಗತಿಗಳಾಗಿವೆ ಎಂದು ನಾವು ಹೇಳಲು ಸಾಧ್ಯವಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಇಸ್ತಾನ್ಬುಲ್ನಲ್ಲಿ ಮಂಗಳವಾರ ನಡೆದ ಮಾತುಕತೆಯ ನಂತರ ಇನ್ನೂ ಸಾಕಷ್ಟು ಕೆಲಸಗಳಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಂಗಳವಾರ, ಉಕ್ರೇನ್ ಶಾಂತಿ ಒಪ್ಪಂದಕ್ಕೆ ವಿವರವಾದ ಚೌಕಟ್ಟನ್ನು ರೂಪಿಸಿತ್ತು. ಅದರಡಿ ದೇಶವು ತಟಸ್ಥವಾಗಿರುತ್ತದೆ ಆದರೆ ಯುಎಸ್, ಬ್ರಿಟನ್, ಫ್ರಾನ್ಸ್, ಟರ್ಕಿ, ಚೀನಾ ಮತ್ತು ಪೋಲೆಂಡ್ ಸೇರಿದಂತೆ ಮೂರನೇ ರಾಷ್ಟ್ರಗಳ ಗುಂಪಿನಿಂದ ಅದರ ಭದ್ರತೆಯನ್ನು ಖಾತರಿಪಡಿಸಲಾಗುತ್ತದೆ.
2014 ರಲ್ಲಿ ರಷ್ಯಾದಿಂದ ಸ್ವಾಧೀನಪಡಿಸಿಕೊಂಡ ಕ್ರಿಮಿಯನ್ ಪೆನಿನ್ಸುಲಾದ ಭವಿಷ್ಯದ ಬಗ್ಗೆ 15 ವರ್ಷಗಳ ಅವಧಿಯಲ್ಲಿ ಮಾತುಕತೆ ನಡೆಸಲು ಅದು ಸಿದ್ಧವಾಗಿದೆ ಎಂದು ಅದು ಹೇಳಿದೆ. ಮಾತುಕತೆಯಲ್ಲಿ ರಷ್ಯಾದ ಮುಖ್ಯ ಪ್ರತಿನಿಧಿ ವ್ಲಾಡಿಮಿರ್ ಮೆಡಿನ್ಸ್ಕಿ ತಮ್ಮ ಫಲಿತಾಂಶಗಳನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ವರದಿ ಮಾಡಿದ್ದಾರೆ ಎಂದು ಪೆಸ್ಕೋವ್ ಹೇಳಿದರು.
ಈ ಮಧ್ಯೆ, ಇತರ ಪ್ರದೇಶಗಳಿಂದ ಕೆಲವು ಘಟಕಗಳನ್ನು ಮರು ನಿಯೋಜಿಸಿದ ನಂತರ ರಷ್ಯಾದ ಪಡೆಗಳು ಪೂರ್ವ ನಗರವಾದ ಇಜಿಮ್ ಮತ್ತು ಪೂರ್ವ ಡೊನೆಟ್ಸ್ಕ್ ಪ್ರದೇಶದ ಸುತ್ತಲೂ ತಮ್ಮ ದಾಳಿಯನ್ನು ತೀವ್ರಗೊಳಿಸುತ್ತಿವೆ ಎಂದು ಉಕ್ರೇನಿಯನ್ ಮಿಲಿಟರಿ ಹೇಳಿದೆ.