ನಿರೂಪಕ ಕ್ರಿಸ್ ರಾಕ್ಗೆ ಕಪಾಳಮೋಕ್ಷ ಬೆನ್ನಲ್ಲೇ ನಟ ವಿಲ್ ಸ್ಮಿತ್ ಮನೆಗೆ ಪೊಲೀಸರು ಭೇಟಿ, ಪರಿಶೀಲನೆ!
ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ನಟ ವಿಲ್ ಸ್ಮಿತ್ ಅವರ ಲಾಸ್ ಏಂಜಲೀಸ್ನಲ್ಲಿರುವ ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
Published: 30th March 2022 02:57 PM | Last Updated: 30th March 2022 02:57 PM | A+A A-

ವಿಲ್ ಸ್ಮಿತ್
ಲಾಸ್ ಏಂಜಲೀಸ್: ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ನಟ ವಿಲ್ ಸ್ಮಿತ್ ಅವರ ಲಾಸ್ ಏಂಜಲೀಸ್ನಲ್ಲಿರುವ ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ವಿಲ್ ಸ್ಮಿತ್ ಅವರ ಮನೆ ಮೇಲೆ ಡ್ರೋಣ್ ಹಾರಾಟದ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ತಕ್ಷಣ ನಾವು ಪೊಲೀಸರನ್ನ ಡ್ರೋಣ್ ಪತ್ತೆಹಚ್ಚಲು ಸ್ಥಳಕ್ಕೆ ಕಳಿಸಲಾಯಿತು. ಆದರೆ ಡ್ರೋನ್ ಅನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್ ಗೆ ಕಪಾಳ ಮೋಕ್ಷ: ಕ್ಷಮೆ ಕೇಳಿದ ನಟ ವಿಲ್ ಸ್ಮಿತ್
ಡ್ರೋಣ್ ಹಾರಾಟದ ಬಗ್ಗೆ ಕರೆ ಸ್ವೀಕರಿಸಿದ ನಂತರ ಸ್ಮಿತ್ ಅವರ ಕ್ಯಾಲಬಾಸಾಸ್ ಭವನಕ್ಕೆ ಪೊಲೀಸ್ ತಂಡ ಭೇಟಿ ನೀಡಿತು ಎಂದು ವಕ್ತಾರರು ಹೇಳಿದ್ದಾರೆ.
ಆದರೆ ವಿಲ್ ಸ್ಮಿತ್ ಅವರ ಮನೆ ಮೇಲೆ ಡ್ರೋಣ್ ಹಾರಾಡುತ್ತಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದು ಯಾರು ಎಂಬುದು ಸಹ ಇದುವರೆಗೂ ಪತ್ತೆಯಾಗಿಲ್ಲ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕ ಕ್ರಿಸ್ ರಾಕ್ ಅವರು ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್-ಸ್ಮಿತ್ ಬಗ್ಗೆ ಮಾಡಿದ ಹಾಸ್ಯಕ್ಕೆ ಕೆರಳಿ ವಿಲ್ ಸ್ಮಿತ್, ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ್ರು. ಈ ಪ್ರಸಂಗದ ಬೆನ್ನಲ್ಲೇ ಇಂಥದ್ದೊಂದು ಘಟನೆ ನಡೆದಿದೆ.