
ಸಾಂದರ್ಭಿಕ ಚಿತ್ರ
ನವದೆಹಲಿ: ಶ್ರೀಲಂಕಾ ಸರ್ಕಾರ ಭಾರತಕ್ಕೆ ಮೂರು ಬೃಹತ್ ಪವನಶಕ್ತಿ ಉತ್ಪಾದನಾ(ವಿಂಡ್ ಫಾರ್ಮ್) ಪ್ರಾಜೆಕ್ಟ್ ಗಳನ್ನು ಹಸ್ತಾಂತರಿಸಲು ತೀರ್ಮಾನಿಸಿದೆ. ಇದಕ್ಕೆ ಮುಂಚೆ ಈ ಮೂರೂ ಪ್ರಾಜೆಕ್ಟ್ ಗಳನ್ನು ಶ್ರೀಲಂಕಾ ಚೀನಾಗೆ ಹಸ್ತಾಂತರಿಸಿತ್ತು ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಇಂಧನ ಕೊರತೆಯಿಂದ ತೀವ್ರ ಪ್ರತಿಭಟನೆ, ಹತ್ಯೆ: ಭದ್ರತಾ ಪಡೆ ನಿಯೋಜಿಸಿದ ಶ್ರೀಲಂಕಾ ಸರ್ಕಾರ
91 ಕೋಟಿ ವೆಚ್ಚದ ಈ ಯೋಜನೆಯಡಿ ಶ್ರೀಲಂಕಾದ ಮೂರು ದ್ವೀಪಗಳಲ್ಲಿ ವಿಂಡ್ ಮಿಲ್ ಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸಲಾಗುವುದು. ಈ ಹಿಂದೆ ಈ ಯೋಜನೆಯನ್ನು ಶ್ರೀಲಂಕಾ ಚೀನಾಗೆ ನೀಡಿತ್ತು. ಆಗ ಭಾರತ ಈ ಯೋಜನೆಯನ್ನು ವಿರೋಧಿಸಿತ್ತು.
ಇದನ್ನೂ ಓದಿ: ಪೇಪರ್ ಕೊರತೆಯಿಂದ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ ಸರ್ಕಾರ: 45 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಆತಂತ್ರ
ಈ ಯೋಜನೆ ಕಾರ್ಯಗತಗೊಳ್ಳುತ್ತಿರುವ ದ್ವೀಪಗಳು ಭಾರತದ ವ್ಯಾಪ್ತಿಗೆ ಹತ್ತಿರವಿರುವುದರಿಂದ ದೇಶದ ಭದ್ರತೆಗೆ ಚೀನಾದಿಂದ ನೇರ ಅಪಾಯ ಎದುರಾಗಿತ್ತು. ಆ ಹಿನ್ನೆಲೆಯಲ್ಲಿ ಭಾರತ ಈ ಯೋಜನೆಯನ್ನು ವಿರೋಧಿಸಿತ್ತು. ಈಗ ಈ ಯೋಜನೆ ಭಾರತದ ಪಾಲಾಗಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಭಾರತ ಸರ್ಕಾರ ನೆರವು ನೀಡಿತ್ತು ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಶ್ರೀಲಂಕಾಗೆ ಎಸ್ ಬಿಐ ನಿಂದ 1 ಬಿಲಿಯನ್ ಡಾಲರ್ ಆರ್ಥಿಕ ನೆರವು