ಲಂಡನ್: ಟಿಪ್ಪು ವಿಜಯದ ವರ್ಣಚಿತ್ರ ಬರೋಬ್ಬರಿ 6.28 ಕೋಟಿ ರೂಪಾಯಿಗೆ ಮಾರಾಟ!
ಟಿಪ್ಪು ಸುಲ್ತಾನ್ ಕಾಲದ ವರ್ಣಚಿತ್ರ ಬರೋಬ್ಬರಿ ರೂ. 6.28 ಕೋಟಿಗೆ ಮಾರಾಟವಾಗಿದೆ. 1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮೇಲೆ ಮೈಸೂರು ದೊರೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಸಾಧಿಸಿದ ಐತಿಹಾಸಿಕ ವಿಜಯವನ್ನು ಪ್ರತಿಬಿಂಬಿಸುವ ವರ್ಣ ಚಿತ್ರ ಬುಧವಾರ ಲಂಡನ್ ನಲ್ಲಿ 630,000 ಪೌಂಡ್ ಗಳಿಗೆ (ರೂ. 6.28 ಕೋಟಿ) ಮಾರಾಟವಾಗಿದೆ.
Published: 31st March 2022 12:52 AM | Last Updated: 31st March 2022 01:47 PM | A+A A-

ಟಿಪ್ಪು ವಿಜಯದ ವರ್ಣಚಿತ್ರ
ಲಂಡನ್: ಟಿಪ್ಪು ಸುಲ್ತಾನ್ ಕಾಲದ ವರ್ಣಚಿತ್ರ ಬರೋಬ್ಬರಿ ರೂ. 6.28 ಕೋಟಿಗೆ ಮಾರಾಟವಾಗಿದೆ. 1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮೇಲೆ ಮೈಸೂರು ದೊರೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಸಾಧಿಸಿದ ಐತಿಹಾಸಿಕ ವಿಜಯವನ್ನು ಪ್ರತಿಬಿಂಬಿಸುವ ವರ್ಣ ಚಿತ್ರ ಬುಧವಾರ ಲಂಡನ್ ನಲ್ಲಿ 630,000 ಪೌಂಡ್ ಗಳಿಗೆ (ರೂ. 6.28 ಕೋಟಿ) ಮಾರಾಟವಾಗಿದೆ.
ಈ ವರ್ಣಚಿತ್ರ ಎರಡನೇ ಆಂಗ್ಲೋ- ಮೈಸೂರು ಯುದ್ಧದ ಭಾಗವಾಗಿ ಸೆಪ್ಟೆಂಬರ್ 10, 1780 ರಂದು ನಡೆದ 'ಪೊಲ್ಲಿಲೂರ್ ಕದನದ ದಿಗ್ವಿಜಯದ ಸಂಕೇತವಾಗಿದ್ದು, ಹರಾಜು ಪ್ರಕ್ರಿಯೆಯಲ್ಲಿ ಇಸ್ಲಾಮಿಕ್ ವರ್ಲ್ಡ್ ಹಾಗೂ ಭಾರತೀಯರ ಕೇಂದ್ರಬಿಂದುವಾಗಿತ್ತು. ವಿಜಯದ ಸಂಕೇತ ಹಾಗೂ ವರ್ಣಕಲೆಯಲ್ಲಿ ಮೂಡಿಬಂದಿರುವ ವರ್ಣಚಿತ್ರ ದಾಖಲೆಯ 6. 28 ಕೋಟಿ ರೂ.ಗೆ ಹರಾಜು ಹಾಕಲಾಗಿದೆ.
ಪೊಲ್ಲಿಲೂರ್ ಕದನದ ವಿಜಯದ ಸ್ಮರಣಾರ್ಥ ಟಿಪ್ಪು ಸುಲ್ತಾನ್ 1784ರಲ್ಲಿ ಸೆರಿಂಗಪಟ್ಟಣಂನಲ್ಲಿ ಹೊಸದಾಗಿ ನಿರ್ಮಿಸಲಾದ ದರಿಯಾ ದೌಲತ್ ಬಾಗ್ ನಲ್ಲಿ ಪೊಲ್ಲಿಲೂರ್ ಕದನದ ವರ್ಣಚಿತ್ರ ಮಾಡಿಸಿದ್ರು. ಹರಾಜು ಆದ ಚಿತ್ರಕಲೆ ಸುಮಾರು 32 ಅಡಿ ಉದ್ದ ಹಾಗೂ 10 ಅಡಿ ಎತ್ತರವಿದೆ.