
ಫವಾದ್ ಚೌಧರಿ
ಇಸ್ಲಾಮಾಬಾದ್: ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸುವ ಪ್ರಯತ್ನದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಆರೋಪಿಸಿದ್ದಾರೆ.
ಲಂಡನ್ ನಲ್ಲಿ ಕುಳಿತು ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸಲು ನವಾಜ್ ಷರೀಫ್ ಪ್ರಯತ್ನಿಸುತ್ತಿದ್ದಾರೆ. ಭಾರತದೊಂದಿಗೆ ನವಾಜ್ ಷರೀಫ್ ಅವರ ಸಂಬಂಧ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಭಾರತ ಮತ್ತು ಇಸ್ರೇಲ್ ನೊಂದಿಗೆ ನವಾಜ್ ಷರೀಫ್ ಹಲವು ಸಭೆಗಳನ್ನು ನಡೆಸಿದ್ದನ್ನು ಮರೆತಿಲ್ಲ ಎಂದು ಫವಾದ್ ಚೌಧರಿ ಹೇಳಿದ್ದಾರೆ.
ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸುವಲ್ಲಿ ಕೆಲ ಪಾಕಿಸ್ತಾನದ ಮಾಧ್ಯಮಗಳು ಭಾಗಿಯಾಗಿವೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಬಹುತೇಕ ಖಚಿತ ಎಂದು ನಂಬಲಾಗಿದೆ. ಬಂಡಾಯ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಅವಿಶ್ವಾಸ ನಿರ್ಣಯವನ್ನು ವಾಪಸ್ ಪಡೆಯದಿದ್ದರೆ ನ್ಯಾಷನಲ್ ಅಸೆಂಬ್ಲಿಯನ್ನು ವಿಸರ್ಜಿಸುವುದಾಗಿ ಇಮ್ರಾನ್ ಖಾನ್ ಬೆದರಿಕೆ ಹಾಕುತ್ತಿದ್ದಾರೆ ಎಂಬಂತಹ ವರದಿಗಳು ಬಂದಿವೆ.
ಈ ಬೆದರಿಕೆ ನಂತರ ಅವಿಶ್ವಾಸ ಗೊತ್ತುವಳಿ ಪ್ರಸ್ತಾಪಿಸಿರುವ ವಿರೋಧ ಪಕ್ಷಗಳು ಹಾಗೂ ತೆಹ್ರಿಕ್ -ಎ-ಇನ್ಸಾಫ್ ಪಾರ್ಟಿಯ ಬಂಡಾಯ ಸದಸ್ಯರು ಸಭೆ ನಡೆಸುತ್ತಿದ್ದಾರೆ.