ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಹಸ್ತಕ್ಷೇಪ: ಆರೋಪ ತಳ್ಳಿಹಾಕಿದ ಅಮೆರಿಕ
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು ಅಮೆರಿಕ ಇದರಲ್ಲಿ ತನ್ನ ಹಸ್ತಕ್ಷೇಪ ಇರುವುದನ್ನು ತಳ್ಳಿಹಾಕಿದೆ.
Published: 31st March 2022 12:53 PM | Last Updated: 31st March 2022 04:26 PM | A+A A-

ಅಮೆರಿಕಾ ಅಧ್ಯಕ್ಷ ಬೈಡನ್
ವಾಷಿಂಗ್ ಟನ್: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು ಅಮೆರಿಕ ಇದರಲ್ಲಿ ತನ್ನ ಹಸ್ತಕ್ಷೇಪ ಇರುವುದನ್ನು ತಳ್ಳಿಹಾಕಿದೆ.
ಪಾಕಿಸ್ತಾನದ ಸಂಸತ್ ನಲ್ಲಿ ಮಂಡನೆಯಾಗಿರುವ ಅವಿಶ್ವಾಸ ನಿರ್ಣಯದಲ್ಲಿ ಅಮೆರಿಕ ಹಸ್ತಕ್ಷೇಪವಿದೆ. ಅಮೆರಿಕದಲ್ಲಿದ್ದ ಈ ಹಿಂದಿನ ಪಾಕಿಸ್ತಾನದ ರಾಯಭಾರಿಗೆ ಪತ್ರ ಕಳಿಸಿಕೊಟ್ಟಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಅಮೆರಿಕ ಸರ್ಕಾರದ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, ಈ ಆರೋಪಗಳಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿದೇಶಿ ಷಡ್ಯಂತ್ರದ ಪತ್ರವನ್ನು ಪತ್ರಕರ್ತರೊಂದಿಗೆ ಹಂಚಿಕೊಂಡು ಈ ಆರೋಪ ಮಾಡಿದ್ದರು.