ಮೇ 9 'ವಿಕ್ಟರಿ ದಿನ'ದಂದು ಉಕ್ರೇನ್ ವಿರುದ್ಧ ಯುದ್ಧ ನಿಲ್ಲಿಸಲು ರಷ್ಯಾ ಬಯಸಿಲ್ಲ: ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್
ಮೇ 9ರಂದು ವಿಜಯ ದಿವಸಕ್ಕೆ ಉಕ್ರೇನ್ ವಿರುದ್ಧ ಯುದ್ಧವನ್ನು ನಿಲ್ಲಿಸಲು ರಷ್ಯಾ ಒಲವು ತೋರಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವರು ಹೇಳಿದ್ದಾರೆ. ನಾಗರಿಕರ ಮೇಲೆ ಮಾರಣಾಂತಿಕ ಯುದ್ಧದ ಕಾರ್ಮೋಡದಲ್ಲಿ ರಷ್ಯಾ ಗೆಲುವಿನ ದಿನದ ವಾರ್ಷಿಕೋತ್ಸವ ಆಚರಿಸಬೇಕಾಗಿದೆ ಬಂದಿದೆ.
Published: 02nd May 2022 10:15 AM | Last Updated: 02nd May 2022 02:47 PM | A+A A-

ಉಕ್ರೇನ್ ನ ಮಾರಿಯೊಪೊಲ್ ನಲ್ಲಿ ರಷ್ಯಾದ ಮಿಲಿಟರಿ ವಾಹನ
ಮಾಸ್ಕೊ: ಮೇ 9ರಂದು ವಿಜಯ ದಿವಸಕ್ಕೆ ಉಕ್ರೇನ್ ವಿರುದ್ಧ ಯುದ್ಧವನ್ನು ನಿಲ್ಲಿಸಲು ರಷ್ಯಾ ಒಲವು ತೋರಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವರು ಹೇಳಿದ್ದಾರೆ. ನಾಗರಿಕರ ಮೇಲೆ ಮಾರಣಾಂತಿಕ ಯುದ್ಧದ ಕಾರ್ಮೋಡದಲ್ಲಿ ರಷ್ಯಾ ಗೆಲುವಿನ ದಿನದ ವಾರ್ಷಿಕೋತ್ಸವ ಆಚರಿಸಬೇಕಾಗಿದೆ ಬಂದಿದೆ.
ಇಟಲಿಯನ್ ಮೀಡಿಯಾಸೆಟ್ ಜೊತೆ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಮಾಸ್ಕೋ ತನ್ನ "ವಿಶೇಷ ಮಿಲಿಟರಿ ಕಾರ್ಯಾಚರಣೆ" ದಿನವನ್ನು ವಿಶೇಷವಾಗಿ ಆಚರಿಸಲು ಒಲವು ತೋರಿಸುತ್ತಿಲ್ಲ. 1945ರಲ್ಲಿ ಅಂದಿನ ಸೋವಿಯತ್ ಒಕ್ಕೂಟದ ನಾಜಿ ಜರ್ಮನಿಗಳ ಶರಣಾಗತಿಯನ್ನು ಆಚರಿಸಿದ್ದರು.
ನಮ್ಮ ಮಿಲಿಟರಿ ವಿಕ್ಟರಿ ದಿನ (ಗೆಲುವಿನ ದಿನ) ಸೇರಿದಂತೆ ಯಾವುದೇ ಆಚರಣೆಗಳನ್ನು ಕೃತಕವಾಗಿ ಆಚರಿಸಲು ಒಲವು ತೋರಿಸುತ್ತಿಲ್ಲ. ಉಕ್ರೇನ್ ನಾಗರಿಕರ ಮೇಲೆ ಅತಿ ಕಡಿಮೆ ಮಟ್ಟದಲ್ಲಿ ಹಾನಿ ಮತ್ತು ರಷ್ಯಾ ಮಿಲಿಟರಿ ಸಿಬ್ಬಂದಿ ಮೇಲೆ ಹಾನಿಯನ್ನು ತಪ್ಪಿಸುವುದು ಉಕ್ರೇನ್ ವಿರುದ್ಧ ಯುದ್ಧದ ನಮ್ಮ ಗುರಿಯಾಗಿದೆ ಎಂದು ಲೆವ್ರೊವ್ ತಿಳಿಸಿದ್ದಾರೆ.
ರಷ್ಯಾ ಯುದ್ಧದ ಗೆಲುವಿನ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದೆ. ಕೇಂದ್ರ ಮಾಸ್ಕೊದಲ್ಲಿ ದೊಡ್ಡ ಮಟ್ಟದಲ್ಲಿ ಮಿಲಿಟರಿ ಪರೇಡ್ ನಡೆಸಲಾಗುತ್ತದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುರೋಪ್ ಖಂಡದಲ್ಲಿ ಫ್ಯಾಸಿಸಂ ಸೋಲಿಗೆ ದೇಶದ ಪಾತ್ರವನ್ನು ಶ್ಲಾಘಿಸುತ್ತಾರೆ.
ಆದರೆ ಈ ವರ್ಷ ಉಕ್ರೇನ್ ವಿರುದ್ಧ ಮಿಲಿಟರಿ ಯುದ್ಧದಿಂದಾಗಿ ರಷ್ಯಾ ವಿಜಯ ದಿವಸವನ್ನು ಆಚರಿಸುವ ಮನಸ್ಥಿತಿಯಲ್ಲಿಲ್ಲ. ನಾವು ಯಾವಾಗಲೂ ಮಾಡುವಂತೆ ಮೇ 9 ಅನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ರಷ್ಯಾ ಮತ್ತು ಹಿಂದಿನ ಯುಎಸ್ಎಸ್ ಆರ್ ಇತರ ಗಣರಾಜ್ಯಗಳ ವಿಮೋಚನೆ, ನಾಜಿಗಳಿಂದ ಯುರೋಪ್ ವಿಮೋಚನೆಗೆ ಹೋರಾಟ ನಡೆಸಿ ಗೆಲುವು ಕಂಡ ದಿನ ಮೇ 9 ಎಂದು ಹೇಳಿದ್ದಾರೆ.
ಕಳೆದ ಫೆಬ್ರವರಿ 24 ರಂದು ಪ್ರಾರಂಭವಾದ ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣದಲ್ಲಿ ಇಲ್ಲಿಯವರೆಗೆ ಸಾವಿರಾರು ನಾಗರಿಕರ ಹತ್ಯೆಯಾಗಿದೆ. ಲಕ್ಷಾಂತರ ಜನರು ಉಕ್ರೇನ್ ನಿಂದ ಸ್ಥಳಾಂತರಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ತನ್ನ ಸಾವಿರಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ ಎಂದು ಮಾಸ್ಕೋ ಹೇಳಿದೆ. ಯುದ್ಧದಲ್ಲಿ ರಷ್ಯಾಕ್ಕೆ ಹೆಚ್ಚು ನಷ್ಟವಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.
ವಿಕ್ಟರಿ ಡೇ: ಮೇ 9 ರಂದು ವಿಜಯ ದಿನವು ರಷ್ಯನ್ನರಿಗೆ ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ಜುಲೈ 4 ರಂದು ಅಮೆರಿಕನ್ನರಿಗೆ ಸ್ವಾತಂತ್ರ್ಯ ದಿನದಂಕೆ ರಷ್ಯನ್ನರಿಗೆ ಮೇ 9. 2ನೇ ವಿಶ್ವಯುದ್ಧದಲ್ಲಿ ನಾಜಿ ಜರ್ಮನಿಯ ಮೇಲೆ ಸೋವಿಯತ್ ಒಕ್ಕೂಟದ ಐತಿಹಾಸಿಕ ವಿಜಯವನ್ನು ಆಚರಿಸುವ ದಿನ ಮೇ 9 ರಷ್ಯಾದ ರಾಷ್ಟ್ರೀಯ ರಜಾದಿನವಾಗಿದೆ.