ಡೆನ್ಮಾರ್ಕ್: ಪಿಎಂ ಮೋದಿ ಮತ್ತು ನಾರ್ವೆ ಪ್ರಧಾನಿ ಭೇಟಿ; ದ್ವಿಪಕ್ಷೀಯ ಸಂಬಂಧ, ಸಹಕಾರ ಬಲವರ್ಧನೆ ಕುರಿತು ಚರ್ಚೆ
ಪ್ರಧಾನಿ ನರೇಂದ್ರ ಮೋದಿ ಬುಧವಾರ ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಅವರನ್ನು ಭೇಟಿಯಾದರು. ಉಭಯ ನಾಯಕರು ದ್ವೀಪಕ್ಷೀಯ ಸಂಬಂಧ ಮತ್ತು ಸಹಕಾರ ಬಲವರ್ಧನೆಯ ಹಾದಿ ಕುರಿತು ಧೀರ್ಘವಾಗಿ ಚರ್ಚಿಸಿದರು.
Published: 04th May 2022 04:20 PM | Last Updated: 04th May 2022 04:47 PM | A+A A-

ನಾರ್ವೆ ಪ್ರಧಾನಿ ಭೇಟಿಯಾದ ಮೋದಿ
ಕೋಪನ್ ಹ್ಯಾಗನ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಅವರನ್ನು ಭೇಟಿಯಾದರು. ಉಭಯ ನಾಯಕರು ದ್ವೀಪಕ್ಷೀಯ ಸಂಬಂಧ ಮತ್ತು ಸಹಕಾರ ಬಲವರ್ಧನೆಯ ಹಾದಿ ಕುರಿತು ಧೀರ್ಘವಾಗಿ ಚರ್ಚಿಸಿದರು.
ಮೂರು ಯುರೋಪಿನ್ ರಾಷ್ಟ್ರಗಳ ಎರಡನೇ ಚರಣದಲ್ಲಿ ಮಂಗಳವಾರ ಬರ್ಲಿನ್ ಗೆ ಆಗಮಿಸಿದ ಪ್ರಧಾನಿ ಮೋದಿ, ಎರಡನೇ ಭಾರತ- ನಾರ್ಡಿಕ್ ಶೃಂಗಸಭೆಯ ಭಾಗವಾಗಿ ಜೊನಾಸ್ ಗಹರ್ ಸ್ಟೋರ್ ಅವರನ್ನು ಭೇಟಿಯಾದರು.
'ನಾರ್ವೆಯೊಂದಿಗೆ ಸ್ನೇಹತ್ವ ಹೆಚ್ಚಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜೊನಾಸ್ ಗಹರ್ ಸ್ಟೋರ್ ಕೋಪನ್ ಹ್ಯಾಗನ್ ನಲ್ಲಿ ಭೇಟಿಯಾದರು. ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧ ಮತ್ತು ಸಹಕಾರ ಬಲವರ್ಧನೆ ಕುರಿತು ಮಾತನಾಡಿರುವುದಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದೆ.
#WATCH | PM Modi meets Norway PM Jonas Gahr Støre in Copenhagen, Denmark to take stock of the full range of bilateral ties between the two nations and ways to deepen developmental cooperation. pic.twitter.com/uyjbE0Gsjq
— ANI (@ANI) May 4, 2022
ತದನಂತರ, ಮೋದಿ ಡೆನ್ಮಾರ್ಕ್, ಐಸ್ ಲ್ಯಾಂಡ್, ಫಿನ್ ಲ್ಯಾಂಡ್, ಸ್ವೀಡನ್ ಪ್ರಧಾನ ಮಂತ್ರಿಗಳೊಂದಿಗೆ 2ನೇ ಭಾರತ- ನಾರ್ಡಿಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂಡಿಯಾ- ನಾರ್ಡಿಕ್ ಶೃಂಗಸಭೆ ಮತ್ತು ನಾರ್ಡಿಕ್ ಮುಖಂಡರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗುವುದು ನಂತರ, ಪ್ಯಾರಿಸ್ ಗೆ ತೆರಳಿ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್ ಅವರೊಂದಿಗೆ ಮಾತನಾಡುವುದಾಗಿ ಮೋದಿ ಬೆಳಗ್ಗೆಯ ಟ್ವೀಟ್ ಮಾಡಿದ್ದರು.
Prime Minister Narendra Modi holds a bilateral meeting with the PM of Iceland Katrín Jakobsdóttir in Copenhagen, Denmark. pic.twitter.com/TT1xq5JTLY
— ANI (@ANI) May 4, 2022
ವ್ಯಾಪಾರ ಮತ್ತೂ ಹೂಡಿಕೆ, ಡಿಜಿಟಲ್ ಮತ್ತು ಅನ್ವೇಷಣೆ ಪಾಲುದಾರಿಕೆ, ಪರಿಸರ ಮತ್ತಿತರ ಆರ್ಥಿಕ ಸಹಕಾರದ ಕ್ಷೇತ್ರಗಳ ಕಡೆಗಿನ ದ್ವಿಪಕ್ಷೀಯ ಮಾತುಕತೆಯ ಅಂಶಗಳ ಬಗ್ಗೆ ಇಂಡಿಯಾ- ನಾರ್ಡಿಕ್ ಶೃಂಗಸಭೆಯಲ್ಲಿ ಗಮನ ನೀಡಲಾಗುವುದು ಎಂದು ಮಂಗಳವಾರ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳಿದ್ದರು.