ನೆಲಬಾಂಬ್ ಸ್ಫೋಟ ವೇಳೆ ಕಾಲುಗಳ ಕಳೆದುಕೊಂಡ ಪ್ರಿಯತಮೆ; ಉಕ್ರೇನ್ ಯುದ್ಧಭೂಮಿಯಲ್ಲಿ ಗೆದ್ದ ಅಪೂರ್ವ ಪ್ರೇಮ!
ಯುದ್ಧ ಭೂಮಿಯಲ್ಲೂ ಪ್ರೇಮ ಗೆದ್ದಿದ್ದು, ಉಕ್ರೇನ್ ನ ಸಮರದ ನೆಲದಲ್ಲೂ ಪ್ರೀತಿ ಅದೆಷ್ಟೋ ಹೃದಯಗಳಿಗೆ ಪ್ರೀತಿ ಎಂದರೇನು ಎನ್ನುವುದನ್ನು ಅರ್ಥ ಮಾಡಿಸಿದೆ.
Published: 04th May 2022 02:19 PM | Last Updated: 04th May 2022 02:51 PM | A+A A-

ಕಾಲು ಕಳೆದುಕೊಂಡ ಪ್ರಿಯತಮೆಯ ವರಿಸಿದ 'ಪ್ರೇಮಿ'
ಕೀವ್: ಯುದ್ಧ ಭೂಮಿಯಲ್ಲೂ ಪ್ರೇಮ ಗೆದ್ದಿದ್ದು, ಉಕ್ರೇನ್ ನ ಸಮರದ ನೆಲದಲ್ಲೂ ಪ್ರೀತಿ ಅದೆಷ್ಟೋ ಹೃದಯಗಳಿಗೆ ಪ್ರೀತಿ ಎಂದರೇನು ಎನ್ನುವುದನ್ನು ಅರ್ಥ ಮಾಡಿಸಿದೆ.
ಹೌದು... ನಿಜವಾದ ಪ್ರೀತಿ ಯಾವತ್ತೂ ಗೆಲ್ಲುತ್ತೆ. ಪ್ರೀತಿಗೆ, ದೇಹ ಸೌಂದರ್ಯಕ್ಕಿಂದ ಮನಸ್ಸಿನ ಸೌಂದರ್ಯವೇ ಮುಖ್ಯ ಎಂಬುದನ್ನ ಈ ಉಕ್ರೇನ್ ನ ಜೋಡಿ ಸಾಬೀತು ಮಾಡಿ ಇಡೀ ವಿಶ್ವಕ್ಕೆ ಪ್ರೇಮದ ಸಂದೇಶ ಸಾರಿದ್ದಾರೆ. ರಷ್ಯಾ ಯುದ್ಧದಿಂದ ಉಕ್ರೇನ್ ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಉಕ್ರೇನ್‌ನ ನರ್ಸ್ ಳನ್ನು ಆಕೆಯ ಪ್ರಿಯಕರ ಆ ಬಳಿಕವೂ ಪ್ರೀತಿಯಿಂದ ಸಂಗಾತಿಯಾಗಿ ಸ್ವೀಕರಿಸಿದ್ದಾನೆ.
Very special lovestory.
A nurse from Lysychansk, who has lost both legs on a russian mine, got married in Lviv. On March 27, Victor and Oksana were coming back home, when a russian mine exploded. The man was not injured, but Oksana's both legs were torn off by the explosion. pic.twitter.com/X1AQNwKwyu— Verkhovna Rada of Ukraine - Ukrainian Parliament (@ua_parliament) May 2, 2022
ಆಕೆ ತಾನು ಪ್ರೀತಿಸಿದ ತನ್ನ ಪತಿಯೊಂದಿಗೆ ತನ್ನ ಮೊದಲ ನೃತ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾಳೆ. ಇಬ್ಬರು ವಿವಾಹವಾದ ಎಲ್ವಿವ್‌ನ ಆಸ್ಪತ್ರೆಯಲ್ಲಿ ಹೃದಯಸ್ಪರ್ಶಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. 23 ವರ್ಷದ ನರ್ಸ್ ಒಕ್ಸಾನಾ, ಮಾರ್ಚ್ 27 ರಂದು ಲುಹಾನ್ಸ್ಕ್ ಪ್ರದೇಶದ ತನ್ನ ತವರು ಲೈಸಿಚಾನ್ಸ್ಕ್ ನಲ್ಲಿ ತನ್ನ ನೂತನ ಪತಿ ವಿಕ್ಟರ್‌ನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಲ್ಯಾಂಡ್‌ಮೈನ್‌ಗೆ ಕಾಲಿಟ್ಟಳು. ಈ ವೇಳೆ ನೆಲಬಾಂಬ್ ಸ್ಫೋಟಗೊಂಡಾಗ ವಧು ತನ್ನ ಕಾಲುಗಳು ಮತ್ತು ಎಡಗೈಯಲ್ಲಿ ನಾಲ್ಕು ಬೆರಳುಗಳನ್ನು ಕಳೆದುಕೊಂಡಳು.
ಈ ವೇಳೆ ಪತಿ ವಿಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದು ಅವರಿಗೆ ಹೆಚ್ಚಿನ ತೊಂದರೆಯಾಗಿಲ್ಲ. ಒಕ್ಸಾನಾರನ್ನ ಡ್ನಿಪ್ರೊಗೆ ಸ್ಥಳಾಂತರಿಸಿದ ನಂತರ ನಾಲ್ಕು ಶಸ್ತ್ರಚಿಕಿತ್ಸೆಗೆ ಒಳಗಾದರು. ಸ್ಕೈ ನ್ಯೂಸ್ ಪ್ರಕಾರ, ಆಕೆಯ ಗಾಯಗಳು ವಾಸಿಯಾದ ನಂತರ ವೈದ್ಯರು ಪ್ರಾಸ್ಥೆಟಿಕ್ಸ್ ಗಾಗಿ ಆಕೆಯ ಅಂಗಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದರು. ಪ್ರಾಸ್ಥೆಟಿಕ್ಸ್ ಅಳವಡಿಸುವ ಪ್ರಕ್ರಿಯೆಗಾಗಿ ಅವರು ನಾಲ್ಕು ದಿನಗಳ ಹಿಂದೆ ಎಲ್ವಿವ್ ತಲುಪಿದರು. ಅಲ್ಲಿ ಇಬ್ಬರೂ ಮದುವೆಯಾದರು. ಆಸ್ಪತ್ರೆಯಲ್ಲಿ ಮದುವೆಯಾದ ಈ ಜೋಡಿಯ ನೃತ್ಯದ ವಿಡಿಯೋವನ್ನು ಆಸ್ಪತ್ರೆಯ ಸ್ವಯಂಸೇವಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ವೀಡಿಯೊವನ್ನು ಉಕ್ರೇನ್‌ನ ಸಂಸತ್ತು ಕೂಡ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದು “ಅತ್ಯಂತ ವಿಶೇಷವಾದ ಪ್ರೇಮಕಥೆಯ” ಪರಾಕಾಷ್ಠೆ ಎಂದು ಬಣ್ಣಿಸಿದೆ.