ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಟಾ ಬಯಲು; ಮಹಿಳೆಯರು, ಮಕ್ಕಳು ಎನ್ನದೇ ನೆಲಕ್ಕುರುಳಿಸಿ ಕೋವಿಡ್ ಟೆಸ್ಟ್!!
ಶೂನ್ಯ-COVID ನೀತಿ ಅಳವಡಿಸಿಕೊಂಡಿದ್ದೇವೆ ಎನ್ನುತ್ತಿರುವ ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಿತಿ ಮೀರಿದ್ದು, ಮಹಿಳೆಯರು, ಮಕ್ಕಳು ಎನ್ನದೇ ನೆಲಕ್ಕುರುಳಿಸಿಕೊಂಡು ಬಲವಂತವಾಗಿ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Published: 05th May 2022 04:32 PM | Last Updated: 05th May 2022 04:32 PM | A+A A-

ಚೀನಾದಲ್ಲಿ ಬಲವಂತದ ಕೋವಿಡ್ ಟೆಸ್ಟ್
ಶಾಂಘೈ: ಶೂನ್ಯ-COVID ನೀತಿ ಅಳವಡಿಸಿಕೊಂಡಿದ್ದೇವೆ ಎನ್ನುತ್ತಿರುವ ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಿತಿ ಮೀರಿದ್ದು, ಮಹಿಳೆಯರು, ಮಕ್ಕಳು ಎನ್ನದೇ ನೆಲಕ್ಕುರುಳಿಸಿಕೊಂಡು ಬಲವಂತವಾಗಿ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಕೊರೋನಾ ನಡುವೆಯೇ ಚೀನಾದಲ್ಲಿ 'H3N8 ಹಕ್ಕಿಜ್ವರ' ಕಾಟ: ಮೊದಲ ಬಾರಿಗೆ ಮಾನವರಲ್ಲಿ ಸೋಂಕು ಪತ್ತೆ!
ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತ ವಿಡಿಯೋಗಳು ಹರಿದಾಡುತ್ತಿದ್ದು, ಶಾಂಘೈ ನಿವಾಸಿಗಳು ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಅಳಲು ತೋಡಿಕೊಳ್ಳುತ್ತಿದ್ದಾರೆ. ಮಾನವ ಹಕ್ಕುಗಳ ಅಭೂತಪೂರ್ವ ನಿರ್ಲಕ್ಷ್ಯ, ದುರ್ವರ್ತನೆ ಮತ್ತು ನಿಂದನೆಗೆ ಒಳಗಾಗುತ್ತಿದ್ದೇವೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾದ ವೀಡಿಯೊಗಳು ಮಾನವ ಹಕ್ಕುಗಳ ಉಲ್ಲಂಘನೆಯನ್ನು ದೃಢೀಕರಿಸುತ್ತವೆ. "ಸಾಂಕ್ರಾಮಿಕ ತಡೆಗಟ್ಟುವಿಕೆ" ಎಂಬ ಹೆಸರಿನಲ್ಲಿ ಈ ಉಲ್ಲಂಘನೆಗಳು ಚೀನಾದ ವ್ಯವಸ್ಥೆಯ ಕ್ರೂರ ಮತ್ತು ಅಮಾನವೀಯ ಭಾಗವನ್ನು ಜಗತ್ತಿಗೆ ಬಹಿರಂಗಪಡಿಸಿವೆ. ಇದು ಚೀನಾದ ಕಠಿಣ ಮತ್ತು ನಿಷ್ಪರಿಣಾಮಕಾರಿ ಆಡಳಿತವನ್ನು ಬೆಳಕಿಗೆ ತರುತ್ತದೆ ಎಂದು ಅಮೆರಿಕ ಮೂಲದ ನಿಯತಕಾಲಿಕೆ ನ್ಯಾಷನಲ್ ರಿವ್ಯೂ ವರದಿ ಮಾಡಿದೆ.
这个强行检测姿势应该让全世界看一看 pic.twitter.com/PUwnfCXF4t
— 浩哥ii