ನೇಪಾಳದಲ್ಲಿ ಕಾಂಚನಜುಂಗಾ ಪರ್ವತ ಏರುವಾಗ ಭಾರತದ ಪರ್ವತಾರೋಹಿ ಸಾವು
ನೇಪಾಳದಲ್ಲಿ ವಿಶ್ವದ ಮೂರನೇ ಅತಿ ಎತ್ತರದ ಶಿಖರ ಕಾಂಚನಜುಂಗಾ ಶಿಖರ ಏರುವಾಗ ಭಾರತೀಯ ಪರ್ವಾತಾರೋಹಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪರ್ವತಾರೋಹಣ ಯಾತ್ರೆಯ ಸಂಘಟಕರು ಶುಕ್ರವಾರ ದೃಢಪಡಿಸಿದ್ದಾರೆ.
Published: 06th May 2022 08:33 PM | Last Updated: 06th May 2022 08:33 PM | A+A A-

ನಾರಾಯಣನ್ ಅಯ್ಯರ್
ಕಠ್ಮಂಡು: ನೇಪಾಳದಲ್ಲಿ ವಿಶ್ವದ ಮೂರನೇ ಅತಿ ಎತ್ತರದ ಶಿಖರ ಕಾಂಚನಜುಂಗಾ ಶಿಖರ ಏರುವಾಗ ಭಾರತೀಯ ಪರ್ವಾತಾರೋಹಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪರ್ವತಾರೋಹಣ ಯಾತ್ರೆಯ ಸಂಘಟಕರು ಶುಕ್ರವಾರ ದೃಢಪಡಿಸಿದ್ದಾರೆ.
ಈ ವರ್ಷದ ಹಿಮಾಲಯದ ವಸಂತ ಆರೋಹಣ ಋತುವಿನ ಮೂರನೇ ಮಾರಣಾಂತಿಕ ಸಾವು ಇದಾಗಿದೆ. 52 ವರ್ಷದ ನಾರಾಯಣನ್ ಅಯ್ಯರ್ ಅವರು ಕಾಂಚನಜುಂಗಾ ಪರ್ವತದ ತುದಿಯಲ್ಲಿ 8,200 ಮೀಟರ್ ಎತ್ತರದಲ್ಲಿ ಗುರುವಾರ ನಿಧನರಾಗಿದ್ದಾರೆ.
ಇದನ್ನು ಓದಿ: ಉಡುಪಿಯ ಅಜ್ಜರಕಾಡಿನಿಂದ ಹಿಮಾಲಯ ಸನ್ನಿಧಿಯಲ್ಲಿ ಪರ್ವತಾರೋಹಿ ಸುಮಲತಾ
ನಾರಾಯಣನ್ ಅವರು ಇತರರಿಗಿಂತ ನಿಧಾನ ಗತಿಯಲ್ಲಿದ್ದರು ಮತ್ತು ನಮ್ಮಲ್ಲಿ ಇಬ್ಬರು ಮಾರ್ಗದರ್ಶಕರು ಅವರಿಗೆ ಸಹಾಯ ಮಾಡಿದರು. ಅವರು ತುಂಬಾ ದಣಿದಿದ್ದರಿಂದ ಸಂಚಾರದಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಕುಸಿದುಬಿದ್ದರು ಎಂದು ಪಯನೀರ್ ಅಡ್ವೆಂಚರ್ ಎಕ್ಸ್ ಪೆಡಿಶನ್ ಕಂಪನಿಯ ನಿವೇಶ್ ಕರ್ಕಿ ತಿಳಿಸಿದ್ದಾರೆ.
ನಾರಾಯಣನ್ ಅಯ್ಯರ್ ಅವರ ಸಾವಿನ ಸುದ್ದಿಯನ್ನ ಅವರ ಕುಟುಂಬಕ್ಕೆ ತಿಳಿಸಿದ್ದು, ಅವರ ಮೃತದೇಹ ಪತ್ತೆಗಾಗಿ ಪ್ರಯತ್ನಿಸಲಾಗ್ತಿದೆ ಎಂದಿದ್ದಾರೆ.
ನೇಪಾಳವು ಈ ಋತುವಿನಲ್ಲಿ 8,586 ಮೀಟರ್ ಎತ್ತರದ ಕಾಂಚನಜುಂಗಾ ಹತ್ತಲು 68 ವಿದೇಶಿ ಪರ್ವತಾರೋಹಿಗಳಿಗೆ ಪರವಾನಗಿಗಳನ್ನು ನೀಡಿದೆ. ಗುರುವಾರ ಸಾಕಷ್ಟು ಮಂದಿ ಈ ಶಿಖರವನ್ನು ತಲುಪಿದ್ದಾರೆ.