ಪೂರ್ವ ಉಕ್ರೇನ್ ನ ಶಾಲೆಯ ಮೇಲೆ ವಾಯುದಾಳಿ: 60 ಮಂದಿ ಮೃತಪಟ್ಟಿರುವ ಶಂಕೆ
ಪೂರ್ವ ಉಕ್ರೇನ್ನ ಹಳ್ಳಿಯ ಶಾಲೆಯೊಂದರಲ್ಲಿ ಆಶ್ರಯ ಪಡೆದಿರುವ ಸುಮಾರು 60 ಜನರು ವಾಯುದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಗವರ್ನರ್ ಭಾನುವಾರ ಹೇಳಿದ್ದಾರೆ.
Published: 08th May 2022 04:12 PM | Last Updated: 08th May 2022 04:53 PM | A+A A-

ಸಾಂಕೇತಿಕ ಚಿತ್ರ
ಕೈವ್: ಪೂರ್ವ ಉಕ್ರೇನ್ನ ಹಳ್ಳಿಯ ಶಾಲೆಯೊಂದರಲ್ಲಿ ಆಶ್ರಯ ಪಡೆದಿರುವ ಸುಮಾರು 60 ಜನರು ವಾಯುದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಗವರ್ನರ್ ಭಾನುವಾರ ಹೇಳಿದ್ದಾರೆ.
"ಬಿಲೋಗೊರಿವ್ಕಾ ಗ್ರಾಮದ ಮೇಲೆ ವೈಮಾನಿಕ ದಾಳಿಯಲ್ಲಿ ನಡೆದಿದೆ ಎಂದು ಗವರ್ನರ್ ಸೆರ್ಗಿ ಗೈಡೈ ಹೇಳಿದ್ದಾರೆ.
ಬಾಂಬ್ಗಳು ಶಾಲೆಯ ಮೇಲೆ ಬಿದ್ದು ಸಂಪೂರ್ಣವಾಗಿ ನಾಶವಾಗಿದ್ದು ಶಾಲೆಯೊಳಗಿದ್ದ 90 ಮಂದಿಯಲ್ಲಿ 60 ಮಂದಿ ಮೃತಪಟ್ಟಿದ್ದು, 27 ಮಂದಿಯನ್ನು ಉಳಿಸಲಾಗಿದೆ ಎಂದು ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ.
ಹೊಸ ವಾಯುದಾಳಿಯ ಭೀತಿಯಿಂದಾಗಿ ರಾತ್ರಿ ವೇಳೆ ಜನರನ್ನು ಕಾಪಾಡುವ ಕೆಲಸವನ್ನು ತ್ವರಿತವಾಗಿ ಮಾಡಲು ಸಾಧ್ಯವಾಗಿಲ್ಲ, ನಂತರ ಇಂದು ಭಾನುವಾರ ಕೆಲಸ ಪುನರಾರಂಭಿಸಿದರು. 11 ಜನರು ಆಶ್ರಯ ಪಡೆದಿದ್ದ ನೆಲಮಾಳಿಗೆ ಮನೆಯ ಮೇಲೆ ವಾಯುದಾಳಿ ನಂತರ ನೆರೆಯ ಶೆಪಿಲಿವ್ಕಾ ಗ್ರಾಮದಲ್ಲಿ ಬದುಕುಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.