WHO ದ ಕೋವಿಡ್ ಸಾವಿನ ಲೆಕ್ಕಾಚಾರ ವರದಿ ವಿರೋಧಿಸಿದ ಪಾಕಿಸ್ತಾನ
ದೇಶದಲ್ಲಿ ಕೋವಿಡ್ 19 ಸಾವುಗಳ ಸಂಖ್ಯೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿಯನ್ನು ಪಾಕಿಸ್ತಾನ ಸರ್ಕಾರ ತಿರಸ್ಕರಿಸಿದೆ. ವಿಶ್ವಸಂಸ್ಥೆಯು ಡೇಟಾವನ್ನು ಸಂಗ್ರಹಿಸುವ ವಿಧಾನವನ್ನು ಪ್ರಶ್ನಿಸಿದ್ದು ಸಂಖ್ಯೆಗಳನ್ನು ಒಟ್ಟುಗೂಡಿಸಲು ಬಳಸುವ ಸಾಫ್ಟ್ವೇರ್ನಲ್ಲಿ ದೋಷವಿದೆ ಎಂದು ಪಾಕಿಸ್ತಾನ ದೂಷಿಸಿದೆ.
Published: 08th May 2022 08:57 PM | Last Updated: 09th May 2022 01:28 PM | A+A A-

ಸಂಗ್ರಹ ಚಿತ್ರ
ಇಸ್ಲಾಮಾಬಾದ್: ದೇಶದಲ್ಲಿ ಕೋವಿಡ್ 19 ಸಾವುಗಳ ಸಂಖ್ಯೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿಯನ್ನು ಪಾಕಿಸ್ತಾನ ಸರ್ಕಾರ ತಿರಸ್ಕರಿಸಿದೆ. ವಿಶ್ವಸಂಸ್ಥೆಯು ಡೇಟಾವನ್ನು ಸಂಗ್ರಹಿಸುವ ವಿಧಾನವನ್ನು ಪ್ರಶ್ನಿಸಿದ್ದು ಸಂಖ್ಯೆಗಳನ್ನು ಒಟ್ಟುಗೂಡಿಸಲು ಬಳಸುವ ಸಾಫ್ಟ್ವೇರ್ನಲ್ಲಿ ದೋಷವಿದೆ ಎಂದು ಪಾಕಿಸ್ತಾನ ದೂಷಿಸಿದೆ.
ಇತ್ತೀಚಿನ ವರದಿಯಲ್ಲಿ, ಪಾಕಿಸ್ತಾನದಲ್ಲಿ 2,60,000 ಕೋವಿಡ್ ವುಗಳು ಸಂಭವಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಆದರೆ ಇದು ಪಾಕಿಸ್ತಾನದ ಅಧಿಕೃತ ಅಂಕಿ ಅಂಶಕ್ಕಿಂತ ಎಂಟು ಪಟ್ಟು ಹೆಚ್ಚು. ಅಧಿಕೃತ ದಾಖಲೆಗಳ ಪ್ರಕಾರ ಪಾಕಿಸ್ತಾನವು 30,369 ಕೋವಿಡ್ ಸಾವುಗಳನ್ನು ಹೊಂದಿದ್ದು, 1.5 ದಶಲಕ್ಷಕ್ಕೂ ಹೆಚ್ಚು ಸೋಂಕುಗಳಿವೆ.
ಇದನ್ನೂ ಓದಿ: ಕೋವಿಡ್ ಸಾವು ಕುರಿತು ವಿಶ್ವ ಆರೋಗ್ಯ ಸಂಸ್ಥೆ ವರದಿ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
“ನಾವು ಕೋವಿಡ್ ಸಾವುಗಳ ಕುರಿತು ಹಸ್ತಚಾಲಿತವಾಗಿ ಡೇಟಾವನ್ನು ಸಂಗ್ರಹಿಸುತ್ತಿದ್ದೇವೆ, ಇದು ಕೆಲವು ನೂರುಗಳ ವ್ಯತ್ಯಾಸವನ್ನು ಹೊಂದಿರಬಹುದು. ಆದರೆ ಇದು ನೂರಾರು ಸಾವಿರಗಳ ಲೆಕ್ಕ ವ್ಯತ್ಯಾವದಲ್ಲಿ ಇರುವಂತಿಲ್ಲ. ಇದು ಸಂಪೂರ್ಣವಾಗಿ ಆಧಾರರಹಿತವಾಗಿದೆ” ಎಂದು ಪಾಕಿಸ್ತಾನ ಆರೋಗ್ಯ ಸಚಿವ ಅಬ್ದುಲ್ ಖಾದಿರ್ ಪಟೇಲ್ ಹೇಳಿದ್ದಾರೆ.
ವರದಿಯ ಪ್ರಕಾರ, ಪ್ರಪಂಚದಾದ್ಯಂತ ಕಳೆದ ಎರಡು ವರ್ಷಗಳಲ್ಲಿ ಕರೋನವೈರಸ್ ಅಥವಾ ಅತಿಯಾದ ಆರೋಗ್ಯ ವ್ಯವಸ್ಥೆಗಳ ಮೇಲೆ ಅದರ ಪ್ರಭಾವದಿಂದ ಸುಮಾರು 15 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಇದು ಅಧಿಕೃತ ಸಾವಿನ ಸಂಖ್ಯೆ 6 ಮಿಲಿಯನ್ಗಿಂತ ಎರಡು ಪಟ್ಟು ಹೆಚ್ಚು. ಆಗ್ನೇಯ ಏಷ್ಯಾ, ಯುರೋಪ್ ಮತ್ತು ಅಮೆರಿಕಗಳಲ್ಲಿ ಹೆಚ್ಚಿನ ಸಾವುನೋವುಗಳು ಸಂಭವಿಸಿವೆ.
ಇದನ್ನೂ ಓದಿ: ಮಕ್ಕಳಲ್ಲಿ ಏಕಾಏಕಿ ದಡಾರ ಪ್ರಕರಣಗಳ ಹೆಚ್ಚಳ: UNICEF, WHO ಎಚ್ಚರಿಕೆ
ವಿಶ್ವ ಆರೋಗ್ಯ ಸಂಸ್ಥೆಯ ಸಂಖ್ಯೆಗಳನ್ನು ತಿರಸ್ಕರಿಸುವ ಟಿಪ್ಪಣಿಯಲ್ಲಿ ನಮ್ಮ ಸರ್ಕಾರವು ಲೆಕ್ಕಾಚಾರ ಪ್ರಕ್ರಿಯೆಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ವಿವರಿಸಿದೆ ಎಂದು ಸಚಿವ ಪಟೇಲ್ ಹೇಳಿದರು. ಕೋವಿಡ್ ಸಾವಿನ ಲೆಕ್ಕಾಚಾರದ ವರದಿ ಬಗ್ಗೆ ಭಾರತ ವಿಶ್ವಆರೋಗ್ಯ ಸಂಸ್ಥೆಯ ಆರೋಪವನ್ನು ತಳ್ಳಿಹಾಕಿರುವ ಬೆನ್ನಲ್ಲೇ ಪಾಕಿಸ್ತಾನ ಕೂಡ ಈ ಕೂಗಿಗೆ ದನಿ ಸೇರಿಸಿದೆ.