ಭಾರತಕ್ಕೆ ಇಂದು ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ: ರವಿಶಂಕರ ಗುರೂಜಿ
ನಮ್ಮ ದೇಶದಲ್ಲಿ ಈಗಿರುವ ವಿರೋಧ ಪಕ್ಷ ದುರ್ಬಲವಾಗಿದೆ, ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಭಾರತಕ್ಕೆ ಭದ್ರ ಶಕ್ತಿಯುತ ವಿರೋಧ ಪಕ್ಷದ ಅಗತ್ಯವಿದ್ದು ರಚನಾತ್ಮಕವಾಗಿರಬೇಕು ಎಂದು ಧಾರ್ಮಿಕ ಮುಖಂಡ ಆರ್ಟ್ ಆಫ್ ಲಿವಿಂಗ್ ನ ರವಿ ಶಂಕರ ಗುರೂಜಿ ಹೇಳಿದ್ದಾರೆ.
Published: 12th May 2022 01:08 PM | Last Updated: 12th May 2022 01:10 PM | A+A A-

ರವಿಶಂಕರ ಗುರೂಜಿ
ವಾಷಿಂಗ್ಟನ್: ನಮ್ಮ ದೇಶದಲ್ಲಿ ಈಗಿರುವ ವಿರೋಧ ಪಕ್ಷ ದುರ್ಬಲವಾಗಿದೆ, ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಭಾರತಕ್ಕೆ ಭದ್ರ ಶಕ್ತಿಯುತ ವಿರೋಧ ಪಕ್ಷದ ಅಗತ್ಯವಿದ್ದು ರಚನಾತ್ಮಕವಾಗಿರಬೇಕು ಎಂದು ಧಾರ್ಮಿಕ ಮುಖಂಡ ಆರ್ಟ್ ಆಫ್ ಲಿವಿಂಗ್ ನ(Art of Living) ರವಿ ಶಂಕರ ಗುರೂಜಿ(Sri Ravishankar Guruji) ಹೇಳಿದ್ದಾರೆ.
ಭಾರತಕ್ಕೆ ಬಲವಾದ, ರಚನಾತ್ಮಕ ವಿರೋಧ ಪಕ್ಷದ ಅಗತ್ಯವಿದೆ. ಈಗಿರುವ ವಿರೋಧ ಪಕ್ಷವು ತುಂಬಾ ದುರ್ಬಲವಾಗಿದೆ. ವಿರೋಧ ಪಕ್ಷದಲ್ಲಿ ನಾಯಕತ್ವದ ಕೊರತೆಯು ಪ್ರಜಾಪ್ರಭುತ್ವವಲ್ಲ ಎಂದು ತೋರುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕ ರವಿಶಂಕರ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಬಲವಾದ ವಿರೋಧ ಪಕ್ಷದ ಅಗತ್ಯವಿದೆ -- ಸಂಪ್ರದಾಯವಾದಿ, ಸೃಜನಶೀಲ ವಿರೋಧ ಪಕ್ಷ ಭಾರತದಲ್ಲಿ ಕಾಣೆಯಾಗಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯು ಮುಕ್ತ ಮತ್ತು ನ್ಯಾಯಯುತ ಚುನಾವಣೆಯೊಂದಿಗೆ ನಡೆದಿದೆ. ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಪ್ರಬಲವಾಗಿದೆ. ಆದರೆ ಕೇಂದ್ರ ಸರ್ಕಾರದಲ್ಲಿ ಪ್ರತಿಪಕ್ಷದ ಕೊರತೆ, ಬಲಿಷ್ಠ ನಾಯಕನ ಕೊರತೆಯು ದೇಶವನ್ನು ನಿರಂಕುಶ ಪ್ರಭುತ್ವವೆಂದು ತೋರುತ್ತದೆ, ಆದರೆ ಅದು ಹಾಗಾಗಬಾರದು, ನಮ್ಮದು ಪ್ರಜಾಪ್ರಭುತ್ವ ದೇಶ ಇಲ್ಲಿ ಜನರಿಗೆ ಅಧಿಕಾರವಿದೆ ಎಂದು ರವಿಶಂಕರ ಗುರೂಜಿ ಹೇಳಿದ್ದಾರೆ.
ಎರಡು ತಿಂಗಳ ಅಮೆರಿಕ ಪ್ರವಾಸದಲ್ಲಿರುವ ರವಿಶಂಕರ ಗುರೂಜಿ ಅಲ್ಲಿನ ಹಲವು ನಗರಗಳಿಗೆ ಭೇಟಿ ನೀಡಿ ಶಾಂತಿ ಸಂದೇಶವನ್ನು ಸಾರುತ್ತಿದ್ದಾರೆ.
ಭಾರತ ದೇಶ ಪ್ರಬಲ ರೋಮಾಂಚಕ ಪ್ರಜಾಪ್ರಭುತ್ವವಾಗಿದೆ. ದೇಶದಲ್ಲಿ ನಡೆಯುವ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿವೆ, ಆದರೆ ರಾಷ್ಟ್ರ ಮಟ್ಟದಲ್ಲಿ ಪ್ರಬಲವಾದ ವಿರೋಧ ಪಕ್ಷದ ಅಗತ್ಯವಿದೆ, ಅದು ಪ್ರಸ್ತುತ ಕಾಣೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರವಿಶಂಕರ ಗುರೂಜಿಯವರ 2022 ರ ಅಮೆರಿಕ ಪ್ರವಾಸವು ಮಿಯಾಮಿಯಲ್ಲಿ ಪ್ರಾರಂಭವಾಯಿತು, ಅಲ್ಲಿ ಅವರು ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕಾಗಿ ಧ್ಯಾನದ ಪಾತ್ರದ ಕುರಿತು ವೈದ್ಯರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ನಂತರ ಬೋಸ್ಟನ್‌ಗೆ ತೆರಳಿದರು, ಅಲ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮಾನಸಿಕ ಆರೋಗ್ಯವನ್ನು ಕಳಂಕಗೊಳಿಸುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
COVID-19 ಸಾಂಕ್ರಾಮಿಕ ರೋಗದ ನಂತರ ಜನರಲ್ಲಿ ಬಹಳಷ್ಟು ಕೋಪತಾಪ ಮಾನಸಿಕ ಸಮಸ್ಯೆಗಳು ಎದುರಾಗುತ್ತಿವೆ. ಈ ವಿಷಯದ ಬಗ್ಗೆ ಗಮನಹರಿಸಬೇಕು ಎಂದು ರವಿಶಂಕರ ಗುರೂಜಿ ಒತ್ತಿ ಹೇಳಿದ್ದಾರೆ.