ಉತ್ತರ ಕೊರಿಯಾದಲ್ಲಿ ಮೊಟ್ಟ ಮೊದಲ ಕೋವಿಡ್-19 ಸೋಂಕು ಪತ್ತೆ, ಲಾಕ್ ಡೌನ್ ಹೇರಿದ ಕಿಮ್ ಜಾಂಗ್ ಉನ್
ಉತ್ತರ ಕೊರಿಯಾದಲ್ಲಿ ಮೊಟ್ಟಮೊದಲ ಕೋವಿಡ್-19 ಸೋಂಕು ಪತ್ತೆಯಾಗಿದೆ. ಕೊರೋನಾ ಸೋಂಕು 2019ರ ಅಂತ್ಯಕ್ಕೆ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿ ನಂತರ ವಿಶ್ವಕ್ಕೆಲ್ಲಾ ಹರಡಿ ಲಾಕ್ ಡೌನ್ ಹೇರಿಕೆಯಾಗಿದ್ದೆಲ್ಲ ಹಳೆಯ ಸುದ್ದಿ, ಇನ್ನು ಕೂಡ ವಿಶ್ವದ ಹಲವು ದೇಶಗಳು ಕೊರೋನಾ ಸೋಂಕಿನಿಂದ ಮುಕ್ತವಾಗಿಲ್ಲ.
Published: 12th May 2022 10:19 AM | Last Updated: 12th May 2022 10:19 AM | A+A A-

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್, ಗುರುವಾರ ಉತ್ತರ ಕೊರಿಯಾದ ಪ್ಯೊಂಗ್ಯಾಂಗ್‌ನಲ್ಲಿ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಕೇಂದ್ರ ಸಮಿತಿಯ ಸಭೆಯಲ್ಲಿ ಭಾಗವಹಿಸಿದರು.
ಸಿಯೊಲ್: ಉತ್ತರ ಕೊರಿಯಾದಲ್ಲಿ ಮೊಟ್ಟಮೊದಲ ಕೋವಿಡ್-19 ಸೋಂಕು ಪತ್ತೆಯಾಗಿದೆ. ಕೊರೋನಾ ಸೋಂಕು 2019ರ ಅಂತ್ಯಕ್ಕೆ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿ ನಂತರ ವಿಶ್ವಕ್ಕೆಲ್ಲಾ ಹರಡಿ ಲಾಕ್ ಡೌನ್ ಹೇರಿಕೆಯಾಗಿದ್ದೆಲ್ಲ ಹಳೆಯ ಸುದ್ದಿ, ಇನ್ನು ಕೂಡ ವಿಶ್ವದ ಹಲವು ದೇಶಗಳು ಕೊರೋನಾ ಸೋಂಕಿನಿಂದ ಮುಕ್ತವಾಗಿಲ್ಲ.
ಆದರೆ ಈ ಎರಡು ವರ್ಷಗಳಲ್ಲಿ ಉತ್ತರ ಕೊರಿಯಾದಲ್ಲಿ ಮಾತ್ರ ಒಬ್ಬ ವ್ಯಕ್ತಿಯಲ್ಲಿ ಕೂಡ ಪತ್ತೆಯಾಗಿರಲಿಲ್ಲ. ಇದೀಗ ಮೊಟ್ಟ ಮೊದಲ ಬಾರಿಗೆ ಅಲ್ಲಿಗೆ ಕೂಡ ಒಕ್ಕರಿಸಿದ್ದು ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಉತ್ತರ ಕೊರಿಯಾದ ಪಯೋಂಗ್‌ಯಾಂಗ್‌ನಲ್ಲಿ ಜ್ವರದಿಂದ ಬಳಲುತ್ತಿರುವ ಜನರಿಂದ ಕಳೆದ ಭಾನುವಾರ ಸಂಗ್ರಹಿಸಲಾದ ಮಾದರಿಗಳ ಪರೀಕ್ಷೆ ನಡೆಸಿದಾಗ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢವಾಗಿದೆ. ಇದಕ್ಕೆ ಪ್ರತಿಯಾಗಿ ನಾಯಕ ಕಿಮ್ ಜೊಂಗ್ ಉನ್ ನಗರಗಳು ಮತ್ತು ಕೌಂಟಿಗಳ ಸಂಪೂರ್ಣ ಲಾಕ್‌ಡೌನ್‌ಗೆ ಕರೆ ನೀಡಿದ್ದಾರೆ. ವೈರಸ್ ಹರಡುವುದನ್ನು ತಡೆಯಲು ಕೆಲಸದ ಸ್ಥಳಗಳನ್ನು ಘಟಕಗಳಿಂದ ಪ್ರತ್ಯೇಕಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಅಧಿಕೃತ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ವಿಶ್ವಸಂಸ್ಥೆ ಬೆಂಬಲಿತ COVAX ವಿತರಣಾ ಕಾರ್ಯಕ್ರಮವು ನೀಡುವ ಲಸಿಕೆಗಳನ್ನು ಅದರ ಸರ್ಕಾರವು ದೂರವಿಟ್ಟ ನಂತರ, ದೇಶದ 26 ಮಿಲಿಯನ್ ಜನಸಂಖ್ಯೆಯಲ್ಲಿ ಬಹುಪಾಲು ಮಂದಿ ಲಸಿಕೆಯನ್ನು ಹೊಂದಿಲ್ಲ ಎಂದು ನಂಬಲಾಗಿದೆ.