ಚೀನಾ: ರನ್ ವೇನಲ್ಲಿ ಧಗಧಗನೆ ಹೊತ್ತಿ ಉರಿದ ಟಿಬೆಟ್ ಏರ್ಲೈನ್ಸ್ ವಿಮಾನ, ಹಲವು ಪ್ರಯಾಣಿಕರಿಗೆ ಗಾಯ- ವಿಡಿಯೋ ವೈರಲ್
ಚೀನಾದ ಚಾಂಗ್ ಕಿಂಗ್ ನಲ್ಲಿ ಇಂದು ಬೆಳಗ್ಗೆ ಭಾರೀ ಅವಘಡವೊಂದು ತಪ್ಪಿದೆ. ಟಿಬೆಟ್ ಏರ್ ಲೈನ್ಸ್ ನ ವಿಮಾನವೊಂದು ಟೇಕ್ ಆಫ್ ಆಗುವ ವೇಳೆ ರನ್ ವೇನಲ್ಲಿ ಹೊತ್ತಿ ಉರಿದಿದೆ. ಚೀನಾಕ್ಕೆ ಸೇರಿದ ಜೋಂಗ್ ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಈ ಅವಘಡ ನಡೆದಿದೆ.
Published: 12th May 2022 11:18 AM | Last Updated: 12th May 2022 11:18 AM | A+A A-

ಟಿಬೆಟ್ ಏರ್ ಲೈನ್ಸ್ ವಿಮಾನ
ಬೀಜಿಂಗ್: ಚೀನಾದ ಚಾಂಗ್ ಕಿಂಗ್ ನಲ್ಲಿ ಇಂದು ಬೆಳಗ್ಗೆ ಭಾರೀ ಅವಘಡವೊಂದು ತಪ್ಪಿದೆ. ಟಿಬೆಟ್ ಏರ್ ಲೈನ್ಸ್ ನ ವಿಮಾನವೊಂದು ಟೇಕ್ ಆಫ್ ಆಗುವ ವೇಳೆ ರನ್ ವೇನಲ್ಲಿ ಹೊತ್ತಿ ಉರಿದಿದೆ. ಚೀನಾಕ್ಕೆ ಸೇರಿದ ಜೋಂಗ್ ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಈ ಅವಘಡ ನಡೆದಿದೆ.
ಚೀನಾದ ಅಧಿಕೃತ ಪತ್ರಿಕೆ ಪೀಪಲ್ಸ್ ಡೈಲಿ ಪ್ರಕಾರ, ಈ ವಿಮಾನದಲ್ಲಿ 113 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿ ಇದ್ದರು ಎನ್ನಲಾಗಿದ್ದು, 40 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏರ್ ಬಸ್ ಎ319 ವಿಮಾನ ಚೋಂಗ್ ಕಿಂಗ್ ನಿಂದ ಟಿಬೆಟ್ ನ ರಾಜಧಾನಿ ಲ್ಹಾಸಾಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಮಾನ ಬೆಂಕಿಯನ್ನು ಉರಿಯುತ್ತಿರುವುದನ್ನು ಕಾಣಬಹುದು.
Tibet Airlines TV9833/A319/B-6425 from Chongqing to Nyingchi was on fire during take-off this morning, details still not known. CKG/ZUCK closed for now. pic.twitter.com/CPL47fmfVk
— FATIII Aviation (@FATIIIAviation) May 12, 2022