ಉಕ್ರೇನ್ ಯುದ್ಧ: ಖಾರ್ಕಿವ್ ನಗರದಿಂದ ಹಿಂದೆ ಸರಿದ ರಷ್ಯಾ ಸೇನೆ
ವಾರಗಳ ನಡೆದ ಭಾರೀ ಬಾಂಬ್ ದಾಳಿಯ ನಂತರ ರಷ್ಯಾದ ಸೇನಾ ಪಡೆಗಳು ಉಕ್ರೇನ್ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ನಿಂದ ಹಿಂದೆ ಸರಿಯುತ್ತಿವೆ ಎಂದು ಉಕ್ರೇನಿಯನ್ ಮಿಲಿಟರಿ ಶನಿವಾರ ಹೇಳಿದೆ.
Published: 14th May 2022 07:01 PM | Last Updated: 14th May 2022 07:03 PM | A+A A-

ಉಕ್ರೇನ್ ನಲ್ಲಿ ರಷ್ಯಾದ ಮಿಲಿಟರಿ ವಾಹನ
ಕೈವ್: ವಾರಗಳ ಕಾಲ ನಡೆದ ಭಾರೀ ಬಾಂಬ್ ದಾಳಿಯ ನಂತರ ರಷ್ಯಾದ ಸೇನಾ ಪಡೆಗಳು ಉಕ್ರೇನ್ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ನಿಂದ ಹಿಂದೆ ಸರಿಯುತ್ತಿವೆ ಎಂದು ಉಕ್ರೇನಿಯನ್ ಮಿಲಿಟರಿ ಶನಿವಾರ ಹೇಳಿದೆ. ಕೀವ್ ಮತ್ತು ಮಾಸ್ಕೋ ಪಡೆಗಳು ಈಗ ದೇಶದ ಪೂರ್ವಕ್ಕೆ ಗ್ರೈಂಡಿಂಗ್ ಯುದ್ಧದಲ್ಲಿ ತೊಡಗಿವೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ಸುಮಾರು ಒಂದು ತಿಂಗಳ ನಂತರ ಉಕ್ರೇನ್ ದೇಶದ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಖಾರ್ಕಿವ್ ನಗರವನ್ನು ಮರಳಿ ತನ್ನ ವಶಕ್ಕೆ ಪಡೆದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.
ಇದನ್ನು ಓದಿ: ಪೂರ್ವ ಉಕ್ರೇನ್ ನ ಶಾಲೆಯ ಮೇಲೆ ವಾಯುದಾಳಿ: 60 ಮಂದಿ ಮೃತಪಟ್ಟಿರುವ ಶಂಕೆ
ಈಶಾನ್ಯ ನಗರವಾದ ಖಾರ್ಕಿವ್ನಿಂದ ರಷ್ಯಾ ಪಡೆಗಳು ಹಿಂದೆ ಸರಿಯುತ್ತಿವೆ ಮತ್ತು ಉಕ್ರೇನ್ ಪಡೆಗಳನ್ನು ತೆರವುಗೊಳಿಸಲು ಹಾಗೂ ಕೋಟೆಗಳನ್ನು ನಾಶಮಾಡಲು" ಪೂರ್ವ ಡೊನೆಟ್ಸ್ಕ್ ಪ್ರಾಂತ್ಯದಲ್ಲಿ ಫಿರಂಗಿ ಮತ್ತು ವಾಯುದಾಳಿ ಪ್ರಾರಂಭಿಸಲು ಪೂರೈಕೆ ಮಾರ್ಗಗಳನ್ನು ಕಾಪಾಡುವುದರ ಮೇಲೆ ರಷ್ಯಾ ಕೇಂದ್ರೀಕರಿಸಿದೆ ಎಂದು ಉಕ್ರೇನ್ ಹೇಳಿದೆ.
ಇದನ್ನು ಓದಿ: ಉಕ್ರೇನ್ ನಿಂದ ಹಿಂತಿರುಗಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಶಾಕಿರಣವಾದ ಸಿದ್ದಗಂಗಾ ಕಾಲೇಜು
ಉಕ್ರೇನ್ "ಯುದ್ಧದ ಹೊಸ - ದೀರ್ಘಾವಧಿಯ - ಹಂತವನ್ನು ಪ್ರವೇಶಿಸುತ್ತಿದೆ" ಎಂದು ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್ ಅವರು ಹೇಳಿದ್ದಾರೆ.