ನನ್ನ ದೇಶ ಕುರಿತು ನನಗೆ ನಾಚಿಕೆಯಾಗುತ್ತಿದೆ: ಉಕ್ರೇನ್ ಯುದ್ಧದಿಂದಾಗಿ ರಷ್ಯಾದ ರಾಯಭಾರಿ ರಾಜೀನಾಮೆ
ಉಕ್ರೇನ್ ನಲ್ಲಿ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರಿಂದ ನಡೆಯುತ್ತಿರುವ ಆಕ್ರಮಣಕಾರಿ ಯುದ್ಧದ ವಿರುದ್ಧ ಜಿನೀವಾದಲ್ಲಿನ ರಷ್ಯಾದ ಹಿರಿಯ ರಾಜತಾಂತ್ರಿಕರೊಬ್ಬರು ವಿದೇಶಿ ಸಹೋದ್ಯೋಗಿಗಳಿಗೆ ಕಟುವಾದ ಪತ್ರವನ್ನು ಕಳುಹಿಸುವ ಮೊದಲು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
Published: 23rd May 2022 11:51 PM | Last Updated: 24th May 2022 12:59 PM | A+A A-

ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್
ದಾವೋಸ್: ಉಕ್ರೇನ್ ನಲ್ಲಿ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರಿಂದ ನಡೆಯುತ್ತಿರುವ ಆಕ್ರಮಣಕಾರಿ ಯುದ್ಧದ ವಿರುದ್ಧ ಜಿನೀವಾದಲ್ಲಿನ ರಷ್ಯಾದ ಹಿರಿಯ ರಾಜತಾಂತ್ರಿಕರೊಬ್ಬರು ವಿದೇಶಿ ಸಹೋದ್ಯೋಗಿಗಳಿಗೆ ಕಟುವಾದ ಪತ್ರವನ್ನು ಕಳುಹಿಸುವ ಮೊದಲು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ರಾಯಭಾರಿ ಅಧಿಕಾರಿಯೊಬ್ಬರು ಇಂಗ್ಲೀಷ್ ಭಾಷೆಯಲ್ಲಿನ ಹೇಳಿಕೆಯನ್ನು ಅಸೋಸಿಯೇಟೆಡ್ ಪ್ರೆಸ್ ಗೆ ಕಳುಹಿಸಿದ ನಂತರ 41 ವರ್ಷದ ಬೋರಿಸ್ ಬೊಂಡರೆವ್ ತಮ್ಮ ರಾಜೀನಾಮೆಯನ್ನು ದೃಢಪಡಿಸಿದರು.
ನನ್ನ ರಾಜತಾಂತ್ರಿಕ ವೃತ್ತಿಜೀವನದ ಇಪ್ಪತ್ತು ವರ್ಷಗಳ ಕಾಲ ನಾನು ನಮ್ಮ ವಿದೇಶಾಂಗ ನೀತಿಯ ವಿಭಿನ್ನ ತಿರುವುಗಳನ್ನು ನೋಡಿದ್ದೇನೆ, ಆದರೆ ಈ ವರ್ಷದ ಫೆಬ್ರವರಿ 24 ರಂತೆ ನಾನು ಎಂದಿಗೂ ನನ್ನ ದೇಶದ ಬಗ್ಗೆ ನಾಚಿಕೆಪಡಲಿಲ್ಲ ಎಂದು ಅವರು ರಷ್ಯಾದ ಆಕ್ರಮಣದ ದಿನಾಂಕವನ್ನು ಉಲ್ಲೇಖಿಸಿದ್ದಾರೆ.
ಜಿನೀವಾದಲ್ಲಿ ರಷ್ಯಾದ ರಾಜತಾಂತ್ರಿಕ ಅಧಿಕಾರಿಯಾಗಿದ್ದ ಬೊಂಡರೆವ್, ವಿದೇಶಿ ಸಹೋದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ತನ್ನ ರಾಜೀನಾಮೆ ಬಗ್ಗೆ ಖಚಿತಪಡಿಸಿದ್ದಾರೆ. ಇಂದು, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಜತಾಂತ್ರಿಕತೆಯ ಬಗ್ಗೆಇಲ್ಲ, ಇದು ಯುದ್ಧ, ಸುಳ್ಳು ಮತ್ತು ದ್ವೇಷಕ್ಕೆ ಸಂಬಂಧಿಸಿದೆ ಎಂದು ಅವರು ಹೇಳಿದ್ದಾರೆ. ಜಿನೀವಾವನ್ನು ತೊರೆಯುವ ಯಾವುದೇ ಯೋಜನೆ ಇಲ್ಲ ಎಂದು ಅವರು ತಿಳಿಸಿದ್ದಾರೆ.