ರಷ್ಯಾ ನೇಮಿಸಿದ್ದ ಉಕ್ರೇನ್ ನ ಎನರ್ಹೋಡರ್ ನಗರದ ಮೇಯರ್ ಸ್ಫೋಟದಲ್ಲಿ ಗಾಯ- ವರದಿಗಳು
ರಷ್ಯಾದಿಂದ ನೇಮಕವಾಗಿದ್ದ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಸ್ಥಳವಾದ ಉಕ್ರೇನ್ನ ಎನರ್ಹೋಡರ್ ನಗರದ ಮೇಯರ್ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿ ಮತ್ತು ರಷ್ಯಾದ ನ್ಯೂಸ್ ಏಜೆನ್ಸಿಗಳು ಭಾನುವಾರ ತಿಳಿಸಿವೆ.
Published: 23rd May 2022 12:35 AM | Last Updated: 23rd May 2022 01:50 PM | A+A A-

ಕರ್ತವ್ಯನಿರತ ಉಕ್ರೇನ್ ಯೋಧನ ಚಿತ್ರ
ಮಾಸ್ಕೋ: ರಷ್ಯಾದಿಂದ ನೇಮಕವಾಗಿದ್ದ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಸ್ಥಳವಾದ ಉಕ್ರೇನ್ನ ಎನರ್ಹೋಡರ್ ನಗರದ ಮೇಯರ್ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿ ಮತ್ತು ರಷ್ಯಾದ ನ್ಯೂಸ್ ಏಜೆನ್ಸಿಗಳು ಭಾನುವಾರ ತಿಳಿಸಿವೆ.
ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಚರಣೆ ಭಾಗವಾಗಿ ಎನರ್ಹೋಡರ್ ನಗರ ಹಾಗೂ ಅದರ ಹತ್ತಿರದಲ್ಲಿದ್ದ ಜಪೋರಿಝಿಯಾ ಪರಮಾಣು ಸ್ಥಾವರವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಆಂಡ್ರೆ ಶೆವ್ಚಿಕ್ ಅವರನ್ನು ಎನರ್ಹೋಡರ್ನ ಮೇಯರ್ ಆಗಿ ನೇಮಿಸಲಾಗಿತ್ತು.
ಸ್ಫೋಟದ ಸಮಯದಲ್ಲಿ ಶೆವ್ಚಿಕ್ ಮತ್ತು ಅವರ ಅಂಗರಕ್ಷಕರು ಗಾಯಗೊಂಡಿದ್ದಾರೆ ಎಂದು ನಮಗೆ ನಿಖರವಾದ ಮಾಹಿತಿ ತಿಳಿದುಬಂದಿದೆ ಎಂದು ಎನರ್ಹೋಡರ್ ಚುನಾಯಿತ ಮೇಯರ್ ಡಿಮಿಟ್ರೋ ಓರ್ಲೋವ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜತಾಂತ್ರಿಕತೆಯಿಂದ ಮಾತ್ರ ಯುದ್ಧ ಕೊನೆಗೊಳಿಸಬಹುದು: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ತೀವ್ರವಾಗಿ ಗಾಯಗೊಂಡು ಶೆವ್ಚಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಪರಿಸ್ಥಿತಿ ಹೇಗಿದೆ ಎಂಬುದು ಇನ್ನೂ ತಿಳಿದುಬರಬೇಕಾಗಿದೆ. ಸ್ಫೋಟದಲ್ಲಿ ಬೇರೆ ಯಾರೂ ಗಾಯಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.