ವಾಹ್..!: ಜಪಾನಿ ಮಗು ಬಾಯಲ್ಲಿ ಹಿಂದಿ ಕೇಳಿ ಖುಷಿಪಟ್ಟ ಪ್ರಧಾನಿ ಮೋದಿ

ಕ್ವಾಡ್‌ ರಾಷ್ಟ್ರಗಳ ನಾಯಕರ ಶೃಂಗಸಭೆಯ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಜಪಾನ್​ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು, ಈ ವೇಳೆ ಜಪಾನಿ ಬಾಲಕನೊಬ್ಬ ಭಾರತದ ತ್ರಿವರ್ಣ ಧ್ವಜನದ ಪ್ಲೆಕಾರ್ಡ್​ ಹಿಡಿದು, ಮೋದಿ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ್ದು, ಇದರಿಂದ ಮೋದಿಯವರು ಸಂತಸಗೊಂಡರು.

Published: 23rd May 2022 11:55 AM  |   Last Updated: 23rd May 2022 01:52 PM   |  A+A-


Pm modi

ಬಾಲಕನೊಂದಿಗೆ ಮಾತನಾಡುತ್ತಿರುವ ಪ್ರಧಾನಿ ಮೋದಿ.

Online Desk

ಟೋಕಿಯೋ: ಕ್ವಾಡ್‌ ರಾಷ್ಟ್ರಗಳ ನಾಯಕರ ಶೃಂಗಸಭೆಯ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಜಪಾನ್​ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು, ಟೋಕಿಯೋದಲ್ಲಿ ಮೋದಿಯವರಿಗೆ ಸಂಭ್ರಮದ ಸ್ವಾಗತ ನೀಡಿಲಾಯಿತು. ಈ ವೇಳೆ ಜಪಾನಿ ಬಾಲಕನೊಬ್ಬ ಭಾರತದ ತ್ರಿವರ್ಣ ಧ್ವಜನದ ಪ್ಲೆಕಾರ್ಡ್​ ಹಿಡಿದು, ಮೋದಿ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ್ದು, ಇದರಿಂದ ಮೋದಿಯವರು ಸಂತಸಗೊಂಡರು.

ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಪುಟ್ಟ ಮಕ್ಕಳು ವಿವಿಧ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲಾದ 'ಸ್ವಾಗತ' ಫಲಕಗಳನ್ನು ಹಿಡಿದು ಟೋಕಿಯೋ ವಿಮಾನ ನಿಲ್ದಾಣದಲ್ಲಿ ನಿಂತಿದ್ದರು.

ಇದನ್ನೂ ಓದಿ: ಇಂದಿನಿಂದ ಕ್ವಾಡ್ ಶೃಂಗಸಭೆ: ಟೋಕಿಯೋದಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ

ಇದನ್ನು ನೋಡಿದ ಮೋದಿಯವರು ಮಕ್ಕಳ ಬಳಿ ತೆರಳಿ, ಕೆಲಕಾಲ ಸಂವಾದ ನಡೆಸಿದರು. ಜಪಾನಿನ ವಿಝುಕಿ ಎಂಬ ಬಾಲಕ ಹಿಂದಿ ಭಾಷೆಯಲ್ಲಿ 'ಜಪಾನ್‌ಗೆ ಸ್ವಾಗತ, ದಯವಿಟ್ಟು ನಿಮ್ಮ ಆಟೋಗ್ರಾಫ್​ ಕೊಡಬಹುದೇ? ಎಂದು ಕೇಳಿದ. ಅವನ ಮಾತು ಕೇಳಿದ ಮೋದಿಯವರು, ವಾಹ್! ನೀನು ಎಲ್ಲಿಂದ ಹಿಂದಿ ಕಲಿತೆ?. ನಿನಗೆ ಹಿಂದಿ ಚೆನ್ನಾಗಿ ತಿಳಿದಿದೆಯೇ?' ಎಂದು ಪ್ರಶ್ನಿಸಿದರು. ಬಳಿಕ ಸಂತಸಗೊಂಡು ಬಾಲಕ ಹಿಡಿದಿದ್ದ ಪ್ಲೆಕಾರ್ಡ್'ಗೆ ಆಟೋಗ್ರಾಫ್ ನೀಡಿದರು.

ಇದೇ ರೀತಿ ಮುಂದೆ ನಿಂತಿದ್ದ ಎಲ್ಲಾ ಮಕ್ಕಳನ್ನು ಮಾತನಾಡಿಸುತ್ತಾ, ಆಟೋಗ್ರಾಫ್ ನೀಡುತ್ತಾ ಸಂತಸದಿಂದ ಮುಂದೆ ಸಾಗಿದರು.

ಮೋದಿಯವರೊಂದಿಗೆ ಮಾತನಾಡಿದ ಬಾಲಕ ವಿಝುಕಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ಹಿಂದಿ ಹೆಚ್ಚು ಮಾತನಾಡೋಕೆ ಬರುವುದಿಲ್ಲ. ಆದರೆ ಅರ್ಥವಾಗುತ್ತೆ. ಮುಂದೆ ಇನ್ನೂ ಚೆನ್ನಾಗಿ ಕಲೀತೀನಿ. ಮೋದಿ ಅವರೊಂದಿಗೆ ಮಾತನಾಡೋಕೆ ಅಂತ ಮೂರು ವಾಕ್ಯ ಅಭ್ಯಾಸ ಮಾಡಿಕೊಂಡು ಬಂದಿದ್ದೆ’ ಎಂದು ಹೇಳಿದ್ದಾನೆ.


Stay up to date on all the latest ಅಂತಾರಾಷ್ಟ್ರೀಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp