ಶ್ರೀಲಂಕಾ ಅರ್ಥಿಕ ಬಿಕ್ಕಟ್ಟು: ಇಂಧನಕ್ಕಾಗಿ ಪ್ರಜೆಗಳ ಪರದಾಟ; ಪ್ರತಿ ಲೀಟರ್ ಪೆಟ್ರೋಲ್ ಬೆಲೆ 420 ರೂ, ಡೀಸೆಲ್ 400 ರೂ.
ಶ್ರೀಲಂಕಾ ಅರ್ಥಿಕ ಬಿಕ್ಕಟ್ಟು ಮುಂದುವರೆದಿರುವಂತೆಯೇ ದ್ವೀಪರಾಷ್ಟ್ರದಲ್ಲಿ ಇಂಧನಕ್ಕಾಗಿ ಪ್ರಜೆಗಳ ಪರದಾಟ ಹೆಚ್ಚಾಗಿದ್ದು, ಇಂಧನ ದರಗಳು ಶೇ.24.3ರಿಂದ 38.4ರಷ್ಟು ಅಂದರೆ, ಪ್ರತೀ ಲೀಟರ್ ಪೆಟ್ರೋಲ್ ದರ 420ರೂಗಳಿಗೆ ಮತ್ತು ಪ್ರತೀ ಲೀಟರ್ ಡೀಸೆಲ್ ದರ 400 ರೂಗಳಿಗೆ ಏರಿಕೆಯಾಗಿದೆ.
Published: 24th May 2022 01:24 PM | Last Updated: 24th May 2022 02:20 PM | A+A A-

ಸಂಗ್ರಹ ಚಿತ್ರ
ಕೊಲಂಬೊ: ಶ್ರೀಲಂಕಾ ಅರ್ಥಿಕ ಬಿಕ್ಕಟ್ಟು ಮುಂದುವರೆದಿರುವಂತೆಯೇ ದ್ವೀಪರಾಷ್ಟ್ರದಲ್ಲಿ ಇಂಧನಕ್ಕಾಗಿ ಪ್ರಜೆಗಳ ಪರದಾಟ ಹೆಚ್ಚಾಗಿದ್ದು, ಇಂಧನ ದರಗಳು ಶೇ.24.3ರಿಂದ 38.4ರಷ್ಟು ಅಂದರೆ, ಪ್ರತೀ ಲೀಟರ್ ಪೆಟ್ರೋಲ್ ದರ 420ರೂಗಳಿಗೆ ಮತ್ತು ಪ್ರತೀ ಲೀಟರ್ ಡೀಸೆಲ್ ದರ 400 ರೂಗಳಿಗೆ ಏರಿಕೆಯಾಗಿದೆ.
ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಅಧ್ಯಕ್ಷ ರಾಜಪಕ್ಸ ಸಂಪುಟಕ್ಕೆ 8 ಸಚಿವರ ಸೇರ್ಪಡೆ
ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ಮೀಸಲು ಕೊರತೆಯಿಂದಾಗಿ ದೇಶ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಇದರ ನಡುವೆಯೇ ಮಂಗಳವಾರ ಪೆಟ್ರೋಲ್ ಬೆಲೆಯನ್ನು 24.3% ಮತ್ತು ಡೀಸೆಲ್ ಅನ್ನು 38.4% ರಷ್ಟು ಹೆಚ್ಚಿಸಲಾಗಿದ್ದು, ಇಂಧನ ಬೆಲೆಯಲ್ಲಿ ದಾಖಲೆಯ ಏರಿಕೆಯಾಗಿದೆ. ಏಪ್ರಿಲ್ 19 ರಿಂದ ಎರಡನೇ ಬಾರಿಗೆ ಇಂಧನ ಬೆಲೆ ಏರಿಕೆಯಾಗಿದ್ದು, ಈಗ ಹೆಚ್ಚು ಬಳಕೆಯಾಗುವ ಆಕ್ಟೇನ್ 92 ಪೆಟ್ರೋಲ್ ಬೆಲೆ 420 ರೂಪಾಯಿಗಳು (USD 1.17) ಮತ್ತು ಡೀಸೆಲ್ 400 ರೂಪಾಯಿಗಳು (USD 1.11) ಲೀಟರ್‌ಗೆ ಏರಿಕೆಯಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠವಾಗಿದೆ.
(1) Fuel Price will be revised from 3am today. Fuel pricing formula that was approved by the cabinet was applied to revise the prices. Price revision includes all costs incurred in importing, unloading, distribution to the stations and taxes. Profits not calculated and included.
— Kanchana Wijesekera (@kanchana_wij) May 23, 2022
ಆಕ್ಟೇನ್ 92 ಪೆಟ್ರೋಲ್ ಬೆಲೆಯನ್ನು ಶೇಕಡಾ 24.3ರಷ್ಟು ಅಥವಾ 82 ರೂಪಾಯಿಗಳು ಮತ್ತು ಡೀಸೆಲ್ ಅನ್ನು ಪ್ರತಿ ಲೀಟರ್‌ಗೆ 38.4 ಶೇಕಡಾ ಅಥವಾ 111 ರೂಪಾಯಿಗಳಷ್ಟು ಹೆಚ್ಚಿಸುವ ನಿರ್ಧಾರವನ್ನು ರಾಜ್ಯ ಇಂಧನ ಘಟಕವಾದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (CPC) ತೆಗೆದುಕೊಂಡಿದೆ. ಇಂದು ಮುಂಜಾನೆ 3 ಗಂಟೆಯಿಂದಲೇ ಇಂಧನ ಬೆಲೆ ಪರಿಷ್ಕರಣೆಯಾಗಿದ್ದು, ಕ್ಯಾಬಿನೆಟ್ ಅನುಮೋದಿಸಿದ ಇಂಧನ ಬೆಲೆ ಸೂತ್ರವನ್ನು ಬೆಲೆಗಳನ್ನು ಪರಿಷ್ಕರಿಸಲು ಅನ್ವಯಿಸಲಾಗಿದೆ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಸ್ಕರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಸ್ಥಿತಿಯೂ ಶ್ರೀಲಂಕಾದಂತೆಯೇ ಭಾಸವಾಗುತ್ತಿದೆ: ರಾಹುಲ್ ಗಾಂಧಿ
"ಬೆಲೆ ಪರಿಷ್ಕರಣೆಯು ಆಮದು, ಇಳಿಸುವಿಕೆ, ನಿಲ್ದಾಣಗಳಿಗೆ ವಿತರಣೆ ಮತ್ತು ತೆರಿಗೆಗಳಲ್ಲಿ ತಗಲುವ ಎಲ್ಲಾ ವೆಚ್ಚಗಳನ್ನು ಒಳಗೊಂಡಿರುತ್ತದೆ. ಸಾರಿಗೆ ಮತ್ತು ಇತರ ಸೇವಾ ಶುಲ್ಕಗಳ ಪರಿಷ್ಕರಣೆಗೆ ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ಸೂತ್ರವನ್ನು ಪ್ರತಿ ಹದಿನೈದು ದಿನಗಳು ಅಥವಾ ಮಾಸಿಕವಾಗಿ ಅನ್ವಯಿಸಲಾಗುತ್ತದೆ ಎಂದು ಅವರು ಹೇಳಿದರು.
(3) Public sector workforce will be called to work on the direction of the head of the institute from today. Work from home will be encouraged to minimize the use of fuel and to manage the energy crisis. pic.twitter.com/JVKrmSYnoc
— Kanchana Wijesekera (@kanchana_wij) May 23, 2022
ಕೊರತೆಯಿಂದಾಗಿ ಸಾರ್ವಜನಿಕರು ಇಂಧನ ಕೇಂದ್ರಗಳಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ತೊಂದರೆ ಅನುಭವಿಸುತ್ತಿರುವುದರಿಂದ ಇದೀಗ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಅಂತೆಯೇ ಭಾರತದ ತೈಲ ಪ್ರಮುಖ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಶ್ರೀಲಂಕಾದ ಅಂಗಸಂಸ್ಥೆಯಾದ ಲಂಕಾ ಐಒಸಿ ಕೂಡ ಇಂಧನದ ಚಿಲ್ಲರೆ ಬೆಲೆಯನ್ನು ಹೆಚ್ಚಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ LIOC ನ ಸಿಇಒ ಮನೋಜ್ ಗುಪ್ತಾ ಅವರು, 'ನಾವು CPC ಗೆ ಹೊಂದಿಸಲು ನಮ್ಮ ಬೆಲೆಗಳನ್ನು ಹೆಚ್ಚಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್ ದರ ಬ್ರಿಟನ್, ಜರ್ಮನಿಗಿಂತ ಅಗ್ಗ; ಅಮೆರಿಕ, ಚೀನಾ, ಪಾಕಿಸ್ತಾನ, ಶ್ರೀಲಂಕಾಗಿಂತ ದುಬಾರಿ!
ಏತನ್ಮಧ್ಯೆ, ಆಟೋ-ರಿಕ್ಷಾ ನಿರ್ವಾಹಕರು ಮೊದಲ ಕಿಲೋಮೀಟರ್‌ಗೆ 90 ರೂಪಾಯಿಗಳಿಗೆ ಮತ್ತು ಎರಡನೆಯದಕ್ಕೆ 80 ರೂಪಾಯಿಗಳಿಗೆ ಸುಂಕವನ್ನು ಹೆಚ್ಚಿಸುವುದಾಗಿ ಸಚಿವರು ಹೇಳಿದ್ದಾರೆ. ವೆಚ್ಚವನ್ನು ತಗ್ಗಿಸುವ ಕ್ರಮವಾಗಿ, ಸಂಸ್ಥೆಗಳ ಮುಖ್ಯಸ್ಥರಿಗೆ ದೈಹಿಕವಾಗಿ ವರದಿ ಮಾಡಲು ನೌಕರರು ಅತ್ಯಗತ್ಯ ಎಂದು ವಿವೇಚನೆಯನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಉಳಿದವರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗಿದೆ.
ಲಂಕಾದ ಹಾಲಿ ಪರಿಸ್ಥಿತಿ
ಲಂಕಾ IOC 2002 ರಿಂದ ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂಧನ ಕೊರತೆ ಎದುರಾಗದಂತೆ ತಡೆಯಲು ಕ್ರಮಗಳನ್ನು ಸುಗಮಗೊಳಿಸಲು ಶ್ರೀಲಂಕಾ ವಿವಿಧ ಆಯ್ಕೆಗಳನ್ನು ಪರಿಗಣಿಸುತ್ತಿದೆ, ಏಕೆಂದರೆ ದೇಶವು ತನ್ನ ಆಮದುಗಳಿಗೆ ಪಾವತಿಸಲು ತೀವ್ರ ವಿದೇಶಿ ವಿನಿಮಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ದ್ವೀಪ ರಾಷ್ಟ್ರವು ಅಭೂತಪೂರ್ವ ಆರ್ಥಿಕ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದ್ದು, ಇದು 1948 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರದ ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿದೆ.
ಇದನ್ನೂ ಓದಿ: ಸಂಘರ್ಷ ಪೀಡಿತ ಶ್ರೀಲಂಕಾಗೆ ಮುಂದುವರೆದ ಭಾರತದ ನೆರವಿನ ಹಸ್ತ; ಮತ್ತೆ 4 ಲಕ್ಷ ಮೆಟ್ರಿಕ್ ಟನ್ ಇಂಧನ ಪೂರೈಕೆ!!
ಆಮದುಗಳಿಗೆ ಪಾವತಿಸಲು ಡಾಲರ್‌ಗಳ ಕೊರತೆಯಿಂದಾಗಿ ಇದು ಬಹುತೇಕ ಎಲ್ಲಾ ಅಗತ್ಯ ವಸ್ತುಗಳ ಕೊರತೆಯೊಂದಿಗೆ ದ್ವೀಪರಾಷ್ಟ್ರ ಹೋರಾಡುತ್ತಿದೆ. ವಿದೇಶಿ ಮೀಸಲು ಕೊರತೆಯು ಇಂಧನ, ಅಡುಗೆ ಅನಿಲ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆಗೆ ಕಾರಣವಾಗಿದ್ದು, ಜನ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಖರೀದಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಆರ್ಥಿಕ ಬಿಕ್ಕಟ್ಟು ಇದೀಗ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟನ್ನು ಉಂಟುಮಾಡಿದ್ದು, ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಡ ಹೇರಿದೆ. ಈ ಬಿಕ್ಕಟ್ಟು ಈಗಾಗಲೇ ಅಧ್ಯಕ್ಷರ ಹಿರಿಯ ಸಹೋದರ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಮೇ 9 ರಂದು ರಾಜೀನಾಮೆ ನೀಡುವಂತೆ ಮಾಡಿದೆ. ದ್ವೀಪರಾಷ್ಟ್ರದ ಹಣದುಬ್ಬರ ದರವು 40 ಪ್ರತಿಶತದತ್ತ ಸಾಗುತ್ತಿದ್ದು, ಆಹಾರ, ಇಂಧನ ಮತ್ತು ಔಷಧಿಗಳ ಕೊರತೆ ಮತ್ತು ವಿದ್ಯುತ್ ಕೊರತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕಾರಣವಾಗಿವೆ.